ಮಹಲಿಂಗಪುರ

ಯುವತಿ ಕಾಣೆ, ಪ್ರಕರಣ ದಾಖಲು

ಯುವತಿ ಕಾಣೆ, ಪ್ರಕರಣ ದಾಖಲು
ದೀಪಾ ಮಹಾಲಿಂಗಪ್ಪ ಮುಂಜಿ ಭಾವಚಿತ್ರ.

ಮಹಾಲಿಂಗಪುರ23: ಸ್ಥಳೀಯ ಬಸವ ನಗರ ಬಡಾವಣೆಯ ನಿವಾಸಿ ಮಹಾಲಿಂಗಪ್ಪ ಮುಂಜಿ ಅವರ ಮಗಳು ದೀಪಾ (20) ಸೋಮವಾರ ಮಧ್ಯಾಹ್ನದಿಂದ ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಡಿ. 20 ರ ಮಧ್ಯಾಹ್ನ 3:30 ಗಂಟೆಗೆ ಬಹಿರ್ದೆಸೆಗೆ ತೆರಳುವುದಾಗಿ ಹೇಳಿ ಮನೆಯಿಂದ ಹೋದ ದೀಪಾ ಮರಳಿ ಬಂದಿರುವುದಿಲ್ಲವೆಂದು ಪ್ರಕರಣ ದಾಖಲಿಸಿ ಪತ್ತೆಹಚ್ಚಲು ಕೋರಿದ್ದಾರೆ.  

ಚಹರೆ: 5.5 ಅಡಿ ಎತ್ತರ, ಗೋದಿಗೆಂಪು ಮೈಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು, ಎಡಗೈ ಹೆಬ್ಬೆರಳಿನ ಮೇಲೆ ಓಂ ಅಂತ ಅಚ್ಚೆ ಹಾಕಿಸಿರುತ್ತಾಳೆ. ಕನ್ನಡ, ಹಿಂದಿ, ಮರಾಠಿ ಮಾತನಾಡಬಲ್ಲವಳಾಗಿದ್ದು, ಹೋಗುವಾಗ ನೀಲಿಬಣ್ಣದ ಚೂಡಿದಾರ್ ಟಾಪ್ ಹಾಗೂ ಹಾಗೂ ಕಪ್ಪುಬಣ್ಣದ ಪೈಜಾಮ ಮತ್ತು ವೇಲ್ ಧರಿಸಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾರೆ.  

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು , ಸುಳಿವು ಸಿಕ್ಕಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ಬಾಗಲಕೋಟೆ:08354235079, ಡಿವೈಎಸ್ಪಿ ಜಮಖಂಡಿ:08353230114, ಸರ್ಕಲ್ ಇನ್ಸ್ಪೆಕ್ಟರ್ ಮುಧೋಳ: 08350280103, ಸಬ್ ಇನ್ಸ್ಪೆಕ್ಟರ್ ಮಹಾಲಿಂಗಪುರ ಇವರನ್ನು ಸಂಪರ್ಕಿಸಲು ತಿಳಿಸಿದ್ದಾರೆ.  

ಸುದ್ದಿ ಓದಿ