ಮುದ್ದೆಬಿಹಾಲ್

ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು ಮುಖ್ಯ: ದೇಸಾಯಿ

ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು ಮುಖ್ಯ: ದೇಸಾಯಿ

ಮುದ್ದೇಬಿಹಾಳ: ಪಠ್ಯ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆಯುವುದಕ್ಕೆ ಸೀಮಿತಗೊಳಿಸದೇ ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು ಮುಖ್ಯ ಜೊತೆಗೆ ರಚನಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೆ ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲೊಂದಾದ ವಿಜ್ಞಾನ ತಂತ್ರಜ್ಞಾನದ ಕುರಿತು ಅರಿತುಕೊಳ್ಳುವ ಮೂಲಕ ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸುವ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಭುಗೌಡ ಚ ದೇಸಾಯಿ ಹೇಳಿದರು. 

ಪಟ್ಟಣದ ಹುಡ್ಕೋ ಬಡಾವಣೆಗೆ ಹೊಂದಿರುವ ಪ್ರಾರ್ಥನಾ ವಿದ್ಯಾಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಕೌಶಲ್ಯ ವಸ್ತು ಪ್ರದರ್ಶನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.  

ಶಾಲೆಗಳಲ್ಲಿ ಏರಿ​‍್ಡಸುವ ವಸ್ತು ಪ್ರದರ್ಶನಗಳು ಮಕ್ಕಳ ಬುದ್ಧಿ ಮಟ್ಟ ವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಬೆಳ ವಣಿಗೆ ಹೆಚ್ಚುತ್ತಿದ್ದು ಮಕ್ಕಳು ಹಾಗೂ ಪೋಷಕರು ಇಂತಹ ವಸ್ತು ಪ್ರದರ್ಶನ ಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಸಹಕಾರಿಯಾಗುತ್ತದೆ ಎಂದರು. 

 ಮಕ್ಕಳು ತಯಾರಿಸಿಕೊಂಡು ಬಂದ  ವಿಜ್ಞಾನ ಮಾದರಿಯ ವಸ್ತು ಪ್ರದರ್ಶನವನ್ನು ವೀಕ್ಷಿಸಿದಾಗ ಮಕ್ಕಳು ಅತಿ ಉತ್ಸಾಹದಿಂದ ಪಾಲ್ಗೊಂಡಿದ್ದು, ತಾವು ತಯಾರಿಸಿಕೊಂಡು ಬಂದಿರುವ ವಿವಿಧ ಮಾದರಿಯ ವಸ್ತುಗಳ ಬಗ್ಗೆ ವಿವರ ಗಳನ್ನು ನೀಡುತ್ತಿರುವುದನ್ನು ಕಂಡು ಸಂತೋಷವಾಯಿತು. ಶಾಲೆಯಲ್ಲಿ ಓದುವ ಮಕ್ಕಳು ಪುಸ್ತಕದ ಹುಳುವಾಗದೆ ಇತರೆ ವಿಷಯಗಳ ಬಗ್ಗೆ, ಪಠ್ಯೇತರ ಚಟುವಟಿಕೆ ಬಗ್ಗೆಯೂ ಹೆಚ್ಚಿನ ಆಸಕ್ತಿಯನ್ನು ವಹಿಸ ಬೇಕಾಗಿದೆ. ವಸ್ತು ಪ್ರದರ್ಶನದಲ್ಲಿ ಭಾಗ ವಹಿಸುವಾಗ ಮಕ್ಕಳು ಹಿಂಜರಿಕೆಯನ್ನು ಬಿಟ್ಟು ತಮಗೆ ತೋಚಿದ ವಿಷಯಗಳ ಬಗ್ಗೆ ಮಾದರಿಯನ್ನು ಮಾಡಿಕೊಂಡು ಆಸಕ್ತಿ ಯಿಂದ ಭಾಗವಹಿಸಬೇಕು. 

ಜತೆಗೆ ಪಾಲಕರು ತಮ್ಮ ಮಕ್ಕಳನ್ನು ಕೇವಲ ಇಂಜಿನಿಯರ ಡಾಕ್ಟರಾಗಬೇಕು ಎಂದು ತಮ್ಮ ಕನಸಿನಂತೆ ಓದಿಸದೇ ಬಲವಂತದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡದೇ ಮಕ್ಕಳ ನೈಜ ಆಸಕ್ತಿಯಂತೆ ಶಿಕ್ಷಣ ಕೊಡಿಸಲು ಮುಂದಾಗಬೇಕು ಅಂದಾಗ ಮಾತ್ರ ಆ ಮಗು ಸ್ವತಂತ್ರವಾಗಿ ಸಾಧನೆ ಶಿಖರ ಏರಲು ಸಾಧ್ಯ ಎಂದರು. 

ಇಂದು ಜಗತ್ತು ತಾಂತ್ರಿಕವಾಗಿ ಬೆಳೆಯುತ್ತಿರುವ ಇಂದಿನ ಯುಗವನ್ನು ಜ್ಞಾನದ ಯುಗ ವ್ಯಾಖ್ಯಾನಿಸಬಹುದು. ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಕ್ಷ ರಾಭ್ಯಾಸ ಇದ್ದರೆ ಸಾಕಾಗಾದು. ಜತೆಗೆ ಜ್ಞಾನದ ಅವಶ್ಯಕತೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲೇ ಮಕ್ಕಳಿಗೆ ವಿಜ್ಞಾನ ಶಿಕ್ಷ ಣದ ಬಗ್ಗೆ ಅಭಿರುಚಿ ಬೆಳೆಸುವುದು ಅತ್ಯವಶ್ಯಕವಾಗುತ್ತದೆ ಎಂದರು. 

ಈ ನಿಟ್ಟಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ವಿಜ್ಞಾನ ತಂತ್ರಜ್ಞಾನಕ್ಕೆ ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ವಿಜ್ಞಾನಿಗಳಿಗೆ ಸ್ಪೂರ್ತಿ ತುಂಬುತ್ತಿದ್ದಾರೆ ಈ ಹಿನ್ನೇಲೆಯಲ್ಲಿ ಇಡಿ ವಿಶ್ವದಲ್ಲೇ ಭಾರತ ವಿಜ್ಞಾನ ಕ್ಷೇತ್ರ ಮುಂದುವರೆದು ಮಾದರಿಯ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದರು. 

ಈ ವೇಳೆ ಪೌರಾಢಳಿತ ಇಲಾಖೆ ಅಧಿಕಾರಿ, ಜೆಸಿ ಸಂಸ್ಥೆ ಮಾಜಿ ಅಧ್ಯಕ್ಷ ಅರವಿಂದ ಜಮಖಂಡಿ ಅವರು ಮಾತನಾಡಿ ಕಳೇದ ಹಲವು ವರ್ಷಗಳಿಂದ  ಮಕ್ಕಳಿಗೆ ಗುಣಮಟ್ಟ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತಯಾರಿ, ಧಾರ್ಮಿಕ ಹಾಗೂ ಕ್ರೀಡೆಗಳು ಸೇರಿದಂತೆ ವಿಜ್ಞಾನ ವಸ್ತು ಪ್ರದರ್ಶನದಂತ ಚಟುವಟಿಕೆಗಳನ್ನು ನಡೆಸುವ ಮೂಲಕ ಜ್ಞಾನ ಮತ್ತು ಕೌಶಲ್ಯ ತರಬೇತಿ ನೀಡುತ್ತಿರುವ  ಪ್ರಾರ್ಥನಾ ವಿದ್ಯಾಮಂದಿರದ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದರು. 

ವಿಜ್ಞಾನದ ಚಟುವಟಿಕೆಗಳ ಅನಾವರಣಗೊಳಿಸುವ ಪ್ರಯತ್ನ ನಡೆಸಿದ್ದು ಜನಮೆಚ್ಚುಗೆಗೆ ಪಾತ್ರವಾಗಿತ್ತು. ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅಗತ್ಯ ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು, ವಿಜ್ಞಾನ ಶಿಕ್ಷಕರಲ್ಲಿನ ಕುತೂಹಲ ಹಾಗೂ ಇತರೆ ವಿದ್ಯಾರ್ಥಿ ಹಾಗೂ ಶಿಕ್ಷಕರಲ್ಲಿ ಸಂಭ್ರಮಕ್ಕೆ ಸಾಕ್ಷಿಯಾಗಿತು ಎಂದರು. 

ಸುಸ್ಥಿರ ಕೃಷಿ ಪದ್ಧತಿ, ಸ್ವಚ್ಛತೆ ಮತ್ತು ಆರೋಗ್ಯ, ಸಂಪನ್ಮೂಲ ನಿರ್ವಹಣೆ, ಕೈಗಾರಿಕಾ ಅಭಿವೃದ್ಧಿ, ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ, ಶೈಕ್ಷಣಿಕ ಆಟಿಕೆ ಮತ್ತು ಗಣತಿ ಮಾದರಿ ಹೀಗೆ ಆರು ವಿಭಾಗಗಳನ್ನಾಗಿ ಮಾಡಿ ಪರಸರ ಸಂರಕ್ಷಣೆ ಜತೆಗೆ ಲಭ್ಯವಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಹೇಗೆ ಅಭಿವೃದ್ಧಿ ಕಾರ್ಯ ನಡೆಸಬಹುದು ಎಂಬುದನ್ನು ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳು  ವಿಕ್ಷಖರಿಗೆ ಮತ್ತು ಪಾಲಕರಿಗೆ ತಿಳಿಸಿಕೊಟ್ಟರು.  ವಿಜ್ಞಾನ ವಸ್ತು ಪ್ರದರ್ಶನದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ವಸ್ತು ಪ್ರದರ್ಶನದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಪರಮಾಣುಗಳ ರಚನೆ, ವಿದ್ಯುತ್ಕಾಂತೀಯ ಕ್ರೇನ್, ಪರಿಸರ ಮಾಲಿನ್ಯ ನಿಯಂತ್ರಣ, ರಕ್ತ ಶುದ್ಧಿಕರಣ, ಸ್ವಯಂ ಚಾಲಿತ ಗಡಿ ಕಾಯುವ ಯಂತ್ರ, ನೀರಿನ ಮಟ್ಟ ಸೂಚಕ, ಸ್ವಯಂ ಚಾಲಿತ ಹನಿ ನೀರಾವರಿ ಪದ್ಧತಿ ಸೇರಿದಂತೆ ನಾನಾ ಬಗೆಯ ಮಾದರಿ ಪ್ರದರ್ಶನ ಆಕರ್ಷಕವಾಗಿತ್ತು. 

ಈ ವೇಳೆ ಬಸವ ವಿದ್ಯಾ ಪ್ರಸಾರಕ ಸಂಸ್ಥೆಯ ಅಧ್ಯಕ್ಷ  ಮುರುಗೇಶ ಮೋಟಗಿ,  ಸಿದ್ದಣ್ಣ ಹುನಗುಂದ,  ತಾಲೂಕಾ ವೀರಶೈವ ಲಿಂಗಾಯತ್ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ,  ಸುಧೀರ ನಾವದಗಿ, ಮುತ್ತಣ್ಣ ಕಡಿ, ಪ್ರವೀಣ ನಾಗಠಾಣ,  ಮುಖ್ಯ ಶಿಕ್ಷಕ ವಿನೋದ ಪಟಗಾರ,ಶಿಕ್ಷಕಿಯರಾದ ಸುನಿತಾ ಕಿನ್ನಾಳ, ಅಂಜನಾ ಬಸರಕೋಡ, ರಜನಿ ಪಟಗಾರ,  ಮುತ್ತಣ್ಣ ನೆರಬೇಂಚಿ, ಗೀತಾ ಉಗ್ಗನ್ನವರ ಸೇರಿದಂತೆ ಹಲವರು ಇದ್ದರು. 

29ಎಂಬಿಎಲ್1: ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಬಡಾವಣೆಗೆ ಹೊಂದಿರುವ ಪ್ರಾರ್ಥನಾ ವಿದ್ಯಾಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಭುಗೌಡ ಚ ದೇಸಾಯಿ ಬುಧವಾರ ಉದ್ಘಾಟಿಸಿದರು. 


ಸುದ್ದಿ ಓದಿ