ಹಗರಿಬೊಮ್ಮನಹಳ್ಳಿ

ಸಾಲದ ಬಾಧೆ; ರೈತ ಆತ್ಮಹತ್ಯೆ

ಸಾಲದ ಬಾಧೆ; ರೈತ ಆತ್ಮಹತ್ಯೆ

ಹಗರಿಬೊಮ್ಮನಹಳ್ಳಿ. : ತಾಲೂಕಿನ ಮುಟುಗನಹಳ್ಳಿಯಲ್ಲಿ ರೈತನೋರ್ವ ಸಾಲದ ಬಾಧೆಯಿಂದ ಆತ್ಮಹತ್ಯೆಮಾಡಿಕೊಂಡ ಘಟನೆ ಗುರುವಾರ ಸಂಜೆ ಜರುಗಿದೆ. 

ಗ್ರಾಮದ ರೈತ ಗೌಡ್ರು ಚಿದಾನಂದಪ್ಪ(58) ತನಗೆ ಸೇರಿದ ಎರಡು ಎಕರೆ ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡಿದ್ದನು. ಎರಡು ಎಕರೆ ಭೂಮಿ ಸಾಲುವುದಿಲ್ಲವೆಂದು ಮತ್ತೆರಡು ಎಕರೆ ಭೂಮಿ ಲಾವಣಿ ಮಾಡುತ್ತಿದ್ದನು. ಪ್ರತಿವರ್ಷ ಒಂದಿಲ್ಲೊಂದು ಕಾರಣಕ್ಕೆ ಕೃಷಿಯಲ್ಲಿ ನಷ್ಟವಾಗುತ್ತಲೇ ಇದ್ದು, ಸಾಲ ತೀರಿಸಲಾಗದೆ ತನ್ನ ತಂದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಪುತ್ರ ಶಿವಕುಮಾರ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.   

 ಲಾವಣಿ ಹೊಲ ಸೇರಿ 4ಎಕರೆಗೂ ಬ್ಯಾಡಿಗಿ ಮೆಣಸಿನ ಕಾಯಿ ಹಾಕಿ ಬೆಳೆದ ಬೆಳೆಗೆ ರೋಗ ಬಿದ್ದು ಅದನ್ನು ನಿಯಂತ್ರಿಸಲು ಓಷಧಿಗಳನ್ನು ತಂದು ಸಿಂಪಡಿಸಿದರೂ ನಿಯಂತ್ರಣಕ್ಕೆ ಬಾರದೆ ಬೆಳೆ ಸಂಪೂರ್ಣ ನಾಶವಾಗಿ ನಷ್ಟ ಅನುಭವಿಸಿದ್ದು, ಬ್ಯಾಡಗಿಗೆ ಕಳಿಸಿದ ಮೆಣಸಿನಕಾಯಿಗೆ ಬೆಲೆ ಸಿಗದೆ ಕಂಗಲಾದ ರೈತ ಇತ್ತ ಗುರುವಾರ ಸಂಜೆ 4ಗಂಟೆಗೆ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಮಾಡಿಕೊಂಡಿದ್ದಾನೆ. 

ವಿಷ ಸೇವಿಸಿದ ರೈತನನ್ನು ಸರ್ಕಾರಿ ಆಸ್ಪತ್ರೆಗೆ ಕರೆ ತಂದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಮೃತನಿಗೆ  ಪತ್ನಿ, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆಯವರು ಗ್ರಾಮಕ್ಕೆ ಭೇಟೀನೀಡಿ, ಮೃತರ ಮನೆಗೂ ತೆರಳಿ ಮಾಹಿತಿ ಪಡೆದರು.  

ಸುದ್ದಿ ಓದಿ