ತಾಳಿಕೋಟಿ

ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿ

ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿ

ತಾಳಿಕೋಟೆ 26 :ತಾಲೂಕಿನ ಮೂಕಿಹಾಳ ಗ್ರಾಮ ಪಂಚಾಯತ ವ್ಯಾಪ್ತಿಯ ಶಿವಪೂರ ಗ್ರಾಮದ ಪರಿಶಿಷ್ಠ ಜಾತಿಯ ಕಾಲೋನಿಯಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಅಂಬೇಡ್ಕರ ಸೇನೆಯ ಗ್ರಾಮ ಘಟಕದ ವತಿಯಿಂದ ಶುಕ್ರವಾರ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.ಶಿವಪೂರ ಗ್ರಾಮದಲ್ಲಿಯ ಎಸ್‍ಸಿ ಓಣಿಯಲ್ಲಿ ಕಳೆದ 3-4 ವರ್ಷಗಳ ಹಿಂದೆ ಶುದ್ದ ಕುಡಿಯುವ ನೀರಿನ ಘಟಕವನ್ನು ಕೂಡಿಸಲಾಗಿದೆ. ಅದಕ್ಕ ಸಾಕಷ್ಟು ಕುಡಿಯುವ ನೀರಿನ ಸೌಲಭ್ಯ ಇದ್ದರು ಸಹ ಆರಂಭಿಸಿಲ್ಲ. ಈ ಬಗ್ಗೆ ಗುತ್ತಿಗೆದಾರರನ್ನು ಸಂಪರ್ಕ ಮಾಡಿದರೂ ಸಹಿತ ಇಲ್ಲಿವರೆಗೆ ಯಾವುದೇ ಕ್ರಮ ಕೈಕೊಂಡಿಲ್ಲ. ಪಂಚಾಯತ ಅಧಿಕಾರಿಗಳಿಗೆ ಈ ಬಗ್ಗೆ ಮೌಖಿಕವಾಗಿ ತಿಳಿಸಲಾಗಿದೆ. ಆದರೂ ಸಹ ದುರಸ್ತಿ ಮಾಡಿಸಿಲ್ಲ. ಇದರಿಂದ ಶುದ್ದ ಕುಡಿಯುವ ನೀರಿನ ತೊಂದರೆ ಆಗುತ್ತಿದೆ. ಗ್ರಾಮದಲ್ಲಿ ಪ್ಲೂರೈಡಯುಕ್ತ ನೀರು ಇದ್ದು ಅದನ್ನು ಸೇವಿಸುವದರಿಂದ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದ್ದರಿಂದ ವಾರದೊಳಗೆ ಶುದ್ದ ಕುಡಿಯುವ ನೀರಿನ ಘಟಕವನ್ನು ದುರಸ್ತಿಗೊಳಿಸಿ ಜನರಿಗೆ ಅನಕೂಲ ಮಾಡಿಕೊಡಬೇಕು. ಇದರ ಜೊತೆ ಬೀದಿ ದೀಪಗಳು ಹಾಳಾಗಿದು ಅವುಗಳನ್ನು ಸಹ ದುರಸ್ತಿಗೊಳಿಸಬೇಕು. ಇಲ್ಲದಿದ್ದರೆ ಪಂಚಾಯತ ಕಚೇರಿ ಮುಂದೆ ಧರಣಿ ಕೂಡಲಾಗುವದು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮನವಿಯನ್ನು ಬಿ.ಎಸ್.ಹಿರೇಮಠ ಸ್ವಿಕರಿಸಿದರು.ಈ ಸಂದರ್ಭದಲ್ಲಿ ಶಿವಪೂರ ಗ್ರಾಮ ಘಟಕ ಅಧ್ಯಕ್ಷ ಯಮನಪ್ಪ ನಾಯ್ಕೋಡಿ, ಉಪಾಧ್ಯಕ್ಷ ಕಾಶಪ್ಪ ಕಟ್ಟಿಮನಿ, ಕಾಯ9ದಶಿ9 ಬಸವರಾಜ ಚಲವಾದಿ, ಪರಶುರಾಮ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.



ಸುದ್ದಿ ಓದಿ