ಬಳ್ಳಾರಿ

ಐಡಿ ಐಟಿ ಸಿಬಿಐ ದುರುಪಯೋಗ ವಿರೋಧಿಸಿಡಿಎಸ್ ಎಸ್ ಅರೆ ಬೆತ್ತಲೆ ಪ್ರತಿಭಟನೆ

ಐಡಿ ಐಟಿ ಸಿಬಿಐ ದುರುಪಯೋಗ ವಿರೋಧಿಸಿಡಿಎಸ್ ಎಸ್ ಅರೆ ಬೆತ್ತಲೆ ಪ್ರತಿಭಟನೆ

ಐಡಿ ಐಟಿ ಸಿಬಿಐ ದುರುಪಯೋಗ ವಿರೋಧಿಸಿಡಿಎಸ್ ಎಸ್ ಅರೆ ಬೆತ್ತಲೆ ಪ್ರತಿಭಟನೆ 

ಬಳ್ಳಾರಿ 07:  ದೇಶದ ಸಂವಿಧಾನಿಕ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐ, ರಾಜಭವನಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವುದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ನಗರದಲ್ಲಿಂದು ಡಿ.ಜಿ.ಸಾಗರ್ ಬಣದ ದಲಿತ ಸಂಘರ್ಷ ಸಮಿತಿ ಬೃಹತ್ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ನಡೆಸಿತು. ಇದೇ ವೇಳೆಯಲ್ಲಿ  ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ ನೇತೃತ್ವದಲ್ಲಿ ನಗರದ ಜಿಲ್ಲಾ ಅಂಬೇಡ್ಕರ್ ಸಂಘದ ಬಳಿಯಿಂದ ಜಿಲ್ಲಾಧಿಕಾರಿಯ ಕಚೇರಿಯವರಿಗೆ  ಅರೆಬೆತ್ತಲೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ. ಜಿಲ್ಲಾಧಿಕಾರಿಯ ಮೂಲಕ   ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯತ್ತು.ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 10 ವರ್ಷಗಳಲ್ಲಿ ದೇಶದ ಅಖಂಡತೆಗೆ ಧಕ್ಕೆ ತಂದೊಡ್ಡಲು ಸಂವಿಧಾನ ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗುತ್ತಿದೆ.  

ದೇಶದಲ್ಲಿ ಬಿಜೆಪಿಯೇತರ ಪಕ್ಷದ ಸರಕಾರಗಳನ್ನು ಅಸ್ಥಿರಗೊಳಿಸುವ ಹುನ್ನಾರ ಮಾಡಿ ಬೇರೆ ಪಕ್ಷದಿಂದ ಆಯ್ಕೆಗೊಂಡಿರುವ ಶಾಸಕರನ್ನು ಪುಸಲಾಯಿಸಿ ಅವರ ಸ್ಥಾನಕ್ಕೆ ರಾಜಿನಾಮೆ ಕೊಡಿಸುವಂತ ಕೆಲಸ ಆಯತ್ತು.ಸಂವಿಧಾನಿಕ ಸಂಸ್ಥೆಗಳ ಮೇಲೆ ಒತ್ತಡ ತಂದು ತನ್ನ ವ್ಯಾಪ್ತಿಯಲ್ಲಿ ಬರುವ ಅಪರಾಧಗಳ ತನಿಖಾ ಸಂಸ್ಥೆಗಳನ್ನು ರಾಜಕೀಯಗೋಸ್ಕರ ಬಳಸಿಕೊಂಡಾದರೂ ಜನರಿಂದ ಆಯ್ಕೆಗೊಂಡಿರುವ ಬಿಜೆಪಿಯೇತರ ಸರಕಾರವನ್ನು ಪತನಗೊಳ್ಳಲು ಸಂಚು ರೂಪಿಸಿ ಹಿಂಬಾಗಿಲಿನಿಂದ ಬಿಜೆಪಿ ಅಧಿಕಾರ ಗದ್ದುಗೆಯನ್ನು ಕೇಂದ್ರ ಸರ್ಕಾರದ ಈ ಹುನ್ನಾರವನ್ನು ಪ್ರಜಾಪ್ರಭುತ್ವವಾದಿಗಳು ಜಾಗೃತಗೊಳಿಸಬೇಕಾಗಿದೆ.ಮನುವಾದವನ್ನು ಬೆಂಬಲಿಸುವ ಬಿಜೆಪಿ ಚುನಾವಣಾ ಆಯೋಗಗಳಂತಹ ಮೂಲಕವೇ ಮೆಟ್ಟ ಹಾಕುವ ಬಾಯಿಮುಚ್ಚಿಸುವ ಪ್ಯೂಡಲ್ ರಾಜಕಾರಣದ ಮಾದರಿಯೆಂದೇ ದೇಶದಲ್ಲಿ ಸಧ್ಯ ಚಾಲ್ತಿಯಲ್ಲಿದೆ.  

ಇದರ ಭಾಗವಾಗಿಯೇ ಸಿದ್ಧರಾಮಯ್ಯ ವಿರುದ್ಧ ಮುಡಾ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆ.ಕೇವಲ ಮುಡಾ ಪ್ರಕರಣ ಕೃತಕ ಕಾರಣಕ್ಕೆ ಹೆದರಿ ಸಿದ್ದರಾಮಯ್ಯ ಅಧಿಕಾರದಿಂದ ನಿರ್ಗಮಿಸುವುದು ಎಂದರೆ ಅದು ಈ ಸಮಾಜದ ಬಹುಜನರ ವಿಚಾರಧಾರೆಯ ಸೋಲು ಆಗುತ್ತದೆ.ಆದರೆ ನೈತಿಕತೆ ಎಂಬ ಗೂಟಕ್ಕೆ ಕಟ್ಟಿ ಬಲಿ ಹಾಕುವ ರಾಜಕೀಯ ಸಂಚಿಗೆ ಸಿದ್ದರಾಮಯ್ಯನವರು ಒಳಗಾಗಬಾರದು.ರಾಜಕೀಯ ಭ್ರಷ್ಟಚಾರ ಸ್ವಜನ ಪಕ್ಷಪಾತ, ವಂಶಪಾರಂಪರ್ಯ ರಾಜಕಾರಣಿಗಳಿಗೆ ಪೂರ್ಣವಿರಾಮ ಹಾಕುವುದಾಗಿ ಹೇಳಿ ಜನರ ವಿಶ್ವಾಸಗಳಿಸಿ ಅಧಿಕಾರ ಪಡೆದ ಪಕ್ಷ ಏನು ಮಾಡಿದೆ? ಭ್ರಷ್ಟಚಾರದ ಹಗರಣಗಳ ರುವಾರಿಗಳಾಗಿದ್ದ ಹಲವು ರಾಜಕೀಯ ನಾಯಕರನ್ನು ರಾಜಕೀಯ ಶುದ್ದೀಕರಣ ಮಾಡಿ ಯಾವ ರೀತಿಯಲ್ಲಿ ತಮ್ಮೊಳಗೆ ಸೇರಿಸಿಕೊಳ್ಳಲಾಯಿತು ಎಂದು ಈ ವೇಳೆ ಪ್ರಶ್ನಿಸಲಾಯತು.ಹಾಗೂ ರಾಷ್ಟ್ರಪತಿಗಳು ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು  ರಾಜ್ಯ ಸಮಿತಿಯ ಸಂಘಟನಾ ಸಂಚಾಲಕ ಎ. ಮಾನಯ್ಯಸಮಿತಿಯ ಆಗ್ರಹಿಸಿದ್ದಾರೆ. 

ಈ ಪ್ರತಿಭಟನೆಯಲ್ಲಿ  ಸಂಘಟನೆಯ ಜಿಲ್ಲಾ ಸಂಚಾಲಕ ಹೆಚ್‌.ಬಿ.ಗಂಗಪ್ಪ, ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ಕೆ.ದೇವದಾಸ್, ಹೆಚ್‌. ಆಂಜನೇಯ, ಮಲ್ಲಯ್ಯ, ಮುಖಂಡರುಗಳಾದ ಬಿ. ರಮೇಶ್, ನಾಗೇಂದ್ರ​‍್ಪ, ಜಿ ಪಂಪಾಪತಿ, ಟಿ.ಎಂ.ಎರಿಸ್ವಾಮಿ, ಹುಲುಗಪ್ಪ ಬೆಳಗಲ್, ಶಿವಪ್ಪ ಅಸುಂಡಿ, ಎಂ. ರಾಮಯ್ಯ ಕಂಪ್ಲಿ, ತಾಲ್ಲೂಕು ಸಂಚಾಲಕರುಗಳಾದ ಹೆಚ್‌.ಮಲ್ಲಪ್ಪ ಬಳ್ಳಾರಿ, ಜಗದೀಶ್ ಮೆಟ್ರಿ. ಕುಮಾರ್ ಕಂಪ್ಲಿ, ದೊಡ್ಡಬಸಪ್ಪ ಸಿರುಗುಪ್ಪ, ಮಾರೆಪ್ಪ ಕುರುಗೋಡು, ತಾಲ್ಲೂಕು ಸಂಘಟನಾ ಸಂಚಾಲಕರುಗಳಾದ ಹೆಚ್‌. ಶಂಕರ್, ಹನುಮಂತಪ್ಪ ಎತ್ತಿನಬೂದಿಹಾಳ್,  ಹಲಕುಂದಿ ಎರಿಸ್ವಾಮಿ, ರಾಜಣ್ಣ, ಮಲ್ಲರ ಭೀಮಶಂಕರ್, ಮಹೇಶ್ ಭತ್ರಿ, ಹೆಚ್‌.ಕೆ.ತಿರುಮಲ ಯರಗುಡಿ, ಹನುಮಂತಪ್ಪ ಕುಡತಿನಿ. ತಿಪ್ಪೇಸ್ವಾಮಿ ಸೋಮಸಮುದ್ರ, ಕೋಳೂರು ಮಲ್ಲಿ, ವಿಜಯ್ ಅಸುಂಡಿ, ವೀರೇಶ್ ಕಪ್ಪಗಲ್‌. ಕೃಷ್ಣ ಪುನಿತ್ ಸಂಗನಕಲ್, ಗಂಗಣ್ಣ ಬಾಪೂಜಿ ನಗರ, ಪರಶುರಾಮ್ ಸಿದ್ದಾರ್ಥ ಕಾಲೋನಿ, ಎಲ್ಲಾ , ಗಂಗಾಧರ ಚೇಳಗುರ್ಕಿ,  ಹಾಗೂ ಸಂಘಟನೆಯ ವಿವಿಧ ಪದಾಧಿಕಾರಿಿಗಳು ಇತರರು ಆಗಮಿಸಿದ್ದರು. 


ಸುದ್ದಿ ಓದಿ