ಕಂಪ್ಲಿ

ಶಾಂತಿ ಸೌರ್ಹದತೆಯಿಂದ ಬಕ್ರೀದ್ ಹಬ್ಬ ಆಚರಿಸಲು ಮುಂದಾಗಿ ಡಿವೈ. ಎಸ್‌. ಪಿ..ಪ್ರಸಾದ್‌ಕೆ.ಗೋಕಲೆ

ಶಾಂತಿ ಸೌರ್ಹದತೆಯಿಂದ ಬಕ್ರೀದ್ ಹಬ್ಬ ಆಚರಿಸಲು ಮುಂದಾಗಿ ಡಿವೈ. ಎಸ್‌. ಪಿ..ಪ್ರಸಾದ್‌ಕೆ.ಗೋಕಲೆ

ಲೋಕದರ್ಶನ ವರದಿ

ಕಂಪ್ಲಿ  22: ಶಾಂತಿ ಸೌರ್ಹದತೆಯಿಂದ ಬಕ್ರೀದ್ ಹಬ್ಬವನ್ನು ಆಸಚರಿಸುವುದರ ಜೊತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಲು ಮುಂದಾಗಬೇಕು ಎಂದು ಡಿವೈ.ಎಸ್‌.ಪಿ. ಪ್ರಸಾದ್ ಕೆ. ಗೋಕಲೆ  ಹೇಳಿದರು.ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಗುರುವಾರ ‘ಶಾಂತಿ ಪಾಲನೆ ಸಭೆಯಲ್ಲಿ ಮಾತನಾಡಿ ಹಿರಿಯರು ಯುವಕರಿಗೆ ಸರಿಯಾದ ಮಾರ್ಗದರ್ಶನ ಮಾಡಿ ಎಲ್ಲರೂ ಕಾನೂನು ಪರಿಪಾಲನೆ ಮಾಡಿ ಶಾಂತತೆ ಕಾಪಾಡಿ ಅದು ಬಿಟ್ಟು ಕೆಲವೊಂದು ಕಿಡಿಗೇಡಿಗಳಿಂದ ಶಾಂತಿಗೆ  ಭಂಗ ತರಬಾರದು ಹಿರಿಯರು ಹೆಚ್ಚು ಗಮನ ಹರಿಸಲು ಮುಂದಾಗಬೇಕು ಎಂದರು.

ಪಿ. ಐ. ಕೆ. ಬಿ. ವಾಸುಕುಮಾರ್ ಮಾತನಾಡಿ, ಸೌಹಾರ್ದತೆ ಹಬ್ಬವನ್ನು ಆಚರಿಸಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಟ್ಟಾಗಿ, ಶಾಂತಿ ಹಾಗೂ ಸೌಹಾರ್ದತೆಯಿಂದ ಬಕ್ರೀದ್ ಹಬ್ಬವನ್ನು ಆಚರಿಸಬೇಕು. ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಕಾಪಾಡಲು ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸೂಚಿಸಲಾಗುತ್ತದೆ.  ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ವದಂತಿಗಳನ್ನು ನಂಬಬಾರದು ಮತ್ತು ಯಾವುದೇ ಗೊಂದಲಗಳಿಗೆ ಆಸ್ಪದ ನೀಡಬಾರದು. ಹಬ್ಬದ ದಿನಗಳಲ್ಲಿ ಯುವಕರು ಮತ್ತು ಅಪ್ರಾಪ್ತರು ಅಡ್ಡಾದಿಡ್ಡಿ ಬೈಕ್ ಚಾಲನೆ ಮಾಡಿ ಕಾನೂನು ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಎಂದರು.

ಪ್ರಮುಖರಾದ ಕೆ. ಎಂ. ಹೇಮಯ್ಯಸ್ವಾಮಿ,  ಎನ್‌.  ಹಬೀಬಿ ರೆಹಮಾನ್  ಕೆ. ಮೆಹಬೂಬ್ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಎಎ ಬಸವರಾಜ್, ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ  ಮುಖಂಡರಾದ ಎಂ. ಉಸ್ಮಾನ್, ಎಂ. ಬಾಬು, ಅಸ್ಲಾಂ, ಮೌಲಾಹುಸೇನ್, ನವಾಬಸಾಬ್ , ಬಿ. ಜಾಫರ್ ಸಾಧಿಕ್, ಕೆ. ಮಸ್ತನವಲಿ ಕಡಪ,  ಅತ್ತಾವುಲ್ಲಾ, ಜಹೀರುದ್ದಿನ, ವಾಹಿದ್, ಸಿದ್ದನಗೌಡ, ದೇವಣ್ಣ, ಕನಕಪ್ಪ ಹನುಮಂತಪ್ಪ, ದೊಡ್ಡಬಸಪ್ಪ, ರಮೇಶ, ನಾಗಪ್ಪ ಸೇರಿದಂತೆ ಇತರರಿದ್ದರು.


ಸುದ್ದಿ ಓದಿ