ಮಹಲಿಂಗಪುರ

ನೇಣಿಗೆ ಶರಣಾದ ಮಲ್ಲಪ್ಪ ಮನೆಗೆ ಡಿಕೆಶಿ ಭೇಟಿ

ನೇಣಿಗೆ ಶರಣಾದ ಮಲ್ಲಪ್ಪ ಮನೆಗೆ ಡಿಕೆಶಿ ಭೇಟಿ
ಮಹಾಲಿಂಗಪುರದಲ್ಲಿ ಇತ್ತೀಚಿಗೆ ಸಾಲ ಬಾಧೆಯಿಂದ ನೇಣಿಗೆ ಶರಣಾದ ನೇಕಾರ ಮಲ್ಲಪ್ಪ ಅದೃಶಪ್ಪ ಯಡಪ್ಪನವರ ಅವರ ಮನೆಗೆ ಕೆಪಿಸಿಸ

ಮೃತನ ಹೆಂಡತಿಗೆ ಸಹಕಾರಿಬ್ಯಾಂಕಿನಲ್ಲಿ ನೌಕರಿ ಭರವಸೆ. 

ಮಹಾಲಿಂಗಪುರ18:  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಭಾನುವಾರ ಮಧ್ಯಾಹ್ನ ಇತ್ತೀಚೆಗೆ ಸಾಲ ಬಾಧೆಯಿಂದ ನೇಣಿಗೆ ಬಲಿಯಾದ ಸ್ಥಳೀಯ ಚಿಮ್ಮಡ ಗಲ್ಲಿಯ ನೇಕಾರ ಮಲ್ಲಪ್ಪ ಅದೃಶಪ್ಪ ಯಡಪ್ಪನವರ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. 

ಮೃತನ ಭಾವಚಿತ್ರಕ್ಕೆ ಮಾಲಾ‍ರ್ಪಣೆ  ಮಾಡಿ ಶ್ರದ್ಧಾಂಜಲಿ ಸಲ್ಲಿಸಿ, ಕುಟುಂಬದ ಸದಸ್ಯರ ಜೊತೆ ಮಾತನಾಡಿ ಕುಟುಂಬದ ಸಂಕಷ್ಟವನ್ನು ಕೂಲಂಕಶವಾಗಿ ತಿಳಿದು ಧೈರ್ಯ ತುಂಬಿ ಮಾತನಾಡಿದ ಅವರು, ಮೃತನ ಹೆಂಡತಿಯಾದ ರಾಣಿ ಅವರಿಗೆ ಎಸ್‌.ಆರ್‌.ಪಾಟೀಲ ಅವರ ಸಹಕಾರಿ ಸಂಘದಲ್ಲಿ ಅಟೆಂಡರ್ ಕೆಲಸವನ್ನು ಕೊಡಿಸುವ ಹಾಗೂ ಸರ್ಕಾರದಿಂದ ಸೌಲಭ್ಯ ಮತ್ತು ಆರ್ಥಿಕ ಸಹಾಯ ಒದಗಿಸುವ ಭರವಸೆ ನೀಡಿದರು ಹಾಗೂ ಕುಟುಂಬದ ಸಂಕಷ್ಟ ಮತ್ತು ಆರ್ಥಿಕ ಸ್ಥಿತಿಯನ್ನು ಕೂಲಂಕುಶವಾಗಿ ವಿವರಿಸಿ ಬರೆದು ಮಾಜಿ ಸಚಿವೆ ಉಮಾಶ್ರೀ ಅವರ ಕಡೆ ನೀಡಲು ಕುಟುಂಬದವರಿಗೆ ನಿರ್ದೇಶಿಸಿ, ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದು ಸರ್ಕಾರದಿಂದ ಸಹಾಯ ಒದಗಿಸುವ ಭರವಸೆ ನೀಡಿದರು. 

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ಅವರು ಮಾತನಾಡಿ, ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಆದೇಶದಂತೆ ತಮ್ಮ ಬ್ಯಾಂಕಿನಲ್ಲಿ ಮೃತನ ಮಡದಿಗೆ ನೌಕರಿ ನೀಡುವ ಭರವಸೆ ನೀಡಿದರು. 

ಮಾಜಿ ಸಚಿವೆ ಉಮಾಶ್ರೀ ಅವರು ಮೃತನ ಕುಟುಂಬದ ಸಂಕಷ್ಟವನ್ನು ಬಿಡಿಬಿಡಿಯಾಗಿ ನಾಯಕರಿಗೆ ವಿವರಿಸಿದರು. 

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕ ಸಿದ್ದಪ್ಪ ಕೊಣ್ಣೂರ, ನಗರ ಘಟಕದ ಅಧ್ಯಕ್ಷ ಈಶ್ವರ ಚಮಕೇರಿ, ಪುರಸಭಾ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಮಲ್ಲಪ್ಪ ಬಾವಿಕಟ್ಟಿ, ಶಂಕರ ಸೊನ್ನದ, ವಿನೋದ ಸಿಂಪಿ ಇತರರು ಇದ್ದರು. 




ಸುದ್ದಿ ಓದಿ