ಕೆಎಲ್ಇ ಪಾಲಿಟೆಕ್ನಿಕ್ನಲ್ಲಿ ದಾಂಡಿಯಾ ಸ್ಪರ್ಧೆ
ಮಹಾಲಿಂಗಪುರ 21: ಸ್ಥಳೀಯ ಕೆಎಲ್ಇ ಪಾಲಿಟೆಕ್ನಿಕ್ನಲ್ಲಿ ನವರಾತ್ರಿ ನಿಮಿತ್ತ ವಿದ್ಯಾರ್ಥಿಗಳಿಗೆ ದಾಂಡಿಯಾ ಕೋಲಾಟ ಸ್ಪರ್ಧೆ ಏರಿ್ಡಸಲಾಯಿತು.
ಕಾಲೇಜಿನ ಗ್ರಂಥಾಲಯ ಎದುರಿನ ಬಯಲಲ್ಲಿ ಸಿಎಸ್ ವಿಭಾಗದ ಗೀತಾ ನ್ಯಾಮಗೌಡ ತಂಡ, ಇ ಅಂಡ್ ಸಿ ವಿಭಾಗದ ಲಕ್ಷ್ಮೀ ಇಮ್ಮನಗೋಳ ತಂಡ ಹಾಗೂ ಸಿವಿಲ್ ವಿಭಾಗದ ಹೇಮಾ ನಂದಿಕೋಲ ತಂಡದ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ದಾಂಡಿಯಾ ನೃತ್ಯ ಪ್ರದರ್ಶಿಸಿದರು. ಸುತ್ತಲೂ ನೆರೆದ ನೂರಾರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಕಣ್ಮನ ಸೆಳೆದರು.
ಸಿವಿಲ್ ವಿಭಾಗದ ಯುವಕರು ಬೇರೆ ತರಗತಿಯ ಯುವತಿಯ ಕಡೆಯಿಂದ ನೃತ್ಯ ಕಲಿತು ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು. ಸಿಎಸ್ ಮತ್ತು ಇ ಅಂಡ್ ಸಿ ವಿಭಾಗ ಪ್ರಥಮ ಸ್ಥಾನ ಹಂಚಿಕೊಂಡರೆ ಸಿವಿಲ್ ವಿಭಾಗ ದ್ವಿತೀಯ ಸ್ಥಾನ ಪಡೆಯಿತು. ಪ್ರಾಚಾರ್ಯ ಎಸ್.ಐ.ಕುಂದಗೋಳ ವಿದ್ಯಾರ್ಥಿಗಳ ಸಾಂಪ್ರದಾಯಿಕ ನೃತ್ಯ ಕಂಡು ಪ್ರಶಂಸೆ ವ್ಯಕ್ತಪಡಿಸಿದರು.
ವಂದನಾ ಪಸಾರ, ನಿರ್ಮಲಾ ಫಕೀರಪುರ, ಗೀತಾ ಉಪಾಸೆ ನಿರ್ಣಾಯಕರಾಗಿದ್ದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ಅಂಜನಾ ಮಾಲಜ, ಉಮೇಶ ಹಾದಿಮನಿ, ಸುಭಾಸ್ ಮೂಶಿ, ಅಮಿತ ಜಾಧವ, ಸವಿತಾ ಗೊಂದಿ, ಮಿನಾಜ ಅತ್ತಾರ, ಈಶ್ವರ ಹೂಲಿ ಸಂಘಟಿಸಿದ್ದರು.
ಡಿಜೆ ಮೊಳಗಿಸಿ ಕುಣಿದು ಕುಪ್ಪಳಿಸುವ ಡಿಜಿಟಲ್ ಯುಗದಲ್ಲಿ ಬೇಕಾಬಿಟ್ಟಿ ಸ್ಟೆಪ್ ಹಾಕಿ ನವರಂಗಿ ಆಟ ಆಡುವ ಯುವಕರ ಮಧ್ಯೆ ನಮ್ಮ ಪಾಲಿಟೆಕ್ನಿಕ್ ಯುವಕ ಯುವತಿಯರು ಸಾಂಪ್ರದಾಯಿಕ ಉಡುಗೆಯಲ್ಲಿ ಸುಮಧುರ ಹಿನ್ನೆಲೆ ಸಾಂಗ್ಗೆ ತಕ್ಕಂತೆ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿ ಭಾರತೀಯ ಸಂಸ್ಕೃತಿ ಸ್ಮರಿಸಿದ್ದು ನಿಜಕ್ಕೂ ಹೆಮ್ಮೆ ಎನಿಸಿತು.
- ಎಸ್.ಐ.ಕುಂದಗೋಳ
ಪ್ರಾಚಾರ್ಯ ಕೆಎಲ್ಇ ಪಾಲಿಟೆಕ್ನಿಕ್ ಮಹಾಲಿಂಗಪುರ