ಮಹಲಿಂಗಪುರ

ಶ್ರಾವಣ ಮಾಸದ ನಿಮಿತ್ಯ ಬನಶಂಕರಿ ದೇವಸ್ಥಾನದಲ್ಲಿ ದೀಪೋತ್ಸವ,

ಶ್ರಾವಣ ಮಾಸದ ನಿಮಿತ್ಯ ಬನಶಂಕರಿ ದೇವಸ್ಥಾನದಲ್ಲಿ ದೀಪೋತ್ಸವ,
ಮಹಾಲಿಂಗಪುರ : ಬನಶಂಕರಿ ದೇವಸ್ತಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡ ದೀಪೆÇೀತ್ಸವ ಕಾರ್ಯಕ್ರಮದಲ್ಲಿ ಸಹಜಾನಂದ ಶ

ವ್ಯಸನದ ಕತ್ತಲೆಯನ್ನು ಹೋಗಲಾಡಿಸಲು ದೀಪೋತ್ಸವ ಮಾಡಬೇಕಿದೆ: ಸಹಜಾನಂದ 

ಮಹಾಲಿಂಗಪುರ05:  ಪ್ರತಿಯೊಬ್ಬರು ತಮ್ಮ ತಮ್ಮಲ್ಲಿರುವ ವ್ಯಸನಗಳ ಮೇಲೆ ಇಂಥ ದೀಪೋತ್ಸವಗಳ ಮೂಲಕ ಬೆಳಕು ಚೆಲ್ಲಿ ವ್ಯಸನದ ಕತ್ತಲೆಯನ್ನು ಹೋಗಲಾಡಿಸಬೇಕು ಮತ್ತು ಆರೋಗ್ಯವಂತರಾಗಿರಲು ದ್ಯಾನ, ಪೂಜೆಗಳಂತ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆ ತಾಯಿ ಬನಶಂಕರಿದೇವಿ ಕೃಪೆಗೆ ಪಾತ್ರರಾಗಬೇಕು ಎಂದು ಸಿದ್ದಾರೋಢ ಬೃಹ್ಮ ವಿದ್ಯಾಶ್ರಮದ ಸಹಜಾನಂದ ಶ್ರೀಗಳು ಹೇಳಿzಅÀರು.

ಸ್ಥಳೀಯ ಬನಶಂಕರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡ ದೀಪೆÇೀತ್ಸವ ಮತ್ತು ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು, ನಮ್ಮ ಜೀವನದಲ್ಲಿರುವ ಅನೇಕ ಸಮಸ್ಯೆ ಹಾಗೂ ಕೋವಿಡ್-19 ನಂತ ಭಯಾನಕ ರೋಗಗಳ ನಿವಾರಣೆಗಾಗಿ ತಾಯಿ ಬನಶಂಕರಿದೇವಿ ಮುಂದೆ ದೀಪ ಹಚ್ಚುವ ಮೂಲಕ ನಮ್ಮ ಬಾಳಿನೂದ್ದಕ್ಕೂ ಬೆಳಕು ಮೂಡುವಂತೆ ಮಾಡಬೇಕಿದೆ. ಇಂಥ ಮಹಾನ್ ಕಾರ್ಯ ಮಹಿಳೆಯರಿಂದ ಮಾತ್ರ ಸಾಧ್ಯ. ನಮ್ಮ ದೇಶದಲ್ಲಿ ಇನ್ನೂ ವರೆಗೂ ದಾರ್ಮಿಕ ಕಾರ್ಯಕ್ರಗಳು ಸುಗಮವಾಗಿ ಸಾಗುತ್ತಾ ಬಂದಿವೆ ಎಂದರೆ ಅzರಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಕಾರಣ ಎಲ್ಲ ಮಹಾತಾಯಂದಿರು ಆ ಜಗನ್ಮಾತೆ ಸ್ವರೂಪರಾಗಿರುತ್ತಾರೆ. ಶ್ರಾವಣ ಮಾಸದಲ್ಲಿ ನಿತ್ಯವು ಬಿಟ್ಟು ಬಿಡದೆ ಸಾಕಷ್ಟುಕೆಲಸಗಳಿದ್ದರು ಕೂಡ ದೇವಸ್ಥಾನಗಳಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಆದ್ದರಿಂದ ನಮ್ಮ ದೇಶದಲ್ಲಿ ಧರ್ಮ, ಸಂಸ್ಕೃತಿ ಎನ್ನುವುದು ಉಳಿದಿದೆ ಎಂದರೆ ಅದಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದರು. 

ಈ ಸಂದರ್ಭದಲ್ಲಿ ಸಾವಿರಾರು ಮಹಿಳೆಯರಿಂದ ದೀಪ ಹಚ್ಚು ಮೂಲಕ ದೀಪೆÇೀತ್ಸವ ಕಾರ್ಯಕ್ರಮವನ್ನು ನಡೆಸಿ, ಬನಶಂಕರಿದೇವಿ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ನಂತರ ಖ್ಯಾತ ಹಿಂದೂಸ್ತಾನಿ ಸಂಗೀತ ಗಾಯಕರಾದ ರವಿಂದ್ರ ಸೋರಗಾಂವಿಯವರಿಂದ ಸಂಗೀತ ಕಾರ್ಯಕ್ರಮ, ಬನಶಂಕರಿ ದೇವಿ ಆಡಳಿತ ಮಂಡಳಿಯಿಂದ ಡಾ. ಪದ್ಮಜೀತ ನಾಡಗೌಡಪಾಟೀಲ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು ಮತ್ತು ಶಂಕರ ಅಂಬಿಯವರಿಂದ ಈ ಕಾರ್ಯಕ್ರಮಕ್ಕೆ ಬಂದ ಎಲ್ಲ ಭಕ್ತಾಧಿಗಳಿಗೆ ಪ್ರಸಾದ ಸೇವೆ ಮಾಡಲಾಗಿತ್ತು.

ಗಣ್ಯರಾದ ಮಲ್ಲಪ್ಪ ಬಾವಿಕಟ್ಟಿ, ಶ್ರೀಶೈಲಪ್ಪ ಬಾಡನವರ, ಲಕ್ಕಪ್ಪ ಚಮಕೇರಿ, ಶಂಕರ ಸೋರಗಾಂವಿ, ಎಂ.ಐ.ಕೋಳಿಗುಡ್ಡ, ಎಪ್.ಟಿ.ಸಂಶಿ, ಶ್ರೀಶೈಲ ಕಿರಗಟಗಿ, ಸುನೀಲ ಜಮಖಂಡಿ, ವಿನೋದ ಚಮಕೇರಿ, ಪ್ರಕಾಶ ಬಾಡನವರ, ಪರಪ್ಪ ಬೆಳಗಲಿ, ನಾರಾಯಣ ಕಿರಗಿ, ಗುರುನಾಥ ಜಮಖಂಡಿ, ಚಂದ್ರ ಕಾಗಿ, ಸತೀಶ ಸೋರಗಾಂವಿ, ರವಿ ಬಾಡಗಿ, ಸಂಜು ಅಂಬಿ, ರಾಜು ಭಾಪ್ರಿ, ಮಾನಿಂಗ ಹಿಕಡಿ, ಶಿವಾನಂದ ಕಿತ್ತೂರ ಸೇರಿದಂತೆ ಹಲವರು ಇದ್ದರು.

ಸುದ್ದಿ ಓದಿ