ಲೋಕಸಭೆ ಚುನಾವಣೆಯಿಂದ ನನ್ನ ರಾಜಕೀಯ ಭವಿಷ್ಯ ನಿರ್ಧಾರ: ಶ್ರೀ ರಾಮುಲು
ಲೋಕದರ್ಶನ ವರದಿಹೂವಿನಹಡಗಲಿ: ’ಈ ಚುನಾವಣೆಯಲ್ಲಿ ನಾನು ಸೋತರೆ ನನ್ನ ರಾಜಕಾರಣ ಶಾಶ್ವತವಾಗಿ ಮುಗಿಯುತ್ತದೆ. ಗೆದ್ದರೆ ಭವಿಷ್ಯ ಉಜ್ವಲಗೊಳ್ಳುತ್ತದೆ. ಇಂತಹ ಸಂದಿಗ್ಧತೆಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಜನರು ನನಗೆ ರಾಜಕೀಯ ಶಕ್ತಿ ತುಂಬಬೇಕು’ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ಬಿ. ಶ್ರೀರಾಮುಲು ಮನವಿ ಮಾಡಿದರು.ಪಟ್ಟಣದ ಶಿವಶಾಂತವೀರ ಸಮುದಾಯ ಭವನದಲ್ಲಿ ಶನಿವಾರ ಬಿಜೆಪಿ ಹಮ್ಮಿಕೊಂಡಿದ್ದ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 35 ವರ್ಷಗಳ ರಾಜಕೀಯದಲ್ಲಿ ಎಂಟು ಚುನಾವಣೆ ಎದುರಿಸಿ ಆರು ಬಾರಿ ಗೆಲುವು ಎರಡರಲ್ಲಿ ಸೋಲು ಕಂಡಿದ್ದೇನೆ ಎಂದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮುಖಂಡರಾದ ಓದೋ ಗಂಗಪ್ಪ, ಎಂ. ಪರಮೇಶ್ವರ್ಪ, ಬಿಜೆಪಿ ಮಂಡಲ ಅಧ್ಯಕ್ಷ ಹಣ್ಣಿ ಶಶಿಧರ ಮಾತನಾಡಿದರು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಬಲ್ಲಾಹುಣ್ಣಿ ರಾಮಣ್ಣ, ಲಿಂಗರಾಜ, ಎಸ್.ಸಂಜೀವರೆಡ್ಡಿ, ಎನ್. ಕೋಟಿಪ್ಪ ಇದ್ದರು.
ಒಂದು ಲಕ್ಷ ಮತಗಳು ಪ್ರಧಾನಿ ಮೋದಿಗೆ ಉಡುಗೊರೆಮೂರನೇ ಬಾರಿಗೆ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಲು ಹಡಗಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರಿಗೆ ಒಂದು ಲಕ್ಷ ಮತಗಳ ಉಡುಗೊರೆ ನೀಡುತ್ತೇವೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಜಾರಿ ದೊಡ್ಡ ಸವಾಲಾಗಿದೆ. ಜನರ ನೋವು, ಸಂಕಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಬರ ನಿರ್ವಹಣೆಗೆ ಹಣ ನೀಡುತ್ತಿಲ್ಲ ಎಂದು ಟೀಕಿಸಿದರು. ವಿಧಾನ ಪರಿಷತ್ ಸದಸ್ಯ ಬಿ. ರವಿಕುಮಾರ್ ಮಾತನಾಡಿದರು.ನಿರ್ಧರಿಸುತ್ತದೆ. ಹೆಚ್ಚು ಬಹುಮತ ಗಳಿಸಲು ನಾನು ಪಶ್ಚಿಮ ತಾಲ್ಲೂಕು ಗಳನ್ನು ನೆಚ್ಚಿಕೊಂಡಿರುವೆ’ ಎಂದರು. ’ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಗದಗ-ಹರಪನಹಳ್ಳಿ ರೈಲು ಮಾರ್ಗ ಸರ್ವೆ ಕಾರ್ಯಕ್ಕೆ ಚಾಲನೆ ಕೊಡಿಸುವೆ. ಅಂಚೆ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸಿಕೊಡುವೆ’ ಎಂದು ಭರವಸೆ ನೀಡಿದರು.ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮುಖಂಡರಾದ ಓದೋ ಗಂಗಪ್ಪ, ಎಂ. ಪರಮೇಶ್ವರ್ಪ, ಬಿಜೆಪಿ ಮಂಡಲ ಅಧ್ಯಕ್ಷ ಹಣ್ಣಿ ಶಶಿಧರ ಮಾತನಾಡಿದರು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಬಲ್ಲಾಹುಣ್ಣಿ ರಾಮಣ್ಣ, ಲಿಂಗರಾಜ, ಎಸ್.ಸಂಜೀವರೆಡ್ಡಿ, ಎನ್. ಕೋಟಿಪ್ಪ ಇದ್ದರು.