ದೂಧಗಂಗಾ ನದಿಗೆ ನೀರು ಬಿಡುಗಡೆ ಮಾಡಲು ರೈತರ ಒತ್ತಾಯ
ಮಾಂಜರಿ 04: ಕಳೆದ ಸಾಲಿನಲ್ಲಿ ಪ್ರವಾಹ ಮತ್ತು ಧಾರಾಕಾರ ಸುರಿದ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ದೂಧಗಂಗಾ ನದಿ ಕಳೆದ 8-10 ದಿನಗಳಿಂದ ನದಿಯಲ್ಲಿನ ನೀರಿನ ಪ್ರಮಾಣ ಸಂಪೂರ್ಣವಾಗಿ ಬತ್ತಲಾರಂಭಿಸಿದ್ದು, ದಿನಗಳು ಕಳೆದಂತೆ ನೀರು ಕಡಿಮೆಯಾಗುತ್ತಿರುವುದರಿಂದ ರೈತರಲ್ಲಿ ಮತ್ತು ನದಿ ತೀರದ ಜನತೆಯಲ್ಲಿ ಆತಂಕ ಮೂಡಿಸಿದೆ. ನೀರಿನ ಪ್ರಮಾಣ ಕುಸಿಯುತ್ತಿರುವುದರಿಂದ ಬೆಳೆಗಳು ಕಮರಿ ಹೋಗುತ್ತಿದ್ದು, ಮೇವಿನ ಕೊರತೆ ಉಲ್ಬನಗೊಳ್ಳುತ್ತಿದೆ. ದೂಧಗಂಗಾ ನದಿಯ ನೀರಿನ ಮೇಲೆ ಸುಮಾರು 30ಗ್ರಾಮಗಳು ಅವಲಂಬಿಸಿವೆ. ರೈತರ ಜೊತೆಗೆ ಸಾರ್ವಜನಿಕರನ್ನೂ ಆತಂಕವನ್ನುಂಟು ಮಾಡಿದೆ. ದೂಧಗಂಗಾ ನದಿಯ ನೀರಿನ್ನು ಕೊಗನೋಳಿ, ಬಾರವಾಡ, ಮಾಂಗೂರ, ಕಾರದಗಾ, ಬೇಡಿಕಿಹಾಳ, ಶಮನೆವಾಡಿ, ಶಿರದವಾಡ, ಜನವಾಡ, ಸದಲಗಾ, ಯಕ್ಸಂಬಾ ಸೇರಿದಂತೆ ಅನೇಕ ಗ್ರಾಮಗಳು ಕುಡಿಯುವ ನೀರಿಗೆ ಬಳುಸುತ್ತಾರೆ, ಅದಲ್ಲದೆಯಾತ ನೀರಾವರಿ ಯೋಜನೆಗಳು, ಗಂಗಾ ಕಲ್ಯಾಣ ಯೋಜನೆಗಳು, ವೈಯಕ್ತಿಕ ನಿರಾವರಿ ಯೋಜನೆಗಳ ಸಾವಿರಾರು ನೀರಾವರಿ ಪಂಪಸೆಟ್ ಅಳವಡಿಸಿದ್ದಾರೆ. ಮಾರ್ಚ, ಎಪ್ರೀಲ ಮತ್ತು ಮೇ ಹೀಗೆ ಮೂರು ತಿಂಗಳ ಕಾಲ ಹೇಗೆ ಕಳೆಯಬೇಕೆಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಕಾಳಮ್ಮಾವಾಡಿ ಜಲಾಶಯದಿಂದ ಮಾರ್ಚ ಮೊದಲ ವಾರದಿಂದಲೆ ದೂಧಗಂಗಾ ನದಿಗೆ ನೀರು ಬಿಡುವ ಅಗತ್ಯವಿದೆ ಎಂದು ನದಿಯತೀರದ ಜನತೆಯ ಅಳಲಾಗಿದೆ. ಮಾರ್ಚ, ಎಪ್ರೀಲ ಮತ್ತು ಮೇ ತಿಂಗಳಲ್ಲಿ ಉಭಯ ರಾಜ್ಯಗಳು ನಿಗದಿ ಪಡೆಸಿರುವ ಕೋಟಾದಂತೆ ನೀರು ಬಿಡುಗಡೆ ಮಾಡಬೇಕೆಂದು ರೈತರ ಒತ್ತಾಯವಾಗಿದೆ.