ಬಳ್ಳಾರಿ

ಕುಡಿಯುವ ನೀರಿನ ಕೆರೆ ನಿರ್ಮಿಸಲು ಒತ್ತಾಯಿಸಿ ಡಿವೈಎಫ್‌ಐ ಮನವಿ

ಕುಡಿಯುವ ನೀರಿನ ಕೆರೆ ನಿರ್ಮಿಸಲು ಒತ್ತಾಯಿಸಿ ಡಿವೈಎಫ್‌ಐ ಮನವಿ

ಬಳ್ಳಾರಿ 29: ಕೊಳಗಲ್ಲು ಗ್ರಾಮದಲ್ಲಿ  ಕುಡಿಯುವ ನೀರಿನ ಕೆರೆ ನಿರ್ಮಿಸಲು ಒತ್ತಾಯಿಸಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಡಿವೈಎಫ್‌ಐ ಬಳ್ಳಾರಿ ತಾಲೂಕು ಸಮಿತಿ ವತಿಯಿಂದ ಮನವಿ ಸಲ್ಲಿಸಿದರು.  

ನಂತರ ಆಙಈಋ ಜಿಲ್ಲಾಧ್ಯಕ್ಷ ಯು. ಎರಿಸ್ವಾಮಿ ಮಾತನಾಡುತ್ತಾ 2022 ಅಗಸ್ಟ್‌ 11ರಂದು ನಿವೇಶನ ಮತ್ತು ವಸತಿ ನೀಡುವಂತೆ ಸುಮಾರು 185ಕ್ಕೂ ಹೆಚ್ಚು ಬಡ ಕುಟುಂಬಗಳು ಹೋರಾಟದ ಮೂಲಕ ಅರ್ಜಿಗಳನ್ನು ಸಲ್ಲಿಸಿದ್ದರು. ಆದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ ಆಗಿದೆ ಎಂದರು.ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಕುಡಿಯುವ ನೀರಿನ ಕೆರೆ ಇದ್ದು ಇಲ್ಲದಂತಾಗಿದೆ. ಈಗಿರುವ ಕೆರೆಯ ನೀರು ಕೊಳಗಲ್ಲು ಗ್ರಾಮದ ಜನರಿಗೆ ಸಾಲುತ್ತಿಲ.್ಲ ಕೇವಲ ಹೆಸರಿಗಷ್ಟೇ ಅಲ್ಪ ಸ್ವಲ್ಪ ಕೆರೆ ನಿರ್ಮಿಸಲಾಗಿದೆ. ಹಲವಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು ಗ್ರಾಮದಲ್ಲಿ ಸುಮಾರು 15ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದು ಈ ಗ್ರಾಮದ ಜನರಿಗೆ ಸುಮಾರು ವರ್ಷಗಳಿಂದ ಕುಡಿಯುವ ನೀರಿನ ಕೆರೆಯ ವ್ಯವಸ್ಥೆ ಇಲ್ಲದಂತಾಗಿದೆ. ಇಲ್ಲಿನ ಜನರು ಸುಮಾರು ವರ್ಷಗಳಿಂದ ಕುಡಿಯುವ ನೀರಿಗಾಗಿ ಗ್ರಾಮಗಳಲ್ಲಿ ಇರುವಂತ ಖಾಸಗಿ ಶುದ್ಧೀಕರಿಸಿದ ಘಟಕಗಳಿಂದ ತಂದು ಅನಿವಾರ್ಯವಾಗಿ ಒಂದು ಕ್ಯಾನ್ ಗೆ 10 ರೂಪಾಯಿ ಹಣಕೊಟ್ಟು ಖರೀದಿ ಮಾಡುವಂತಹ ಪರಿಸ್ಥಿತಿ ಈ ಗ್ರಾಮದ ಜನರದ್ದಾಗಿದೆ. ಒಂದು ಸಣ್ಣ ಕುಟುಂಬವಾದರೆ ದಿನಕ್ಕೆ ಎರಡು ಬಿಂದಿಗೆ ನೀರು, ದೊಡ್ಡ ಕುಟುಂಬವಾದರೆ ದಿನಕ್ಕೆ ನಾಲ್ಕು ಬಿಂದೆಗೆ ನೀರು ಬೇಕು. ಇದರಿಂದಾಗಿ ಇಲ್ಲಿನ ಬಡ ಜನರಿಗೆ ಬಹಳ ಕಷ್ಟವಾಗಿದ್ದು ಕುಡಿಯುವ ನೀರಿಗಾಗಿ ತಿಂಗಳಿಗೆ ಸಾವಿರಾರು ರೂಪಾಯಿ ಅನಿವಾರ್ಯವಾಗಿ ಖರ್ಚು ಮಾಡುತ್ತಿದ್ದಾರೆ.  

ಈ ಗ್ರಾಮದಲ್ಲಿ ಕುಡಿಯುವ ನೀರಿನ ಕೆರೆ ನಿರ್ಮಾಣ ಮಾಡಲು ಸಾಕಷ್ಟು ಭೂಮಿ ಲಭ್ಯವಿದ್ದು ಸರ್ವೆ ನಂಬರ್ 557 ರಲ್ಲಿ ಸುಮಾರು  

240ಕ್ಕೂ ಹೆಚ್ಚು ಕೆರೆಯ ಭೂಮಿ ಲಭ್ಯವಿದ್ದರೂ ಕೂಡ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಹೆಸರಿಗಷ್ಟೇ ಕೆರೆ ನಿರ್ಮಾಣ ಮಾಡಿದ್ದು, ಈ ಕೆರೆಯ ನೀರು ಒಂದು ಎರಡು ವಾರ್ಡ್‌ ಗಳಿಗೆ ಮಾತ್ರ ಸೀಮಿತವಾಗಿ ಆ ವಾರ್ಡಗಳಿಗೆ ಕೂಡ ನೀರು ಸಾಕಾಗುತ್ತಿಲ್ಲ. ಈಗ್ರಾಮಕ್ಕೆ ಸಂಬಂಧಪಟ್ಟ ಸುಮಾರು 240 ಎಕರೆ ಕುಡಿಯುವ ನೀರಿನ ಕೆರೆ ನಿರ್ಮಿಸಲು ಭೂಮಿ ಇದ್ದು ಆ ಭೂಮಿಯ ಪಕ್ಕದಲ್ಲೇ  ಮೇನ್ ಕಾಲುವೆ ಕೂಡ ಇದೆ,  ನೀರು ತುಂಬಿಸಲು ಸಪರೇಟ್ ತುಮು ಗೇಟು ಇದ್ದರೂ ಕೂಡ ನಮ್ಮನ್ನು ಆಳುವಂತಹ ಜನಪ್ರತಿನಿಧಿಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೆಸರಿಗಷ್ಟೆ ಅಲ್ಪಸ್ವಲ್ಪ ಕೆರೆ ನಿರ್ಮಾಣ ಮಾಡಿ, ಗ್ರಾಮದ ಜನರಿಗೆ ಅನ್ಯಾಯ ಮಾಡಿದ್ದಾರೆ. ಸುಮಾರು ವರ್ಷಗಳಿಂದ ಗ್ರಾಮದ ಬಡ ಕುಟುಂಬಗಳಿಗೆ ಕುಡಿಯಲು ಶುದ್ಧ ನೀರು ಸಿಗದೇ ತುಂಬಾ ಸಂಕಷ್ಟದಲ್ಲಿ ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಶಾವಲಿ ರವರು ನಿರ್ಲಕ್ಷ್ಯ ವಹಿಸದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ಜೊತೆ ಚರ್ಚಿಸಿ, ಕೂಡಲೇ  ಕುಡಿಯುವ ನೀರಿನ ಕೆರೆ ನಿರ್ಮಿಸಲು ಸೂಕ್ತವಾದ ಕ್ರಮವಹಿಸಿ ಸುಮಾರು 50 ಎಕ್ಕರೆಯಲ್ಲಿ ಕುಡಿಯುವ ನೀರಿನ ಕೆರೆ ನಿರ್ಮಿಸಿ ಇನ್ನು ಉಳಿದ ಭೂಮಿಯಲ್ಲಿನ ಸುತ್ತಮುತ್ತಲ್ಲು ಫಿನಿಶಿಂಗ್ ಮಾಡಿ ಅದರ ಒಳಗಡೆ ಪಾರ್ಕ್‌ ಮಾಡಬೇಕು.  

ಗ್ರಾಮದ ಬಡ ಕುಟುಂಬಗಳಿಗೆ ನಿವೇಶನ ಮತ್ತು ವಸತಿಯನ್ನು ಈ ಕೂಡಲೇ ಮಂಜೂರು ಮಾಡಬೇಕು. ಒಂದು ವೇಳೆ ನಿರ್ಲಕ್ಷ್ಯ  ತೋರಿದರೆ ಮುಂದಿನ ದಿನಗಳಲ್ಲಿ ಕೊಳಗಲ್ಲು ಗ್ರಾಮದ ಎಲ್ಲಾ ಮಹಿಳೆಯರು ಮತ್ತು ಯುವಜನರು ಸೇರಿಕೊಂಡು ಗ್ರಾಮ ಪಂಚಾಯಿತಿ ಮುಂದೆ ಡಿವೈಎಫ್‌ಐ ಸಂಘಟನೆ ನೇತೃತ್ವದಲ್ಲಿ ಕಾನೂನಾತ್ಮಕವಾಗಿ ಉಗ್ರವಾದ ಹೋರಾಟ ಧರಣಿ ಸತ್ಯಾಗ್ರಹವನ್ನು ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಆಙಈಋ ತಾಲೂಕು ಕಾರ್ಯದರ್ಶಿ ಹೆಚ್ ಎರಿಸ್ವಾಮಿ, ಮಸ್ತಾನ್ ಸಾಬ್, ಉಳ್ಳೂರ್ ಶ್ರೀನಿವಾಸ್, ಮೊಹಮ್ಮದ್ ರಫೀಗ್, ಕೆ ಶಿವಾನಂದ್, ಕೆ ರಮೇಶ್, ಆಟೋ ರಮೇಶ್, ಕೆ ಮಲ್ಲೇಶ್, ಕೆ  ಸಿದ್ದರಾಮಯ್ಯ, ಯು ತಿಪ್ಪೇಸ್ವಾಮಿ, ಸೇರಿದಂತೆ ಇನ್ನು ಊರಿನ ಮುಖಂಡರು ಇತರರು  ಉಪಸ್ಥಿತರಿದ್ದರು. 


ಸುದ್ದಿ ಓದಿ