ಎಲೆಮರೆಯ ಕಾಯಂತಿರುವ ಕುಂಚ ಕಲಾವದಿ ರಂಗನಾಥ್
ಮಹಾಲಿಂಗಪುರ 26: ಕುಂಚದ ಕಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದ ಸ್ಥಳೀಯ ಯುವಕ ಡಿ.ಕೆ. ರಂಗನಾಥ್ ಅವರು ಬಿಡಿಸಿದ ಶ್ರೀ ಚನ್ನಗಿರಿಶ್ವರ ದೇವಸ್ಥಾನದ ವಿಹಂಗಮ ನೋಟ ಬಲು ಸುಂದರವಾಗಿ ಮೂಡಿಬಂದಿದೆ. ಎರಡು ದಶಕಗಳ ಹಿಂದಿನ ಹಾಗೂ ಪ್ರಸ್ತುತ ಮಹಾಲಿಂಗಪುರ ನಗರದ ವಿವಿಧ ಪ್ರದೇಶಗಳ ಇವರ ಕುಂಚದಲ್ಲಿ ಅರಳಿದ ಚಿತ್ರಣಗಳು ಜನರ ಮನ ಸೂರೆಗೊಂಡಿವೆ. ಶ್ರೀಗುರು ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಮಂಗಳವಾರ ಸಂತೆ ಪೇಟೆಯ ಸ್ಥಳ, ಗಾಂಧಿ ವೃತ್ತ, ಬಸವೇಶ್ವರ ವೃತ್ತ ಹಾಗೂ ಪ್ರದೇಶ, ಹಳೆಯ ಎಸ್ಸಿಪಿ ಹೈಸ್ಕೂಲ್, ಮಹಬೂಬ್ ಸುಭಾನಿ ದರ್ಗಾ, ಹನುಮಾನ ಮಂದಿರ, ಸರಕಾರಿ ಹಿರಿಯ ಗಂಡು ಮಕ್ಕಳ ಶಾಲೆ, ಹಳೆಯ ಬಸ್ಟ್ಯಾಂಡ್, ರೈತನ ಬದುಕು ಹೀಗೆ ಇನ್ನು ಅನೇಕ ತೈಲಚಿತ್ರಗಳು ಬಹಳ ಸುಂದರವಾಗಿ ಮೂಡಿ ಬಂದಿದ್ದು ವ್ಯಾಟ್ಸಪ್ ಹಾಗೂ ಫೇಸ್ಬುಕ್ ಗಳಲ್ಲಿ ವೈರಲ್ ಆಗಿವೆ. ಇಂತಹ ಪ್ರತಿಭೆಗಳು ಎಲೆಮರೆಯ ಕಾಯಿಯಂತೆ ತಮ್ಮ ಪ್ರಾಮಾಣಿಕ ಕಾರ್ಯಗಳನ್ನು ಮಾಡುತ್ತಿರುತ್ತಾರೆ ಎನ್ನುವುದಕ್ಕೆ ಇವರ ಕಲೆಯೇ ಸಾಕ್ಷಿ.