ಮಹಲಿಂಗಪುರ

ಕುತೂಹಲ ,ದಾಹ ಮನುಷ್ಯನನ್ನು ಉತ್ತುಂಗಕ್ಕೆ ಒಯ್ಯುತ್ತವೆ : ಎಸ್‌.ಎನ್‌.ಬ್ಯಾಳಿ

ಕುತೂಹಲ ,ದಾಹ ಮನುಷ್ಯನನ್ನು ಉತ್ತುಂಗಕ್ಕೆ ಒಯ್ಯುತ್ತವೆ : ಎಸ್‌.ಎನ್‌.ಬ್ಯಾಳಿ

ಮಹಾಲಿಂಗಪುರ : ಕುತೂಹಲ ಮತ್ತು ದಾಹ ಮನುಷ್ಯನನ್ನು ಉತ್ತುಂಗಕ್ಕೆ ಒಯ್ಯುತ್ತವೆ ಅದನ್ನು ಕೆರಳಿಸುವ ಕೆಲಸ ಮಾಡಬೇಕು ಎಂದು ಸಿಆರ್‌ಪಿ ಎಸ್‌.ಎನ್‌.ಬ್ಯಾಳಿ ಹೇಳಿದರು. 

ಸ್ಥಳೀಯ ಬಸವಾನಂದ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸಿದ್ದಗಂಗೆ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಜಾ ಅವಧಿಯಲ್ಲಿ ಅತೀ ಕಡಿಮೆ ಶುಲ್ಕದಲ್ಲಿ ಗ್ರಾಮೀಣ ಮಕ್ಕಳಿಗೆ ಸಿದ್ಧಗಂಗಾ ಶ್ರೀಗಳ ಹೆಸರಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಸತತ ಪರಿಶ್ರಮದಿಂದ ಸರ್ವವೂ ಸಾಧ್ಯ, ಶಿಸ್ತು, ದೃಢ ಸಂಕಲ್ಪ, ಅರೆ​‍್ಣ, ಭಕ್ತಿ, ಪ್ರೀತಿಯಿಂದ ದಿನದಲ್ಲಿ 8  ಗಂಟೆ ಅಧ್ಯಯನ, 8 ಗಂಟೆ ನಿದ್ರೆ, 8 ಗಂಟೆ ಇತರೆ ಚಟುವಟಿಕೆ ಅಳವಡಿಸಿಕೊಂಡು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಲು ತಿಳಿಸಿದರು. 

ಡಾ.ಬಿ.ಡಿ.ಸೋರಗಾವಿ ಮಾತನಾಡಿ, ನಿಧಾನವಾಗಿದ್ದರೂ ನಿರಂತರ ಓದು ಜಯ ತಂದು ಕೊಡುತ್ತದೆ ಹಾಗಾಗಿ ನಿರಂತರ ಅಧ್ಯಯನವಿರಲಿ ಎಂದರು. ಶಶಿಧರ ಉಳ್ಳಾಗಡ್ಡಿ ಮಾತನಾಡಿ, ಹೆತ್ತವರ ಶ್ರಮ, ತ್ಯಾಗಕ್ಕೆ ಬೆಲೆ ನೀಡಿ, ಟಿವ್ಹಿ, ಮೊಬೈಲ್‌ಗಳಿಂದ ದೂರವಿದ್ದು,ಉತ್ತಮ ಅಂಕಗಳಿಸಿ ಸ್ವಾವಲಂಬಿಯಾಗಿ ಹೆತ್ತವರ ಹೊರೆ ಕಡಿಮೆ ಮಾಡಿ ಎಂದರು.  

ಪತ್ರಕರ್ತ ನಾರನಗೌಡ ಉತ್ತಂಗಿ ಮಾತನಾಡಿ, ಉತ್ತಮ ಮಾರ್ಗದರ್ಶನ ಇಲ್ಲದೇ ಇಂದು ಗ್ರಾಮೀಣ ಪ್ರತಿಭಾವಂತ ಮಕ್ಕಳು ಅವಕಾಶ ವಂಚಿತರಾಗುತ್ತಿದ್ದಾರೆ, ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ  ಅತ್ಯವಶ್ಯವಿರುವ ಅಡ್ವಾನ್ಸ್‌ ಸ್ಟಡಿ ಮಾಡಿಸಿ ಮಕ್ಕಳಿಗೆ ಬೆಳಕು ನೀಡುತ್ತಿರುವ ಶಿಬಿರದ ಕಾರ್ಯ ಮಾದರಿ ಎಂದರು.  ಸದಸ್ಯ ಕಲ್ಲಪ್ಪ ಚಿಂಚಲಿ, ಎಂ.ಎಂ.ಕೊಣ್ಣೂರ, ಶಿವಾನಂದ ಬಸೆಟ್ಟಿ, ಶಿಕ್ಷಕರಾದ ಎಚ್‌.ಐ.ಸುತಾರ, ಸಿ.ಕೆ.ಮುರಗೋಡ, ವ್ಹಿ.ಎ.ಕಾಗಿ, ಆರ್‌.ಎ.ನಡುವಿನಮನಿ,ಎಂ.ಪಿ.ಕಾಗಿ, ಸಿ.ಎ.ಪಡತಾರೆ, ಎಸ್,ಎ,ಅಗಸರ, ಎಸ್‌.ಜಿ.ಗಂಡಿ ಇತರರಿದ್ದರು. ಶಿಕ್ಷಕ ಸಿದ್ಧಾರೂಢ ಮುಗಳಖೋಡ ಪ್ರಾಸ್ತಾವಿಕವಾಗಿ ಮಾತನಾಡಿದರು,ುಶಿಕ್ಷಕ ಎಸ್‌.ಡಿ.ಕಾಂಬ್ಳೇಕರ ಸ್ವಾಗತಿಸಿ, ಶಿಕ್ಷಕ ಸಿ.ವ್ಹಿ. ಹುಣಶ್ಯಾಳ ನಿರೂಪಿಸಿದರು. 


  



ಸುದ್ದಿ ಓದಿ