ಮಹಲಿಂಗಪುರ

ಐದು ದಿನಗಳ ಕಾಲ ಕ್ರಿಕೆಟ್ ಲವರ್ಸ್‌ ಟ್ರೋಫಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ

ಐದು ದಿನಗಳ ಕಾಲ ಕ್ರಿಕೆಟ್ ಲವರ್ಸ್‌ ಟ್ರೋಫಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ

ಮಹಾಲಿಂಗಪುರ 19: ಸ್ಥಳೀಯ ಆಜಾದ್ ಕ್ರಿಕೆಟ್ ಕ್ಲಬ್ ಹಾಗೂ ಸಿಎಲ್‌. ಟ್ರೋಫಿ ಇವರ ಸಂಯುಕ್ತ ಆಶ್ರಯದಲ್ಲಿ 22ನೆಯ ಬಾರಿಯ ಆಜಾದ್ ಕ್ರಿಕೆಟ್ ಲವರ್ಸ್‌ ಟ್ರೋಫಿ ಡಿ. 22ರಿಂದ 26ರವರೆಗೆ ಅಂತರಾಜ್ಯಮಟ್ಟದ ನಿಗದಿತ ಓವರುಗಳ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಅಂಗಡಿಯವರ ಮೈದಾನದಲ್ಲಿ ನಡೆಯಲಿದೆ. 

ಈ ಪಂದ್ಯಾವಳಿಗೆ ಪ್ರಥಮ ಬಹುಮಾನ ನಗದು 50 ಸಾವಿರ ರೂಗಳನ್ನು ಶ್ರೀಶೈಲ್ ಬಜಂತ್ರಿ ಹಾಗೂ ದ್ವಿತೀಯ ಬಹುಮಾನ 25 ಸಾವಿರ ರೂಗಳನ್ನು ಯುವ ಧುರಿಣರಾದ ವಿದ್ಯಾಧರ ಸವದಿ ನೀಡಿದ್ದು, ಅಲ್ಲದೆ ಇನ್ನೂ ಅನೇಕರು ಆಕರ್ಷಕ ವೈಯಕ್ತಿಕ ಬಹುಮಾನಗಳನ್ನು ಸಹ ನೀಡಿದ್ದಾರೆ.  

ಅಂತರಾಜ್ಯಮಟ್ಟದ ಹೆಸರಾಂತ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಕಳೆದ ಎರಡು ವರ್ಷಗಳ ಕೋವಿಡ್ ಮಹಾಮಾರಿಯ ಕಾರಣದಿಂದ ಯಾವುದೇ ಬೃಹತ್ ಪಂದ್ಯಾವಳಿಗಳನ್ನು ವೀಕ್ಷಿಸಲು ಸಾಧ್ಯವಾಗಿರಲಿಲ್ಲ. 

ಈ ಪಂದ್ಯಾವಳಿಯಲ್ಲಿ ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಡಿಸೆಂಬರ್ 20 ಆಗಿದ್ದು ಹೆಸರು ನೋಂದಾಯಿಸುವ ಹಾಗೂ ಹೆಚ್ಚಿನ ಮಾಹಿತಿಗಾಗಿ ಪೈಗಂಬರ್ ಪೆಂಡಾರಿ-7892682862, ಸಿಕಂದರ್ ಸಂಗ್ಲಿಕರ್‌-9945259633, ಯಾಸಿನ್‌-8123663354 ಇವರನ್ನು ಸಂಪರ್ಕಿಸಲು ಕೋರಲಾಗಿದೆ ಎಂದು ಕ್ರಿಕೆಟ್ ಲವರ್ಸ್‌ ಟ್ರೋಫಿ ಸಂಚಾಲಕರಾದ ಮೀರಾ ತಟಗಾರ, ಪ್ರಕಟಣೆ ಮೂಲಕ ತಿಳಿಸಿದ್ದಾರೆ.  

ಈ ಸಂದರ್ಭದಲ್ಲಿ ಆಜಾದ್ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾದ ಜಾವೇದ್‌.ಎಮ್‌. ಬಾಗವಾನ, ಕ್ರಿಕೆಟ್ ಲವರ್ಸ್‌ ಟ್ರೋಫಿ ಅಧ್ಯಕ್ಷರಾದ ಶೇಖರ್ ಅಂಗಡಿ, ಸಂಚಾಲಕರು ಶ್ರೀಕಾಂತ್ ಡಿ ಮಾಗಿ ಉಪಸ್ಥಿತರಿದ್ದರು. 


ಸುದ್ದಿ ಓದಿ