ಅಸಲಿ ಸಿಪಿಐ ಪೊಟೊ ಬಳಸಿ ನಕಲಿ ಫೇಸ್ ಬುಕ್, ವಾಟ್ಸಪ್ ಖಾತೆ ಸೃಷ್ಟಿಸಿ, ಹಣ ಸುಲಿಗೆಗೆ ಯತ್ನ : ದೂರು ದಾಖಲು
ಬೆಳಗಾವಿ : ಜನಸಾಮಾನ್ಯರು ತಮಗೆ ಅನ್ಯಾಯವಾದಾಗ ಅವರು ನೇರವಾಗಿ ಹೋಗುವದು ಪೊಲೀಸ ಠಾಣೆಗೆ. ಆದರೆ ಜನರಿಗೆ ನ್ಯಾಯ ದೊರಕಿಸಿಕೊಡುವ ಪೊಲೀಸ ಆಧಿಕಾರಿಗೆ ಅನ್ಯಾಯ ಮಾಡಲು ಕಿಡಿಗೇಡಿಗಳು ಮುಂದಾಗಿರುವ ಘಟನೆ ಒಂದು ವರದಿಯಾಗಿದ್ದು, ತನ್ನ ಹೆಸರಲ್ಲಿ ಜನರಿಗೆ ಅನ್ಯಾಯ, ಹಣ ಸುಲಿಗೆ ಮಾಡುತ್ತಿರುವವರ ವಿರುದ್ದ ಕ್ರಮಕ್ಕಾಗಿ ದೂರು ನೀಡಿರುವ ಘಟನೆ ವರದಿಯಾಗಿದೆ.
ಹೌದು ಓದುಗರೇ ಅಸಲಿ ಸಿಪಿಐ ಓರ್ವರು ಸಮವಸ್ತ್ರ ಧರಿಸಿದ ಪೊಟೊ ಬಳಸಿ, ಅವರ ಹೆಸರಲ್ಲಿ ನಕಲಿ ಫೇಸ್ ಬುಕ್ ಹಾಗೂ ವಾಟ್ಸಪ್ ಖಾತೆ ಸೃಷ್ಟಿಸಿ ಜನರಿಗೆ ಹಾಗೂ ಫೇಸ್ ಬುಕ್ ಸ್ನೇಹಿತರಿಗೆ ಹಣ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಸಿಪಿಐ ಅವರ ಗೆಳೆಯ ತೋಮರಸಿಂಗ್ ಎನ್ನುವರು ಸೇನೆಯಲ್ಲಿ ಇದ್ದು ಅವರಿಗೆ ವರ್ಗಾವಣೆ ಆಗಿದ್ದು, ಅವರ ಗೃಹಪಯೋಗಿ ವಸ್ತುಗಳ ಮಾರಾಟದ ಹೆಸರಿನಲ್ಲಿ ಹಣ ಸುಲಿಗೆ ಮಾಡಲು ಯತ್ನಿಸಿರುವ ಕಿಡಿಗೇಡಿಗಳ ವಿರುದ್ದ ಜಿಲ್ಲೆಯ ಮುರಗೋಡ ಠಾಣೆಯ ಸಿಪಿಐ ದೂರು ನೀಡಿದ್ದಾರೆ.
ಇಂತಹದೊಂದು ಘಟನೆ ಜಿಲ್ಲೆಯ ಸೌದತ್ತಿ ತಾಲೂಕಿನ ಮುರಗೋಡ ಪೊಲೀಸ ಠಾಣೆಯ ಸಿಪಿಐ ಮೌನೇಶ್ವರ ಮಾಳಿಪಾಟೀಲ ಅವರು ಪೊಲೀಸ ಸಮವಸ್ತ್ರ ಧರಿಸಿದ್ದ ಪೊಟೊ ಬಳಸಿ ಸಾಮಾಜಿಕ ಅಂತರಜಾಲದ ಫೇಸ್ ಬುಕ್ ಮತ್ತು ವಾಟ್ಸಪ್ ಖಾತೆಗಳನ್ನು ಸೃಷ್ಟಿಸಿದ್ದಾರೆ. ಅಲ್ಲದೆ ಸಿಪಿಐ ಅವರ ಗೆಳೆಯ ಎಂದು ಸೇನಾ ಅಧಿಕಾರಿಯಾಗಿದ್ದು, ತನಗೆ ಬೇರೆಡೆಗೆ ವರ್ಗಾವಣೆ ಆಗಿದೆ.
ನನ್ನ ಮನೆಯ ಗೃಹಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತಿರುವದಾಗಿ ಹಾಗೂ ಹಣದ ಅವಶಕ ಇದೆ ಎಂದು ಆ ನಕಲಿ ಖಾತೆಗಳಿಂದ ಜನರಿಗೆ ಹಣ ಬೇಡಿಕೆ ಇಟ್ಟಿದ್ದಾರೆ ಎಂದು ಮುರಗೋಡ ಸಿಪಿಐ ಮೌನೇಶ್ವರ ಮಾಳಿ ಪಾಟೀಲ ಅವರು ದೂರು ನೀಡಿದ್ದಾರೆಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ. ಅಲ್ಲದೆ ನಾಗರಿಕರು ಇಂತಹ ಕಿಡಿಗೇಡಿಗ ಬಗ್ಗೆ ಎಚ್ವರಿಕೆ ವಹಿಸುವಂತೆ ತಿಳಿಸಿದ್ದಾರೆ.