ಬೆಳಗಾವಿ

ದರ್ಗಾ ಉರುಸ್ ಮಹೋತ್ಸವ: ಭಕ್ತರ ಭಾವಪೂರ್ಣ ಪಾಲ್ಗೊಳ್ಳುವಿಕೆ

ದರ್ಗಾ ಉರುಸ್ ಮಹೋತ್ಸವ: ಭಕ್ತರ ಭಾವಪೂರ್ಣ ಪಾಲ್ಗೊಳ್ಳುವಿಕೆ


ಸವದತ್ತಿ 24 : ತಾಲೂಕಿನ ಹಿರೇಕುಂಬಿ ಗುಡ್ಡದ ಮೇಲೆ ನೆಲೆಸಿರುವ, ಸರ್ವಧರ್ಮೀಯರ ಸಮನ್ವಯದ ಪ್ರತೀಕವಾದ ಹಜರತ್ ಸಯ್ಯದ ಮಗದುಮಶ್ಯಾಹುಸೇನಿ ಅವರ ವಾರ್ಷಿಕ ಉರುಸ್ ಮಹೋತ್ಸವವು ಸೆಪ್ಟೆಂಬರ್ 23 ರಂದು ಅತ್ಯಂತ ವಿಜೃಂಭಣೆಯಿಂದ ಜರುಗಿತು.ಈ ಧಾರ್ಮಿಕ ಉತ್ಸವದಲ್ಲಿ ಸವದತ್ತಿ ಸುತ್ತಮುತ್ತಲಿನ ಗ್ರಾಮಗಳು ಹಾಗೂ ರಾಜ್ಯದ ನಾನಾ ಜಿಲ್ಲೆಗಳಾದ ಬೆಳಗಾವಿ, ಬೆಂಗಳೂರು, ತುಮಕೂರು, ಧಾರವಾಡ, ಹುಬ್ಬಳ್ಳಿ, ಗದಗ, ನರಗುಂದ, ನವಲಗುಂದ ಮತ್ತಿತರ ಕಡೆಗಳಿಂದ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಗಾಗೆ ಹೂವಿನ ಚಾದರ್ ಸಮರ​‍್ಿಸಿ ತಮ್ಮ ಭಕ್ತಿಭಾವ ಮೆರೆದರು.

ಆಗಮಿಸುವ ಭಕ್ತಾದಿಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಸ್ಥಳೀಯ ದರ್ಗಾ ಕಮಿಟಿಯವರು ಹಾಗೂ ಧರ್ಮ ಗುರುಗಳು ತಿಳಿಸಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದರ್ಶನ ಪಡೆದು ಧನ್ಯತಾ ಭಾವ ಹೊಂದಿದರು. ಸರಿಯಿಲ್ಲದ ರಸ್ತೆಯಿಂದಾಗಿ ವಯಸ್ಸಾದ ಹಿರಿಯ ನಾಗರಿಕರು ಮತ್ತು ಮಹಿಳೆಯರು ಗುಡ್ಡ ಹತ್ತುವಾಗ ನಡೆದುಕೊಂಡು ಹೋಗಲು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಮತ್ತು ಜನಪ್ರತಿನಿಧಿಗಳು ಕೂಡಲೇ ಗಮನಹರಿಸಿ, ದರ್ಗಾ ಸಂಪರ್ಕ ರಸ್ತೆಯನ್ನು ತುರ್ತಾಗಿ ಅಭಿವೃದ್ಧಿಪಡಿಸಬೇಕೆಂದು ಸಾರ್ವಜನಿಕರು ಮತ್ತು ಭಕ್ತವೃಂದ ಬಲವಾಗಿ ಒತ್ತಾಯಿಸಿದ್ದಾರೆ. 


ಸುದ್ದಿ ಓದಿ