ಅಂತರ್ ರಾಷ್ಟ್ರೀಯ ನೃತ್ಯ ದಿನಾಚರಣೆ ಅಂಗವಾಗಿ ನೃತ್ಯ ಕಲಾವಿದರಿಗೆ ಸನ್ಮಾನ
ಬಳ್ಳಾರಿ: ನಗರದ ಸಾಂಸ್ಕೃತಿಕ ಸಮುಚ್ಚಯ ಆವರಣದಲ್ಲಿನ ಹೊಂಗಿರಣ ಸಭಾಂಗಣದಲ್ಲಿ ಶುಕ್ರವಾರ ಅಂತರ್ ರಾಷ್ಟ್ರೀಯ ನೃತ್ಯ ದಿನಾಚರಣೆ ಪ್ರಯುಕ್ತ ಬಳ್ಳಾರಿ ಬೆಳಗಾಯಿತು ಪತ್ರಿಕೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನೃತ್ಯ ಕಲಾವಿದರಿಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಳ್ಳಾರಿ ಬೆಳಗಾಯಿತು ಪತ್ರಿಕೆ ಸಹ ಸಂಪಾದಕರಾದ ವಿ.ಅನೂಪ್ ಕುಮಾರ್ ಅವರು ಮಾತನಾಡಿ, ಕಲಾವಿದರನ್ನು ಪ್ರೋತ್ಸಾಹಿಸುವ, ಯುವ ಪ್ರತಿಭೆಗಳನ್ನು ಗುರುತಿಸುವಂತಹ ಕೆಲಸ ನಮ್ಮೆಲ್ಲರಿಂದ ಆಗಬೇಕಿದೆ ಎಂದರು. ತೂಕ ಕಡಿಮೆಗೊಳಿಸಲು ನೃತ್ಯ ಸಹಕಾರಿ. ಇದರಿಂದ ಒತ್ತಡ ಕಡಿಮೆಯಾಗುತ್ತದೆ. ಹೃದಯಕ್ಕೆ ಒಳ್ಳೆ ವರ್ಕೌಟ್ ಆಗಿ ಕೆಲಸ ಮಾಡುತ್ತದೆ ಎಂದರು. ಕಳೆದ ವರ್ಷದಲ್ಲಿ ದೇಶಕ್ಕೆ ಮಹಾಮಾರಿ ಕೊರೊನಾ ಎನ್ನುವ ಕಾಯಿಲೆ ಒಕ್ಕರಿಸಿದಾಗ. ರಾಜ್ಯದ ವಿವಿಧ ಕೋವಿಡ್ ಸೆಂಟರ್ ಗಳಲ್ಲಿ ಕೋವಿಡ್ ವಾರಿಯರ್ಸ್ ಹಾಗೂ ರೋಗಿಗಳು ಸಹಾಯಕಿಯರು ನೃತ್ಯ ಮಾಡುವುದರ ಮೂಲಕ ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬಿ ಮಹಾಮಾರಿಯನ್ನು ತೊಲಗಿಸುವಲ್ಲಿ ನೃತ್ಯ ಒಂದು ಪ್ರಮುಖ ಪಾತ್ರವನ್ನು ವಹಿಸಿತ್ತು ಎಂದೆ ಹೇಳಬಹುದು ಎಂದರು.
ವಿಎಸ್‌ಕೆ ವಿಶ್ವ ವಿದ್ಯಾಲಯದ ರಂಗಭೂಮಿಯ ಉಪನ್ಯಾಸಕರಾದ ಅಣ್ಣಾಜಿ ಕೃಷ್ಣಾ ರೆಡ್ಡಿ ಅವರು ಮಾತನಾಡಿ, ನಾಟ್ಯ ಶಾಸ್ತ್ರದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ನೃತ್ಯ ಎನ್ನುವುದು ಸಾಮಾನ್ಯ ವಾದಂತಹ ಕಲೆಯಲ್ಲಾ ಈ ಕಲೆಯಿಂದ ಸಾಧನೆಗೈದು ಜೀವತ್ಯಾಗ ಮಾಡಿರುವವರ ವೇಷವನ್ನು ಧರಿಸಿ ಮರಳಿ ಜೀವ ಕೊಡುವಂತಹ ಶಕ್ತಿ ಒಂದು ಕಲೆಗೆ ಇದೆ. ನಾಲ್ಕು ವಿಧಗಳಿಂದ ಅಂಶವನ್ನು ತೆಗೆದುಕೊಂಡು ನಾಟ್ಯಶಾಸ್ತ್ರವನ್ನು ರಚನೆ ಮಾಡಿರುತ್ತಾರೆ. ಸಂಗೀತ ನಾಟಕ, ನೃತ್ಯ ಒಂದು ಸಂಗಮವಾಗಿದೆ. ಯಾವ ಒಬ್ಬ ಕಲಾವಿದನನ್ನು ಕಡೆಗಣಿಸದೆ ಎಲ್ಲಾ ಕಲಾವಿದರನ್ನು ಗೌರವಿಸುವುದು ನಮ್ಮ ಕರ್ತವ್ಯ, ಬಳ್ಳಾರಿ ಬೆಳಗಾಯಿತು ಪತ್ರಿಕೆವತಿಯಿಂದ ಹಮ್ಮಿಕೊಂಡಿರುವ ಸಾಧಕರಿಗೆ ಸನ್ಮಾನ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ, ಕಲಾವಿದರನ್ನು ಸನ್ಮಾನಿಸುವ, ಗೌರವಿಸುವ ಮತ್ತು ಪ್ರೋತ್ಸಾಹಯಿಸುವ ಪತ್ರಿಕೆ ಇದಾಗಿದೆ ಎಂದರು.ನೃತ್ಯ ಕಲಾವಿದೆ ಚಾರುಲತಾ ಅವರು ಮಾತನಾಡಿ, ಕಲೆ ಎನ್ನುವುದು ಸಾಮಾನ್ಯವಾದದ್ದು ಅಲ್ಲ. ಅದು ತನ್ನ ದೇಹದ ಉನ್ನತ ಸ್ಥಾನವನ್ನು ಪಡೆದುಕೊಂಡಿದೆ. ಕಲೆ ಎನ್ನುವುದು ಸಂಸ್ಕಾರ, ಜೀವನಶೈಲಿಯಲ್ಲಿ ಒಳ್ಳೆಯ ಗುಣಗಳನ್ನು ರೂಪಿಸುವ ಶಕ್ತಿ ಒಂದು ಕಲೆಗೆ ಇದೆ ಎಂದರು. ಮಾಜಿ ಸೈನಿಕರಾದ ವಿರುಪಾಕ್ಷಯ್ಯ ಕಾರ್ಯಕ್ರಮ ನಿರೂಪಿಸಿದರು.
ಶಾಸ್ತ್ರೀಯ ನೃತ್ಯಗಾರರಾದ ಚಾರುಲತ, ಅಭಿಷೇಕ್, ಶ್ರೀಜಾ ರೆಡ್ಡಿ, ವಿಜಯ್, ಅವನಿ, ಏಂಜಲೀನಾ ಅವರನ್ನು ಸನ್ಮಾನಿಸಲಾಯಿತು. ಜಾನಪದ ಕಲಾವಿದರಾದ ಕಲಾವಿದ ಕಲ್ಲಪ್ಪ (ತೊಗಲು ಗೊಂಬೆ ಆಟ ನೃತ್ಯ) ಪಾರುಭಾಯಿ(ಲಂಬಾಣಿ ನೃತ್ಯ) ಕಲಾವಿದ ಮಲ್ಲಯ್ಯ(ಗೊರವಯ್ಯನ ಕುಣಿತ ನೃತ್ಯ), ಅವರನ್ನು ಸನ್ಮಾನಿಸಲಾಯಿತು.ಪಾಶ್ಚಾತ್ಯ ನೃತ್ಯಗಾರರಾದ ಜಗದೀಶ್, ಶುಭಾಷ್, ರಂಗನಾಥ, ಅಲಿವೇಲು ಸುರೇಶ್, ಅಜಿತ್, ಮಣಿಕಂಠ, ಜಯಣ್ಣ, ಬಬ್ಲೂ, ರಂಗ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ವಕೀಲರು ಮತ್ತು ಬಳ್ಳಾರಿ ಬೆಳಗಾಯಿತು ಪತ್ರಿಕೆ ಸಂಸ್ಥಾಪಕರಾದ ವಿ. ವಿಜಯ್ ಕುಮಾರ್, ಸೇರಿದಂತೆ ಪತ್ರಿಕೆ ಸಿಬ್ಬಂದಿ ಉಪಸ್ಥಿತರಿದ್ದರು.