ಮಹಾಮೇಳಾವಾ ಪೂರ್ವಬಾವಿ ಸಭೆಯಲ್ಲಿ ಝಾಪಾಗಳ ದಂಗಲ್ : ಬೀದಿಗೆ ಬಂತು ಎಮ್ ಇಎಸ್ ಒಳಜಗಳ : ಮಾತಿನ ಚಕಮಕಿ, ನಾ ಮ...., ನೀ ಮ..... ಬೈದಾಡಿಕೊಂಡ ಮುಖಂಡರು

ಮಹಾಮೇಳಾವಾ ಪೂರ್ವಬಾವಿ ಸಭೆಯಲ್ಲಿ ಝಾಪಾಗಳ ದಂಗಲ್ : ಬೀದಿಗೆ ಬಂತು ಎಮ್ ಇಎಸ್ ಒಳಜಗಳ : ಮಾತಿನ ಚಕಮಕಿ, ನಾ ಮ...., ನೀ ಮ..... ಬೈದಾಡಿಕೊಂಡ ಮುಖಂಡರು

ಬೆಳಗಾವಿ : ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಗಾದೆ ಮಾತಿನಂತೆ ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಎಮ್ ಇಎಸ್ ನ ಮುಖಂಡರ ಒಳಜಗಳ ಈಗ ಮತ್ತೆ ಬೀದಿಗೆ ಬಂದಿದೆ. 

     ಹೌದು ಓದುಗರೆ ರಾಜ್ಯ ಸರಕಾರ ಬರುವ ಡಿಸೆಂಬರ್ 4ರಿಂದ ಬೆಳಗಾವಿಯಲ್ಲಿ 10 ದಿನಗಳ ಕಾಲ ಚಳಿಗಾಲ ಅಧಿವೇಶನ ನಡೆಸಲು ಮುಂದಾಗಿದೆ. ಆದರೆ ಅಧಿವೇಶನ ವಿರುದ್ದವಾಗಿ ಕನ್ನಡದ ನೆಲದಲ್ಲಿ ನಿಂತು ಮಹಾಮೇಳಾವಾ ಆಯೋಜನೆ ಮಾಡಲು ಎಮ್ ಇಎಸ್ ತಯಾರಿ ನಡೆಸಿಕೊಳ್ಳಲು‌ ಮಂದಾಗಿದೆ. 

    ಅಧಿವೇಶನದ ವಿರುದ್ದ ಎಮ್ ಇಎಸ್ ನಡೆಸಲಿರುವ ಮಹಾಮೇಳಾವಾ ನಡೆಸುವ ಕುರಿತು ಬೆಳಗಾವಿಯ ಮರಾಠಾ ಮಂದಿರದಲ್ಲಿ ಬುಧವಾರ ಮಧ್ಯಾಹ್ನ ಝಾಪಾ ಮುಖಂಡರು ಪೂರ್ವ ಬಾವಿ ಸಭೆ ಕರೆದಿದ್ದರು. 

    ಈ ಸಭೆಯು ಪ್ರಾರಂಭದಲ್ಲಿ ಝಾಪಾ ಮುಖಂಡರ ನಡುವೆ ಚುನಾವಣೆಯ ಖರ್ಚು ವೆಚ್ಚದ ವಿಷಯವಾಗಿ ಮಾತಿನ ಚಕಮಕಿ ನಡೆದು ಕೊನೆಯಲ್ಲಿ ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗಿದೆ. 

    ಇದರಿಂದ ಕೆಲ ನಾಯಕರು ಮಾತಿನ ಚಕಮಕಿಯಲ್ಲಿ ತೋಡಗಿದ್ದವರನ್ನು  ಸಮಾಧಾನ ಪಡಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಕೆಲ ನಾಯಕರು ನಾ ಮ..... ನೀ ಮ...... ಎಂದು ಬೈದಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

   ಮಾಧ್ಯಮದ ಕ್ಯಾಮೆರಾಗಳು ಮುಂದೆ ಇವೆ ಎನ್ನುವ ವಿಷಯ ಅರಿವಿಲ್ಲದ ಝಾಪಾ ಮುಖಂಡರು ಬೈದಾಡಿಕೊಂಡಿದ್ದಾರೆ. ಇದರಿಂದ ಮಹಾಮೇಳಾವಾ ಸಭೆಯಲ್ಲಿ‌ ಕೆಲಹೊತ್ತು ಗೊಂದಲಮಯ ವಾತಾವರಣದ ನಿರ್ಮಾಣವಾಗಿತ್ತು ಎನ್ನಲಾಗಿದೆ. ಇದರಿಂದ ಎಮ್ ಇಎಸ್ ಒಳಜಗಳವು ಬೀದಿಗೆ ಬಂದಂತಾಗಿದೆ.

ಸುದ್ದಿ ಓದಿ