ಬಳ್ಳಾರಿ

ಗೋಟುರು ಗ್ರಾಮದ ಮುಖ್ಯ ರಸ್ತೆ ಹಾಗೂ ಚರಂಡಿ ನಿರ್ಮಿಸಲು ಡಿವೈಎಫ್‌ಐ ಒತ್ತಾಯ

ಗೋಟುರು ಗ್ರಾಮದ ಮುಖ್ಯ ರಸ್ತೆ ಹಾಗೂ ಚರಂಡಿ ನಿರ್ಮಿಸಲು ಡಿವೈಎಫ್‌ಐ ಒತ್ತಾಯ

ಬಳ್ಳಾರಿ 05: ಗ್ರಾಮಾಂತರ ಮಟ್ಟದಲ್ಲಿರುವ ಬಳ್ಳಾರಿ  ತಾಲೂಕಿನ ವಣೇನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಟೂರು ಗ್ರಾಮದ ಮೆನ್ ರಸ್ತೆ ಮತ್ತು ಎಸ್‌.ಸಿ ಕಾಲೋನಿಯಲ್ಲಿ ಚರಂಡಿ ನಿರ್ಮಿಸಲು ಒತ್ತಾಯಿಸಿದರು. ನಗರದ ಕೋಟೆ ಪ್ರದೇಶದಲ್ಲಿರುವ ಕಾರ್ಯ ನಿರ್ವಾಹಕ ಕೆಇಎಸ್ ಇಂಜಿನಿಯರು ಹೇಮರಾಜ್ ಇವರಿಗೆ ಡಿವೈಎಫ್‌ಐ ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಮನವಿ ಪತ್ರ ಸಲ್ಲಿಸಿದರು.  

ಡಿವೈಎಫ್‌ಐ  ಜಿಲ್ಲಾ ಅಧ್ಯಕ್ಷ ಯು. ಎರ್ರಿಸ್ವಾಮಿ ಮಾತನಾಡಿ  ಬಳ್ಳಾರಿ ತಾಲೂಕಿನ  ವಣೇನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗೋಟೂರು ಗ್ರಾಮದ ವಾರ್ಡ್‌ ನಂ.2, ಎಸ್ ಸಿ ಕಾಲೋನಿಯ ಬಹ್ಮಯ್ಯ ದೇವಾಸ್ಥಾನದಿಂದ ಎರೆ ದಾರಿ ರಸ್ತೆಯವರೆಗೆ ಚರಂಡಿ ವ್ಯವಸ್ಥೆ ಇಲ್ಲದ ಕಾರಣ  ಮಳೆ ಬಂದಾಗ ಮಳೆ ನೀರೆಲ್ಲ  ಮೋಕ-ಬಸರಕೋಡು ಮುಖ್ಯ ರಸ್ತೆಯಲ್ಲಿ ನಿಂತು ತೆಗ್ಗು ಪ್ರೆದೇಶದ ಮನೆಗಳಿಗೆ ಮಳೆ ನೀರು ನುಗುತ್ತಿವೆ. ಸುಮಾರು ಮೂರು ನಾಲ್ಕು ದಿನಗಳಾದರೂ ತೆಗ್ಗು ಪ್ರದೇಶದ ರಸ್ತೆಯ ಮೇಲೆ  ನಿಲ್ಲುತ್ತವೆ. ಈ ನಿಂತ ನೀರಿನಿಂದ ಈ ಗ್ರಾಮದ ಸಾರ್ವಜನಕರಿಗೆ ಮತ್ತು ಮಕ್ಕಳಿಗೆ ವೃದ್ಧರಿಗೆ ಈ ಗಲೀಜ್ ನೀರಿನಿಂದ ದುರುವಾಸನೆ ಕೂಡಿ ಡೆಂಗ್ಯೂ ಮಲೇರಿಯಾದಂತ ವೈರಸ್ ಸೇರಿದಂತೆ ಇನ್ನು ಅನೇಕ ರೋಗಗಳಿಗೆ ಈ ಗ್ರಾಮದ ಜನರು ಮಕ್ಕಳು ವೃದ್ದರು ಅನೇಕ ರೋಗ ಕಾಯಿಲೆಗಳಿಗೆ  ತುತ್ತಾಗುತ್ತಿದ್ದಾರೆ. ಈ ಸಮಸ್ಯೆ ಸುಮಾರು 8 ವರ್ಷಗಳಿಂದ ಇದ್ದು ಈ ರಸ್ತೆಯ ಮೇಲೆ ಒಡಾಡುವ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ತುಂಬಾ ತೊಂದರೆ ಆಗುತಿದ್ದು  ಈ ಸಮಸ್ಯೆಯನ್ನು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ  ಮತ್ತು ಜನಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ, ಆದ್ದರಿಂದ ತಾವುಗಳು ಈ ಸಮಸ್ಯೆಯನ್ನು ಪರೀಶೀಲನೆ ಮಾಡಿ  ಮುಖ್ಯ ರಸ್ತೆ ಮತ್ತು ಚರಂಡಿಯನ್ನು ಕೂಡಲೆ ನಿರ್ಮಿಸಬೇಕು.  

ಒಂದು ವೇಳೆ ಈ ಮುಖ್ಯ ರಸ್ತೆ ಹಾಗೂ ಚರಂಡಿಯನ್ನು ನೀವು ನಿರ್ಮಿಸಲು ನಿರ್ಲಕ್ಷ ತೋರಿದರೆ ಮುಂದಿನ ದಿನಗಳಲ್ಲಿ  ಗೋಟುರ್ ಗ್ರಾಮದ ಮಹಿಳೆಯರು ಯುವಕರು ಮತ್ತು ಎಲ್ಲ ಸಾರ್ವಜನಕರು ಸೇರಿಕೊಂಡು (ಡಿವೈಎಫ್‌ಐ) ಸಂಘಟನೆಯ ನೇತೃತ್ವದಲ್ಲಿ ತಮ್ಮ ಕಚೇರಿಯ ಮುಂದೆ ಉಗ್ರವಾದ ಹೋರಾಟ ಧರಣಿ ಸತ್ಯಾಗ್ರಹವನ್ನು ರೂಪಿಸಬೇಕಾಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ  ಎಚ್ಚರಿಸಿದರು. ಈ ಹೋರಾಟದ ಸಂದರ್ಭದಲ್ಲಿ ಊ.ಸ್ವಾಮಿ. ಜಿಲ್ಲಾ ಕಾರ್ಯದರ್ಶಿ ಬೈಲಾಹನುಮಪ್ಪ  ಜಿಲ್ಲಾ ಉಪಾಧ್ಯಕ್ಷ ಗೋಟುರ್ ವೆಂಕಟೇಶ್, ಬಿಪಿ ನವೀನ್ ಜಿಲ್ಲಾ ಖಜಾಂಚಿ ಎ.ತಿಪ್ಪೆರುದ್ರ, ತಾಲೂಕು ಅಧ್ಯಕ್ಷ ಊ.ಎರ್ರಿಸ್ವಾಮಿ ತಾಲೂಕು ಕಾರ್ಯದರ್ಶಿ ಜಿ.ಎನ್ ಎರ್ರಿಸ್ವಾಮಿ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಹೊನ್ನೂರ್ ಸಾಬ್, ಜಿಲ್ಲಾ ಉಪಾಧ್ಯಕ್ಷ  ಕಗ್ಗಲ್ ಲೋಕೇಶ್, ರೈತ ಸಂಘದ ಮುಖಂಡ ಊ.ದುರುಗಪ್ಪ  ಗೊಟೂರ್ ಬಸವ, ಹುಸೇನಪ್ಪ,ಪಕ್ಕೀರ, ಸಿದ್ದಯ್ಯ, ಬಸಪ್ಪನವರ ಮಗ ಮಲ್ಲಿಕಾರ್ಜುನ, ಹಾಗೂ ಪಂಪಪತಿ, ಚಿನ್ನಪ್ಪ, ಶೇಖರ್, ವೆಂಕಟೇಶ್, ಗದಿಲಿಂಗ, ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ