ಹುಕ್ಕೇರಿ

ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಪತ್ತಿ ಹಚ್ಚಿ ಮಾಲಿಕರಿಗೆ ಹಸ್ತಾರಿಸಿದ ಡಿವಾಎಸ್ಪಿ ರವಿ ನಾಯಿಕ

ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಪತ್ತಿ ಹಚ್ಚಿ ಮಾಲಿಕರಿಗೆ ಹಸ್ತಾರಿಸಿದ ಡಿವಾಎಸ್ಪಿ ರವಿ ನಾಯಿಕ

ಲೋಕದರ್ಶನ ವರದಿ 

ಹುಕ್ಕೇರಿ 18 : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಹುಕ್ಕೇರಿ ಪೊಲೀಸರು ಸತಕಾರ್ಯಾಚರಣೆ ನಡೆಸಿ, ವಿವಿಧ ಪ್ರಕರಣಗಳಲ್ಲಿ ಕಳೆದುಹೋಗಿದ್ದ ಒಟ್ಟು22 ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಿದ್ದಾರೆ.  ಸುಮಾರು 4.85 ಲಕ್ಷ ಮೌಲ್ಯದ ಈ ಮೊಬೈಲ್‌ಗಳನ್ನು ಇಂದು ಅವುಗಳ ನಿಜವಾದ ಮಾಲೀಕರಿಗೆ ಪೊಲೀಸರು ಹಸ್ತಾಂತರಿಸಿದರು. 

ಈ ಬಗ್ಗೆ ಮಾತನಾಡಿದ ಡಿವಾಎಸ್ಪಿ ರವಿನಾಯಿಕ “ಸರ್ಕಾರದ ಅಧಿಕೃತ ಜಾಲತಾಣದ ವ್ಯವಸ್ಥೆಯನ್ನು ಸಮರ​‍್ಕವಾಗಿ ಬಳಸಿಕೊಂಡು ಪೊಲೀಸ್ ಅಧಿಕಾರಿಗಳು ಪೋರ್ಟಲ್‌ನಲ್ಲಿ ದಾಖಲಾದ ದೂರುಗಳ ಆಧಾರದ ಮೇಲೆ ತಾಂತ್ರಿಕವಾಗಿ ತನಿಖೆ ನಡೆಸಿ ಮೊಬೈಲ್‌ಗಳನ್ನು ಪತ್ತೆಹಚ್ಚಿದ್ದಾರೆ.  


ಸುದ್ದಿ ಓದಿ