ಮುದ್ದೆಬಿಹಾಲ್

ಮುದ್ದೇಬಿಹಾಳ ತಾಲೂಕನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಿ

ಮುದ್ದೇಬಿಹಾಳ ತಾಲೂಕನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಿ

ಪರುಶುರಾಮ ಕೊಣ್ಣೂರ

ಮುದ್ದೇಬಿಹಾಳ: ಸಧ್ಯ ಈಗೀರುವ ಮುದ್ದೇಬಿಹಾಳ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದರೇ ಸರ್ವತೋಮುಖ ಅಭಿವೃದ್ಧಿಯಾಗುವುದರಲ್ಲಿ ಸಂದೇಹವೇ ಇಲ್ಲ ಎಂಬ ಮಾತುಗಳು ಸಧ್ಯ ತಾಲೂಕಿನ ಬಹುತೇಕ ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ಸ್ವಾತಂತ್ರ ನಂತರವೂ ಮುದ್ದೇಬಿಹಾಳ ತಾಲೂಕು ಅಭಿವೃದ್ಧಿಯಿಂದ ಮುಂದೆ ಬಂದಿಲ್ಲ ಎಂಬುದಕ್ಕೆ ಪ್ರತ್ಯಕ್ಷ ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಸಂಚರಿಸಿದರೇ ಅಥರ್ೈಸಿಕೊಳ್ಳಬಹುದಾಗಿ.

 ಈ ಮೊದಲು ಇರುವ ಮುದ್ದೇಬಿಹಾಳ, ವಿಜಯಪುರ, ಬಸವನಬಾಗೇವಾಡಿ, ಇಂಡಿ, ಸಿಂದಗಿ ತಾಲೂಕುಗಳ ಜೊತೆಗೆ ಹೊಸದಾಗಿ ರಚಿತವಾದ ತಿಕೋಟಾ, ತಾಳಿಕೋಟೆ, ಬಬಲೇಶ್ವರ, ನಿಡಗುಂದಿ, ಕೋಲಾರ, ಚಡಚಣ ಗಳು ಸೇರಿಒಟ್ಟು 12 ತಾಲೂಕುಗಳು ಆಗುತ್ತಿವೆ. ಇದರಿಂದ ಈ ಎಲ್ಲಾ ತಾಲೂಕಿಗೆ ಬೇಕಾದಎಲ್ಲಾ ತಹಶೀಲ್ದಾರರು ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಸೇರಿ ಆಡಳಿತದಲ್ಲಿ ಎಲ್ಲ ರೀತಿಯ ಆಡಳಿತಾಧಿಕಾರಿಗಳು ಸೇರಿದಂತೆ ಹಲವು ಸಿಬ್ಬಂದಿಗಳು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ಕಾರಣ ಈ ಆಡಳಿತವನ್ನು ಸರಳ ಮತ್ತು ಸುಗಮಗೊಳಿಸಲು ಈಗಿರುವ ವಿಜಯಪುರವನ್ನು ವಿಭಜಿಸಿ 6 ತಾಲೂಕುಗಳನ್ನು ಒಳಗೊಂಡ, ಮುದ್ದೇಬಿಹಾಳವನ್ನು ಕೇಂದ್ರವಾಗಿಟ್ಟುಕೊಂಡು ಹೊಸದಾಗಿ ಮುದ್ದೇಬಿಹಾಳ ಜಿಲ್ಲೆಯನ್ನು ರಚಿಸಿದರೇ ಸೂಕ್ತವಾಗಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯ ಸದ್ಯ ಮುದ್ದೇಬಿಹಾಳ ದಿಂದ ವಿಜಯಪುರಕ್ಕೆ ಮತ್ತು ಬಾಗಲಕೋಟೆಗೆ ಹೋಗುವುದಕ್ಕೆ ಸುಮಾರು 80ಕ್ಕಿಂತ ಹೆಚ್ಚು ಕಿಲೋಮೀಟರಇದೇ ಈ ಮಧ್ಯದಲ್ಲಿ ಹಲವಾರ ಗ್ರಾಮಗಳು ಬರುತ್ತವೆ ಮೇಲಾಗಿ ಕೃಷ್ಣಾ ನದಿ ತೀರವೂಕೂಡ ಈ ಭಾಗದಲ್ಲಿಯೇ ಒಂದು ಕಡೆ ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರೀ ಆಣೆಕಟ್ಟು, ಇನ್ನೋಂದು ಕಡೆ ನಾರಾಯಣಪೂರ ಬಸವ ಸಾಗರ ಆಣೇಕಟ್ಟು ಇರುವ ಮಧ್ಯ ಭಾಗದಲ್ಲಿರುವುದರಿಂದ ಮುದ್ದೇಬಿಹಾಳ ಜಿಲ್ಲಾಕೇಂದ್ರ ಮಾಡುವುದುರಿಂದ ಹೆಚ್ಚಿನ ರೀತಿಯಲ್ಲಿ ಸರಕಾರಕ್ಕೆ ಆದಾಯ ಬರುತ್ತದೆ ಮಾತ್ರವಲ್ಲದೇ ಅಭಿವೃದ್ಧಿ ಕೂಡ ಮಾಡಲು ಸಾಧ್ಯ.

ಸದಾ ಬರಗಾಲ ತಾಲೂಕು ಎನ್ನುವ ಹಣೇ ಪಟ್ಟಿಕಟ್ಟಿಕೊಂಡಿರುವ ಮುದ್ದೇಬಿಹಾಳ ಸಧ್ಯ ಜಿಲ್ಲಾ ಕೇಂದ್ರವನ್ನಾಗಿ ಮಾಡಿದ್ದೇ ಆದಲ್ಲಿ ಸರಕಾರದಿಂದ ಹೆಚ್ಚಿನ ಅನುದಾನತರುವ ಮೂಲಕ ಕೃಷ್ಣಾ  ನದಿ ತೀರದ ನೆರೆ ಸಂತ್ರಸ್ತರಿಗೇ ಶಾಶ್ವತ ಪರಿಹಾರಕಲ್ಪಿಸಬಹುದಾಗಿದೆ.

ಪ್ರತಿಯೊಂದು ಸರಕಾರಿ ಕೆಲಸಕ್ಕೆಂದು ವಿಜಯಪುರಜಿಲ್ಲೆಗೆ ಅಲೆದಾಡುವ ಈ ಭಾಗದ ಸುತ್ತಲಿನ ಜನಸಾಮಾನ್ಯರಿಗೆ ಹೆಚ್ಚು ಅನೂಕೂಲವಾಗುವುದರಲ್ಲಿ ಯಾವೂದೇ ಸಂದೇಹವಿಲ್ಲ.


  ಇಡೀ ರಾಜ್ಯದಲ್ಲಿಯೇ ಅತ್ಯಂತ ಸರಳ ಹಾಗೂ ಸಜ್ಜನ ಸೌಮ್ಯ ರಾಜಕಾರಣಕ್ಕೆ ಹೆಸರಾದ ಸ್ಥಳಿಯ ಶಾಸಕ ಸಿ ಎಸ್ ನಾಡಗೌಡರು ರಾಜ್ಯದಲ್ಲಿ ತಮ್ಮದೇ ಸರಕಾರ ಇರುವುದರಿಂದ ಇವರು ಈಗಿರುವ ಮುದ್ದೇಬಿಹಾಳ ತಾಲೂಕನ್ನುಜಿಲ್ಲಾಕೇಂದ್ರವನ್ನಾಗಿ ಮಾಡಬೇಕು ಮತ್ತು ಪಟ್ಟಣಕ್ಕೋಂದು ಮೇಡಿಕಲ್ಕಾಲೇಜು, ಇಂಜನೀಯರ ಕಾಲೇಜ ಮತ್ತುಡೆಂಟೆಲ್ ಕಾಲೇಜು ನೀಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿ ತಂದಿದ್ದದ್ದೇ ಆದಲ್ಲಿಅವರ ಶ್ರಮ ತಾಲೂಕಿನ ಜನಯಾವತ್ತಿಗೂ ಅವರನ್ನು ಕೈಬಿಡುವ ಪ್ರಶ್ನೇ ಮಾತ್ರವಲ್ಲ  ಹೊಸ ಜಿಲ್ಲೆಯ ಮಾಡಿದ್ದು ಇತಿಹಾಸ ಪುಟ ಸೇರುತ್ತದೆ ಎಂಬುದು ಹಲವು ಸಂಘ ಸಂಸ್ಥೆಗಳ ಮುಖಂಡರ ಹಾಗೂ ಸಾಹಿತಿಗಳ ಮನದಾಳದ ಮಾತಾಗಿದೆ.

*

ಮುದ್ದೇಬಿಹಾಳದಿಂದ ವಿಜಯಪುರ ಸುಮಾರು 80 ಕಿಲೋ ಮೀಟರ್ ಗಳ ಅಂತರದದೂರವಿರುವದರಿಂದ ಮುದ್ದೇಬಿಹಾಳ ತಾಲೂಕಿನ ಸುತ್ತಲಿನ ಜನಸಾಮಾನ್ಯರುಜಿಲ್ಲೇಕೇಂದ್ರಕ್ಕೆ ಹೋಗಿ ತಮ್ಮ ಕೆಲಸ ಮಾಡಿಕೊಳ್ಳಲು ತೊಂದರೆಯಾಗುತ್ತದೆ ಹೈದರಾಬಾದ ಕನರ್ಾಟಕ 371 ಜೆ ವ್ಯಾಪ್ತಿಯಲ್ಲಿ ಬರುತ್ತಿದ್ದರೂ ಸೇರ್ಪಡೆ ಮಾಡಲಾಗಲಿಲ್ಲ ಕಾರಣ ಈ ಬಗ್ಗೆ ಸುಮಾರು 10ರಿಂದ 15 ವರ್ಷಗಳಿಂದ ತಾಲೂಕಿನ ಎಲ್ಲ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಮುದ್ದೇಬಿಹಾಳ ತಾಲೂಕನ್ನುಜಿಲ್ಲಾಕೇಂದ್ರವನ್ನಾಗಿ ಮಾಡಬೇಕು ಎಂಬ ಬೇಡಿಕೆಇಡುತ್ತಲೇ ಬಂದಿದ್ದೇವೆಆದರೇ ಪ್ರಸ್ತುತ ಸರಕಾರ ಮನಸ್ಸು ಮಾಡಿದರೇ ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಿದರೇ ಐತಿಹಾಸಿಕ ನಿರ್ಣಯಕೈಗೊಂಡ ಹಾಗೇ ಆಗುತ್ತದೆ.

ವಾಸುದೇವ ಶಾಸ್ತ್ರೀ ಗಣ್ಯ ಉದ್ಯಮಿ ಮುದ್ದೇಬಿಹಾಳ

*

ಈಗೀರುವ ಮುದ್ದೇಬಿಹಾಳ ತಾಲೂಕನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುವುದು ಅತ್ಯಂತ ಸೂಕ್ತವಾಗಿದೆ  ಮುದ್ದೇಬಿಹಾಳ ತಾಲೂಕು ಹಲವಾರು ಶರಣರ ಸಂತರ ಸೂಫಿಗಳ ಜನಿಸಿ ಹೋದ ಐತಿಹಾಸಿಕ ಕುರುಹುಗಳನ್ನು ಹೊಂದಿದ ಕ್ಷೇತ್ರವಾಗಿದ್ದು ಸ್ಥಳಿಯ ಶಾಸಕ ಸಿ ಎಸ್ ನಾಡಗೌಡರು ಸಹ ಅಷ್ಠೇ ಸರಳ ಸ್ವಭಾವ ಸನ್ನಡತೆ ವ್ಯಕ್ತಿತವನ್ನು ಹೊಂದಿದ್ದಾರೆ ಮಾತ್ರವಲ್ಲದೇ ಕಾಂಗ್ರೇಸ್ ಪಕ್ಷದಲ್ಲೇ ಅತ್ಯಂತ ಹಿರಿಯ ರಾಜಕಾರಿಣಿಗಳಲ್ಲೊಬ್ಬರಾಗಿದ್ದಾರೆ ಈ ಹಿನ್ನೇಲೆಯಲ್ಲಿ ಪ್ರಸ್ತುತ ರಾಜ್ಯದಲ್ಲಿ ನಮ್ಮದೇ ಸರಕಾರವಿದೆ ಕಾರಣ ಶಾಸಕರ ಮೂಲಕ ಮುದ್ದೇಬಿಹಾಳ ಕ್ಷೇತ್ರವನ್ನು ಜಿಲ್ಲೇ ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯಿಸುತ್ತೇನೆ .

ಗುರು ತಾರನಾಳ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮುದ್ದೇಬಿಹಾಳ 

ಸುದ್ದಿ ಓದಿ