ಬ್ಯಾಡ್ಗಿ

21 ಗ್ರಮದಲ್ಲಿ ಮೋಬೈಲ್ ಹಾಗೂ ಟಿವಿಗಳನ್ನು ಸೂಚ್ ಆಫ್ ಮಾಡುವಂತೆ ಡಂಗುರ

21 ಗ್ರಮದಲ್ಲಿ ಮೋಬೈಲ್ ಹಾಗೂ ಟಿವಿಗಳನ್ನು ಸೂಚ್ ಆಫ್ ಮಾಡುವಂತೆ ಡಂಗುರ


         ಬ್ಯಾಡಗಿ 11 : ತಾಲೂಕಿನ 21 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಸುಧಾರಣೆಯ ದೃಷ್ಟಿಯಿಂದ ಹಾಗೂ ವಿಷೇಶವಾಗಿ ಮಕ್ಕಳಿಗೆ ಓದಲು ಅಭಿರುಚಿ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಸಾಯಂಕಾಲ 7 ಗಂಟೆಯಿಂದ 9 ಗಂಟೆಯವರೆಗೆ ಮಕ್ಕಳ ಪರೀಕ್ಷಾ ಸಿದ್ದತೆಯನ್ನು ತೊಡಗಿಸುವುದರಿಂದ ಪೋಷಕರು ಪಾಲಕರು ತಮ್ಮ ಮನೆಗಳಲ್ಲಿ ಮೋಬೈಲ್ ಹಾಗೂ ಟಿವಿಗಳನ್ನು ಸೂಚ್ ಆಫ್ ಮಾಡುವಂತೆ ಹಾಗೂ ದೇವಸ್ಥಾನಗಳಲ್ಲಿ ಇರುವ ಮೈಕಗಳನ್ನು ಬಂದು ಮಾಡಿ ಶಾಂತತೆ ಕಾಪಾಡಲು ಗ್ರಾಮ ಪಂಚಾಯತಿಗಳಿಗೆ ಡಂಗುರ ಸಾರುವ ಮುಖಾಂತರ ಪ್ರಚಾರ ಮಾಡಲು ಸೂಚಿಸಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕೆ ಎಮ್ ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಪತ್ರದ ಮುಖಾಂತರ ಸೂಚಿಸಿದರು.  

         ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳ ಮುಖೋಪಾಧ್ಯರಿಗೆ ಹಾಗೂ ಬಿ ಆರ್ ಸಿ ಮತ್ತು ಸಿ ಆರ್ ಸಿ ಅಧಿಕಾರಿಗಳಿಗೆ ಎಸ ಎಸ್ ಎಲ್ ಸಿ ಪರೀಕ್ಷೆ ಪೂರಕವಾಗಿ ಶಾಲೆಗಳಲ್ಲಿ ಹೆಚ್ಚುವರಿಯಾಗಿ 1 ಗಂಟೆಗಳ ಕಾಲ ಎಸ ಎಸ್ ಎಲ್ ಸಿ ಪರೀಕ್ಷಾ ಸಿದ್ದತೆಯ ಬಗ್ಗೆ ಶಾಲಾ ಮಕ್ಕಳಿಗೆ ದೈರ್ಯ ತುಂಬುವ ಕೆಲಸ ಹಾಗೂ ಪರೀಕ್ಷೆಗಳಲ್ಲಿ ಬರುವಂತಹ ವಿಷಯಗಳನ್ನು ಮರುಪರೀಶೀಲನೆ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಬಿ ಕೋಟಿ ಸಲಹೆ ಸೂಚನೆ ನೀಡಿದರು. 


ಸುದ್ದಿ ಓದಿ