ಹಗರಿಬೊಮ್ಮನಹಳ್ಳಿ

ಬೈಲುಪತ್ತಾರರ ವಾಸ ಸ್ಥಳಕ್ಕೆ ಜಿಲ್ಲಾಧಿಕಾರಿ ಅನಿರುಧ್ಧ ಶ್ರವಣ್ ಭೇಟಿ

ಬೈಲುಪತ್ತಾರರ ವಾಸ ಸ್ಥಳಕ್ಕೆ ಜಿಲ್ಲಾಧಿಕಾರಿ ಅನಿರುಧ್ಧ ಶ್ರವಣ್ ಭೇಟಿ

ಹಗರಿಬೊಮ್ಮನಹಳ್ಳಿ.ಜೂ.29 : ಪಟ್ಟಣದ ಹಳೇ ಹಗರಿಬೊಮ್ಮನಹಳ್ಳಿಯ ಪಾಪುಸ್ವಾಮಿ ಪ್ರೌಢಶಾಲೆಯ ಬಳಿ ವಾಸಿಸುತ್ತಿರುವ ಬೈಲುಪತ್ತಾರರ ನಿವೇಶನಗಳಿಗೆ ವಿಜಯನಗರ ಜಿಲ್ಲಾಧಿಕಾರಿ ಅನಿರುಧ್ಧ ಶ್ರವಣ್ ಭೇಟಿ ನೀಡಿದರು. 

ಬೈಲು ಪತ್ತಾರರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿ ವಸತಿ ರಹಿತ ಫಲಾನುಭವಿಗಳ ಪಟ್ಟಿ ತಯಾರಿಸುವಂತೆ ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಮುಗಳಿ ಅವರಿಗೆ ತಿಳಿಸಿದರು.ನಿವೇಶನ ಸಮೀಕ್ಷೆ ಮಾಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಪ್ರಸ್ತಾವನೆ ಸಲ್ಲಿಸಲು ಹೇಳಿದರು. 

ಪುರಸಭೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಗೆ ಇತ್ತಿಚೇಗೆ ಪೌರ ನೌಕರರ ಸಂಘದ ರಾಜ್ಯಧ್ಯಕ್ಷರಾಗಿ ಆಯ್ಕೆಯಾದ ಕೆ.ಪ್ರಭಾಕರ ಅವರು ಜಿಲ್ಲಾದಿಕಾರಿಗಳಿಗೆ ಸನ್ಮಾನಿಸಿದರು, ನಂತರ ತಹಶಿಲ್ದಾರ್ ಕಚೇರಿಗೆ ತೆರಳಿ ವಿವಿಧ ಕಡತಗಳನ್ನು ಪರೀಶೀಲಿಸಿದರು. 

ಈ ಸಂಧರ್ಭಧಲ್ಲಿ ವ್ಯೆವಸ್ಥಾಪಕ ಚಂದ್ರಶೇಖರ, ಕಂದಾಯ ಅಧಿಕಾರಿ ಮಾರೆಪ್ಪ, ಸಿಬ್ಬಂದಿಗಳಾದ ಗುಡದಯ್ಯ, ಚಂದ್ರು, ಮಾರುತಿ, ವೀರಭದ್ರಯ್ಯ ಇದ್ದರು. 


ಸುದ್ದಿ ಓದಿ