ಅಲಂಕೃತ ದೀಪಗಳ ಲೋಕಾರ್ಪಣೆ
ಮಹಾಲಿಂಗಪುರ, 17 : ಸ್ಥಳೀಯ ಢವಳೇಶ್ವರ ಜೋಡು ರಸ್ತೆಯ ವಿಭಜಕದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅಳವಡಿಸಲಾಗಿರುವ ಅಲಂಕೃತ ದೀಪಗಳನ್ನು ಪುರಸಭಾ ಅಧ್ಯಕ್ಷ ಯಲ್ಲನಗೌಡ ಪಾಟೀಲ ಉದ್ಘಾಟಿಸಿದರು.
ಸೋಮವಾರ ಸಂಜೆ 6 ಗಂಟೆಗೆ ವಿದ್ಯುತ್ ದೀಪಗಳನ್ನು ಹೊತ್ತಿಸಿ ಲೋಕಾರೆ್ಣ ಮಾಡಿದರು. ರಬಕವಿ ಬನಹಟ್ಟಿ ತಾಲೂಕಿನ ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಲವಂತಗೌಡ ಪಾಟೀಲ, ಮುಖಂಡರಾದ ಶೇಖರ ಅಂಗಡಿ, ಮುಸ್ತಾಕ ಚಿಕ್ಕೋಡಿ, ಅರ್ಜುನ ದೊಡಮನಿ, ನಿಂಗಪ್ಪ ಬಾಳಿಕಾಯಿ, ಸುನಿಲಗೌಡ ಪಾಟೀಲ, ಅರ್ಜುನ ಮೋಪಗಾರ, ಮಹಾಲಿಂಗ ಮಾಳಿ, ವಿಜುಗೌಡ ಪಾಟೀಲ, ಲಕ್ಷ್ಮಣ ಮಾಂಗ, ವಿಠ್ಠಲ ಕುಳಲಿ, ಸದಾಶಿವ ಗೊಬ್ಬರದ, ರಾಮಣ್ಣ ಹಟ್ಟಿ, ಸಂಗಪ್ಪ ಮಟಗಾರ, ಪ್ರಭು ಮಲಾಬದಿ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಚಿದಾನಂದ ಮಠಪತಿ ಇತರರಿದ್ದರು.