ದಲಿತ ಮಹಿಳೆ ಸವಿತಾ ಕಾಂಬಳೆಗೆ ಒಲಿದು ಬಂದ ಪಾಲಿಕೆ ಮಹಾಪೌರ ಪಟ್ಟ : ಉಪ ಮಹಾಪೌರರಾಗಿ ಆನಂದ ಚವಾಣ

ದಲಿತ ಮಹಿಳೆ ಸವಿತಾ ಕಾಂಬಳೆಗೆ ಒಲಿದು ಬಂದ ಪಾಲಿಕೆ ಮಹಾಪೌರ ಪಟ್ಟ : ಉಪ ಮಹಾಪೌರರಾಗಿ ಆನಂದ ಚವಾಣ

ಬೆಳಗಾವಿ : ಸ್ಥಳೀಯ ಮಹಾನಗರ ಪಾಲಿಕೆಯ ನೂತನ ಮಹಾಪೌರರಾಗಿ ಸವಿತಾ ಕಾಂಬಳೆ ಮತ್ತು ಉಪ ಮಹಾಪೌರರಾಗಿ ಆನಂದ ಚವಾಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

   ಗುರುವಾರ ಮಹಾಪೌರ ಮತ್ತು ಉಪಮಹಾಪೌರರ ಹುದ್ದೆಯ ಪ್ರತಿಷ್ಠಿತ ಚುನಾವಣೆ ನಡೆದಿತ್ತು. ಸವಿತಾ ಕಾಂಬಳೆ  ಕೆಲ ವರ್ಷಗಳ ಹಿಂದೆ ಇದೇ ಬೆಳಗಾವಿ ಮಹಾನಗರ ‍ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡಿದ್ದಾರೆ. ನಂತರ ಸವಿತಾ ಅವರು ಹೆಲ್ಮೆಟ್ ಕಂಪನಿಯೊಂದರಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು. 

   ನಂತರ ಊದುಬತ್ತಿ ತಯಾರಿಕಾ ಘಟಕ ಆರಂಭಿಸಿದ್ದರು. 2021ರಲ್ಲಿ ಅವರಿಗೆ ಒಲಿದು ಬಂದ ಅವಕಾಶ ಬಳಸಿಕೊಂಡು ಬಿಜೆಪಿಯಿಂದ ಪಾಲಿಕೆ ಸದಸ್ಯರಾದರು. ಇವಾಗ ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರ ಪಟ್ಟಕ್ಕೆ ಏರಿದ್ದಾರೆ. 

ಸುದ್ದಿ ಓದಿ