ಡಿಕೆಶಿ ವಿರುದ್ದ ರಮೇಶ ಕಿಡಿ : ಸಿದ್ದರಾಮಯ್ಯ ಸಿಎಂ ಇದ್ದಾಗಲೆ ಸತೀಶಗೆ ಈ ಪರಿಸ್ಥಿತಿ : ಬೇರೆ ಯಾರು ಸಿಎಂ ಆಗಿದ್ದರೆ ಗತಿ ಎನು

ಡಿಕೆಶಿ ವಿರುದ್ದ ರಮೇಶ ಕಿಡಿ : ಸಿದ್ದರಾಮಯ್ಯ ಸಿಎಂ ಇದ್ದಾಗಲೆ ಸತೀಶಗೆ ಈ ಪರಿಸ್ಥಿತಿ : ಬೇರೆ ಯಾರು ಸಿಎಂ ಆಗಿದ್ದರೆ ಗತಿ ಎನು

ಬೆಳಗಾವಿ : ನಾನು ಕಾಂಗ್ರೆಸ್ ನಲ್ಲಿ ಇದ್ದಾಗ ಭಂಡಾಯ ಮಾಡಿದಾಗ ಎಲ್ಲರೂ ನನ್ನನ್ನ ಬೈದಿದ್ದರು. ಆದರೆ ಇವತ್ತು ಸತೀಶ್ ಜಾರಕಿಹೋಳಿಯ ಹಿಂಸೆಯಿಂದ ನಾನ್ ಯಾಕೆ ಬಂಡಾಯ ಎದ್ದಿದ್ದೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಅವರ ಕಾಲದಲ್ಲಿ ಸತೀಶ ಅವರಿಗೆ ಹಿಂಸೆ ಆಗುತ್ತಿದೆ. ಸಿದ್ದರಾಮಯ್ಯ ಸಿಎಂ ಇದ್ದಾಗಲೆ ಸತೀಶಗೆ ಈ ಪರಿಸ್ಥಿತಿ‌‌ ಬಂದಿದೆ, ಇನ್ನು ಬೇರೆ ಯಾರಾದ್ರೂ ಸಿಎಂ ಆಗಿದಿದ್ದರೆ ಸತೀಶ ಪರಿಸ್ಥಿತಿ ಏನಾಗುತ್ತಿತ್ತು ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ವಿರುದ್ದ ರಮೇಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.

    ಜಿಲ್ಲೆಯ ಅಥಣಿ ತಾಲೂಕಿನ ನಂದಗಾವ ಗ್ರಾಮದಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದ ರಮೇಶ ಜಾರಕಿಹೊಳಿ ಅವರು, ಸತೀಶ್ ಜಾರಕಿಹೋಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ ರಾಜಕೀಯ ಸಮರ ವಿಚಾರವಾಗಿ ಮಾತನಾಡಿದರು.

   ಅಂದು ಕೆಲವರು ನನ್ನ ಬಂಡಾಯ ವಿರೋಧಿಸಿದ್ದರು. ಅವತ್ತು ನಾನು ಕಾಂಗ್ರೆಸ್ ವಿರುದ್ದ ಬಂಡಾಯ ಎದ್ದಿದ್ದು, ಇಂದು ಜನರಿಗೆ ಅರ್ಥವಾಗಿದೆ. ನಾನು ಬಂಡಾಯ ಎದ್ದಾಗ ಜನರು ನನಗೆ ಬೈದಿದ್ದರು.‌ ಸತೀಶ ಜಾರಕಿಹೊಳಿ ಅವರ ನಡೆಯಿಂದ ಆ ಜನಕ್ಕೆ ಇಂದು ಉತ್ತರ ಸಿಕ್ಕಿದೆ.

ಸಿಎಂ ಸಿದ್ದರಾಮಯ್ಯ ನವರಿಗೆ ಟಾಂಗ್ ಕೊಟ್ಟ ರಮೇಶ್ ಜಾರಕಿಹೊಳಿ :

   ಸಿಎಂ ಸಿದ್ದರಾಮಯ್ಯನವರಿಗೆ ಫ್ರೀ ಹ್ಯಾಂಡ್ ಇಲ್ಲ. ಈ ಅವಧಿಯಲ್ಲಿ ಕೆಲವರು ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಿದ್ದಾರೆ. 2013ರಲ್ಲಿ ಇದ್ದ ಸಿದ್ದರಾಮಯ್ಯನವರು ಈಗಿಲ್ಲ ಎಂದು ರಮೇಶ ಜಾರಕಹೊಳಿ ಸಿಎಂ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.

   ಸಿದ್ದರಾಮಯ್ಯ ಅವರ ಅಂದಿನ ಆ ಮಾತಿನ ದರ್ಪ, ದಕ್ಷತೆ, ಸಿಎಂ ಸಿದ್ದು ಬಳಿ ಕಾಣುತ್ತಿಲ್ಲ. ನಾನು 2013 ರ ಕ್ಯಾಬಿನೆಟ್ ನಲ್ಲಿ ಮಂತ್ರಿಯಾಗಿದ್ದೆ, ಮುಂದೆ ನೋಡೊಣ ಅವರು ಯಾಕೆ ಸೈಲೆಂಟ್ ಆಗಿದ್ದಾರೆಂದು, ತಿಳಿಯುತ್ತಿಲ್ಲ ಅವರ ಬಗ್ಗೆ ಗೌರವವಿದೆ, ಯಾಕೆ ಹೀಗೆ ಮಾಡ್ತಿದ್ದಾರೆ ಗೊತ್ತಿಲ್ಲ. ಕಾಂಗ್ರೇಸ್ ಹೈಕಮಾಂಡ್ ಹಾಗೂ ಸುತ್ತಮುತ್ತಲಿನ ಕೆಲವರು ಅವರನ್ನು ಫ್ರೀ ಬಿಟ್ಟಿಲ್ಲ ಎಂದು ಕುಟುಕಿದರು.

    ರಮೇಶ ಜಾರಕಿಹೊಳಿ-ಜಗದೀಶ ಶೆಟ್ಟರ ಭೇಟಯ ವಿಚಾರವಾಗಿ ಮಾತನಾಡಿ, ಜಗದೀಶ ಶೆಟ್ಟರು ನಮ್ಮ ಪ್ರೀತಿಯ ವ್ಯಕ್ತಿ. ಅವ್ರು ಎಲ್ಲಿದ್ದರೂ ನಮ್ಮ ಹಿರಿಯರು, ಅವರನ್ನು ನಾನು ಸತತವಾಗಿ 06 ನೇ ಸಲ ಭೇಟಿಯಾಗಿದ್ದೆನೆ. ಈ ಸಲ ಅವರ ಭೇಟಿ ವಿಚಾರ ಲೀಕ್ ಆಗಿದೆ. ನಾನು ಅವರನ್ನು ತುಂಬಾ ಸಲ ಮೀಟ್ ಆಗಿದ್ದೆನೆ. ಶೆಟ್ಟರ ಅವರು ಒಳ್ಳೆಯವರು, ನಮ್ಮ ಪಕ್ಷ ಬಿಡಬಾರದಾಗಿತ್ತು, ಬಿಟ್ಟಿದ್ದಾರೆ ದುರ್ದೈವ. ನೋಡೊಣ ಮುಂದಿನ ದಿನಮಾನದಲ್ಲಿ ಏನಾಗುತ್ತೆಂದು. ರಾಜಕೀಯ ಚರ್ಚೆ ಏನೂ‌ ನಡೆದಿಲ್ಲ ವೈಯಕ್ತಿಕವಾಗಿ ಭೇಟಿಯಾಗಿದ್ದೆನೆ. 

ಸುದ್ದಿ ಓದಿ