ಮಗನ ಅಂತ್ಯಕ್ರಿಯೆಗೆ ಹಣವಿಲ್ಲದೆ ಹೆತ್ತ ತಾಯಿಯ ಗೋಳಾಟ : ಅಂತ್ಯಕ್ರಿಯೆಗಾಗಿ ಮೋರೆಯವರಿಗೆ ಶವ ಹಸ್ತಾಂತರ : ಬೆಳಗಾವಿಯಲ್ಲೊಂದು ಮನಕುಲಕುವ ಘಟನೆ
ಬೆಳಗಾವಿ : ತಾನು ಜನ್ಮ ನೀಡಿದ್ದ ಮಗನ ಸಾವಿನ ಬಳಿಕ ಆತನ ಅಂತ್ಯಕ್ರಿಯೆಗೆ ಹಣ ಮತ್ತು ಸಂಬಂಧಿಕರಿಲ್ಲದೆ ಆಸ್ಪತ್ರೆಯಲ್ಲಿ ಪರದಾಡಿ ಕೊನೆಗೆ ವೈದ್ಯಾಧಿಕಾರಿಗಳಲ್ಲಿ ಅಂತ್ಯಕ್ರಿಯೆ ನಡೆಸಿಕೊಡುವಂತೆ ಪತ್ರ ಬರೆದು ಬಡ ಮಹಾ ತಾಯಿಯೋರ್ವಳು ಬೇಡಿಕೊಂಡಿರುವ ಮನಕುಲುಕುವ ಘಟನೆಯೊಂದು ಬೆಳಗಾವಿ ನಗರದಲ್ಲಿ ಇಂದು ನಡೆದಿದೆ.
ಹೌದು ಓದುಗರೇ ಇಂತಹ ಹೃದಯವಿದ್ರಾವಕ ಘಟನೆ ಬೆಳಗಾವಿಯಲ್ಲಿ ಜರುಗಿದ್ದು, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ನಿಲವ್ವ ಎನ್ನುವ ಮಹಿಳೆಯು ತಾನು ಹೆತ್ತ ಮಗನಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ 15 ದಿನಗಳ ಹಿಂದೆ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು.
ಆದರೆ ಮಗ ಹಠಾತ್ ವಾಗಿ ಶುಕ್ರವಾರ ತೀರಿಕೊಂಡಿದ್ದಾನೆ. ಮಗನ ಅಂತ್ಯಕ್ರಿಯೆ ಮಾಡಲು ನಿಲವ್ವ ಅವರಿಗೆ ಯಾವ ಸಂಬಂಧಿಕರು ಇಲ್ಲದೆ ಇರುವದರಿಂದ ಹಾಗೂ ಹಣ ಇಲ್ಲದಿರುವದರಿಂದ ಒಂದು ದಿನಾ ಬಿಮ್ಸ್ ಆಸ್ಪತ್ರೆಯ ಶಾವಾಗಾರದಲ್ಲಿ ಮೃತ ಮಗನ ಶವವನ್ನು ಇರಿಸಲಾಗಿತ್ತು. ಬಳಿಕ ವೈದ್ಯಾಧಿಕಾರಿಗಳಲ್ಲಿ ಪತ್ರ ಒಂದನ್ನು ಬರೆದು ನನ್ನ ಮಗನ ಅಂತ್ಯಕ್ರಿಯೆ ನಡೆಸಿಕೊಡುವಂತೆ ಹೆತ್ತ ಕರಳು ಬೇಡಿಕೊಂಡಿದ್ದಾಳೆ.
ಅದರಂತೆ ವೈದ್ಯಾಧಿಕಾರಿಗಳು ನಿಲವ್ವನ ಮಗನ ಅಂತ್ಯಕ್ರಿಯೆಗಾಗಿ ಅಂಬ್ಯುಲನ್ಸ್ ವ್ಯವಸ್ಥೆ ಮೂಲಕ ಅಂತ್ಯಕ್ರಿಯೆಗಾಗಿ ಸಮಾಜ ಸೇವಕ ಹಾಗೂ ಬೆಳಗಾವಿ ಪಾಲಿಕೆ ಮಾಜಿ ಮಹಾಪೌರ ವಿಜಯ ಮೋರೆ ಅವರಿಗೆ ಸುದ್ದಿ ತಿಳಿಸಿದ್ದಾರೆ.
ಬಳಿಕ ಸ್ಥಳಕ್ಕೆ ಆಗಮಿಸಿದ ವಿಜಯ ಮೋರೆ ಅವರ ಪುತ್ರ ಅಲನ್ ಮೋರೆ ಹಾಗೂ ಗಂಗಾಧರ ಪಾಟೀಲ ಮತ್ತು ಬೆಂಬಲಿಗರು ಮೃತ ಮಗನ ಶವವನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೇರವೇರಿಸಿದ್ದಾರೆ.