ದೀಪಿಕಾ ಜೆಎನ್ ಯುಗೆ ಭೇಟಿ ನೀಡಿದ್ದು "ಪ್ರಚಾರಕ್ಕಾಗಿ"!
ಗುವಾಹಟಿ, ಜ 9 ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನವದೆಹಲಿಯ ಜವಹರ್ ಲಾಲ್ ವಿಶ್ವವಿದ್ಯಾನಿಲಯಕ್ಕೆ (ಜೆಎನ್ ಯು) ಭೇಟಿ ನೀಡಿದ್ದು ಪಬ್ಲಿಸಿಟಿ ಸ್ಟಂಟ್ ಎಂದು ಅಸ್ಸಾಂ ನ ಹಿರಿಯ ಬಿಜೆಪಿ ನಾಯಕ ಹಿಮಂತ ವಿಶ್ವ ಶರ್ಮಾ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರನಟರಿಗೆ ಪ್ರಕ್ಷುಬ್ಧ ವಾತಾವರಣಕ್ಕೆ ಭೇಟಿ ನೀಡುವ ಹವ್ಯಾಸವಿದೆ. ಅದರಲ್ಲೂ ಅವರ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಬಹುದೊಡ್ಡ ವಿವಾದದ ಅಗತ್ಯವಿರುತ್ತದೆ ಎಂದಿದ್ದಾರೆ.
ದೀಪಿಕಾ ಜೆಎನ್ ಯುಗೆ ಭೇಟಿ ನೀಡಿದ್ದು ಮಾಧ್ಯಮದ ಗಮನ ಸೆಳೆಯಲು ಎಂದಿದ್ದಾರೆ.
ತಮ್ಮ "ಛಪಕ್ " ಚಿತ್ರದ ಪ್ರಚಾರಕ್ಕಾಗಿ ದೆಹಲಿಯಲ್ಲಿದ್ದ ದೀಪಿಕಾ, ಜೆಎನ್ ಯುಗೆ ಭೇಟಿ ನೀಡಿ ಹಲ್ಲೆಗೊಳಗಾದ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದರು.