ಮಹಾಲಿಂಗಪ್ಪ ಘಟ್ನಟ್ಟಿ ನಿಧನ
ಮಹಾಲಿಂಗಪುರ 13: ನಗರದ ಜವಳಿ ಬಜಾರ ನಿವಾಸಿ, ಬಣಜಿಗ ಸಮಾಜದ ಮಹಾಲಿಂಗಪ್ಪ ದುಂಡಪ್ಪ ಘಟ್ನಟ್ಟಿ (68) ಜುಲೈ 12ರಂದು ಸೋಮವಾರ ದಿವಸ ಸ್ವರ್ಗಸ್ಥರಾಗಿದ್ದಾರೆ. ಇವರು ಪತ್ನಿ, ಓರ್ವಪುತ್ರ, ಮೂವರು ಪುತ್ರಿಯರು ಅಲ್ಲದೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಬಣಜಿಗ ಸಮಾಜದ ಮಾಜಿ ಪುರಸಭಾ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಶೇಖರ್ ಅಂಗಡಿ, ಮಹಾಲಿಂಗಣ್ಣ ಕುಳ್ಳೊಳ್ಳಿ, ಮಹಾಲಿಂಗಪ್ಪ ಅವರಾದಿ, ಅಶೋಕ ಅಂಗಡಿ, ಚಂದ್ರು ಗೊಂದಿ, ಮಹಾದೇವ ಬಂಡಿ, ಬಸವರಾಜ ಘಟ್ನಟ್ಟಿ ಇನ್ನಿತರರು ಸಂತಾಪ ಸೂಚಿಸಿದ್ದಾರೆ.