ರಾಜಾರೋಷವಾಗಿ ಕಳತನಕ್ಕೆ ಇಳಿದಿರುವ ದುಷ್ಕರ್ಮಿಗಳು: ಭಯದಲ್ಲಿ ಜನತೆ
ರಾತ್ರಿ ಹೊತ್ತು ಸೂಕ್ತ ಬಂದೋಬಸ್ತ್ ಏರ್ಪಡಿಸಿ ಕಳ್ಳರನ್ನು ಮಟ್ಟ ಹಾಕಲು ಠಾಣಾಧಿಕಾರಿ ಪ್ರವೀಣ ಬಿಳಿಗಿಗೆ ಕೋಳಿಗುಡ್ಡ ಮನವಿ
ಮಹಾಲಿಂಗಪುರ 04: ಇತ್ತೀಚಿಗೆ ಮಹಾಲಿಂಗಪುರ ಪಟ್ಟಣದಲ್ಲಿ ರಾತ್ರಿ ಹೊತ್ತಿನಲ್ಲಿ ಮಾರಣಾಂತಿಕ ಆಯುಧಗಳನ್ನು ಹಿಡಿದುಕೊಂಡು ಪರಿವಾರ ಸದಸ್ಯರ ಉಪಸ್ಥಿತಿಯಲ್ಲಿಯೇ ಯಾರಿಗೂ ಹೆದರದೆ ರಾಜಾರೋಷವಾಗಿ ಕಳತನಕ್ಕೆ ಇಳಿದಿರುವ ದುಷ್ಕರ್ಮಿಗಳ ಕಾರ್ಯಕ್ಕೆ ಮಹಾಲಿಂಗಪುರ ಜನತೆ ಭಯಭೀತರಾಗಿದ್ದಾರೆ ಎಂದು ಎಂಪಿಎಂಸಿ ದಲಾಲ ವರ್ತಕರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ಠಾಣಾಧಿಕಾರಿ ಪ್ರವೀಣ ಬಿಳಿಗಿ ಅವರ ಮುಂದೆ ಕಳವಳ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಸೂಕ್ತ ಬಂದೋಬಸ್ತ್ ಏರಿ್ಡಸಿ ಕಳ್ಳತನವಾಗದಂತೆ ಸಾರ್ವಜನಿಕ ವಲಯದಲ್ಲಿಯ ಭಯದ ವಾತಾವರಣ ನಿರ್ಮೂಲನೆಗೊಳಿಸಲು ಮಂಗಳವಾರ ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಇದೆ ಜೂನ್ 28ರಂದು ವಿದ್ಯಾನಗರದ 6 ಮನೆಗಳಲ್ಲಿ ಮನೆ ಸದಸ್ಯರು ಮಲಗಿದ್ದ ವೇಳೆಯಲಿಯೇ ಅಂದಾಜು 50ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಬಂಗಾರ ದರೋಡೆ ವ ಕಳ್ಳತನಗಳಾಗಿವೆ.
ಈ ಮುಂಚೆ ವರ್ಷಗಳ ಹಿಂದೆ ಸೇರಿದಂತೆ ಇತ್ತಿಚೆ 7/8 ತಿಂಗಳುಗಳ ಹಿಂದೆಯೂ ಎಪಿಎಂಸಿ ಯಾರ್ಡ್ ನಲ್ಲಿ 4 ಅಂಗಡಿಗಳ ಕೀಲಿ ಮುರಿದ ಕಳ್ಳರು ಲಕ್ಷಾಂತರ ಹಣವನ್ನು ದೋಚಿಕೊಂಡು ಹೋಗಿದ್ದರು.ಇದು ಮಾಸುವ ಮುನ್ನವೇ ಮತ್ತೊಂದು ಸರಣಿ ಕಳ್ಳತನ ನಡೆಯುತ್ತಿದೆ ಎಂದರೆ ಹೇಗೆ. ಮುಂದೆಯೂ ಕಳ್ಳರು ತಮ್ಮ ಕೈಚಳಕ ತೋರಿಸಬಹುದು. ಆಯುಧ ಸಮೇತರಾಗಿ ಬರುವ ಕಳ್ಳರು ಜೀವ ತೆಗೆಯಲೂ ಹೇಸುವವರಲ್ಲ ಉಂಡೂ ಹೋದ ಕೊಂಡು ಹೋದ ಎಂಬ ಗಾದೆಯಂತೆ ಆಗಬಾರದು ಇದಕ್ಕೆ ಮುಂಚೆ ಪೋಲಿಸ್ ಇಲಾಖೆ ಎಚ್ಚೆತ್ತು ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿಯ ಚಂದ್ರು ಗೊಂದಿ, ಬಸವರಾಜ್ ಭಟ್ಕುರ್ಕಿ, ವಿನಯ ಚಮಕೇರಿ, ಕೇದಾರಿ ಹುರಕಡ್ಲಿ, ಸಂತೋಷ ಕಲ್ಯಾಣಿ, ಬಸವರಾಜ ನುಚ್ಚಿ, ಈಶ್ವರ ಹುರಕಡ್ಲಿ, ಶ್ರೀಶೈಲ ಜಮಖಂಡಿ, ಸಂಗಪ್ಪ ಲೋಣಿ, ಮಹಾಂತೇಶ ವಜ್ರಮಟ್ಟಿ, ವಿಜಯ ಬಾಡನವರ, ಉಲ್ಲಾಸ ಪಟ್ಟಣಶೆಟ್ಟಿ ಮುಂತಾದವರಿದ್ದರು.