ತಿರುಮಲದಲ್ಲಿ ಕು.ವಿಭಾ ಕುಲಕರ್ಣಿ ಅವರಿಂದ ದಾಸವಾಣಿ ಕಾರ್ಯಕ್ರಮ
ಬಳ್ಳಾರಿ 9: ಇಲ್ಲಿನ ಸಂಗೀತ ಕಲಾವಿದೆ ಕು.ವಿಭಾ ಕುಲಕರ್ಣಿ ಅವರು, ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸನ್ನಿಧಾನದಲ್ಲಿ ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಗಮನಸೆಳೆದಿದ್ದಾರೆ.
ಶ್ರೀ ಕ್ಷೇತ್ರ ತಿರುಮಲದ ಶ್ರೀ ವೆಂಕಟೇಶ್ವರ ಸನ್ನಿಧಾನದ ಆವರಣದಲ್ಲಿ ಟಿಟಿಡಿ ದೇವಸ್ಥಾನದ ಆಡಳಿತ ಮಂಡಳಿ ಅವರು, ಬಳ್ಳಾರಿಯ ಯುವ ಪ್ರತಿಭೆ ಕು.ವಿಭಾ ಕುಲಕರ್ಣಿ ಅವರಿಗೆ ಜೂ.11 ರಂದು ಸಹಸ್ರ ದೀಪಾಲಂಕಾರ ಸೇವೆಯ ವೇಳೆ, ದಾಸವಾಣಿ ಕಾರ್ಯಕ್ರಮ ನಡೆಸಲು ಅವಕಾಶ ಕಲ್ಪಿಸಿದ್ದರು. ಸುಮಧುರ ಕಂಠದಿಂದ ಸುಮಾರು ದೇವರ ಹಾಡುಗಳನ್ನು ಪ್ರಸ್ತುತ ಪಡಿಸಿ ಭಕ್ತಿ ಸಮರ್ಿಸಿದರು.
ದೇಶದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು, ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿಯಲ್ಲಿ ಮಿಂದೆದ್ದರು. ನಂತರ ದಾಸ ಸಾಹಿತ್ಯ ಪ್ರಾಜೆಕ್ಟ್ ನ ಮುಖ್ಯಸ್ಥರು ಕಲಾವಿದೆ ಕು.ವಿಭಾ ಕುಲಕರ್ಣಿ ಹಾಗೂ ತಬಲಾ, ಹಾರ್ಮೋನಿಯಂ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.