ಜಾಲಿಕಟ್ಟಿ ಗ್ರಾಮದಲ್ಲಿ ಗೋಪೂಜೆ ಕಾರ್ಯಕ್ರಮ ; ಗೋವುಗಳ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ
ಲೋಕದರ್ಶನ ವರದಿ
ಯರಗಟ್ಟಿ 23 : ಗೋಮಾತೆಗೆ ದಿನ ನಿತ್ಯ ಮುಂಜಾನೆ ನಮಸ್ಕಾರ ಮಾಡಿ ಪೂಜೆ ಸಲ್ಲಿಸಿದರೆ ಮುಕ್ಕೋಟಿ ದೇವರ ಸ್ಮರಣೆ ಮಾಡಿದಂತೆ ಎಂದು ನೇಸರಗಿ ಮಲ್ಲಾಪೂರ ಗಾಳೇಶ್ವರಮಠದ ಚಿದಾನಂದ ಸ್ವಾಮೀಜಿ ಹೇಳಿದರು. ಸಮೀಪದ ಜಾಲಿಕಟ್ಟಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗೋಪೂಜೆ ಹಾಗೂ ಧರ್ಮಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗೋಮಾತೆ ಸೇವೆಯಿಂದ ಆರೋಗ್ಯವೂ ಸಹ ಉತ್ತಮವಾಗಿರುತ್ತದೆ. ಗೋವುಗಳನ್ನು ಕುಟುಂಬದ ಸದಸ್ಯರಂತೆ ಕಾಣಬೇಕು ಎಂದು ಹೇಳಿದರು. ಸೊಗಲ ಸುಣಧೋಳಿ ಚಿದಾನಂದ ಅವಧೂತ ಅಜ್ಜ ಮಾತನಾಡಿ, ಗೋವುಗಳ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಬಸಯ್ಯಸ್ವಾಮಿ ಹಿರೇಮಠ ಸಾನಿಧ್ಯ ವಹಿಸಿದ್ದರು, ಗ್ರಾಪಂ ಮಾಜಿ ಅದ್ಯಕ್ಷ ಬಸವರಾಜ ಕಡಬಿ, ಚನ್ನಯ್ಯಸ್ವಾಮಿ ಪೂಜೇರ, ಗೌಡಪ್ಪ ನಾಯ್ಕರ, ಭರಮಪ್ಪ ಜಗಮಯ್ಯನವರ, ವಿರೂಪಾಕ್ಷಯ್ಯ ಪೂಜೇರ, ಈರಯ್ಯ ಗೌಡರ, ಪ್ರಕಾಶ ನಾಯ್ಕರ, ವೈಎಫ್.ನಾಯ್ಕರ, ವೆಂಕಣ್ಣ ಕಮಕೇರಿ, ಮಲ್ಲನಾಯ್ಕ ನಾಯ್ಕರ, ಕುಮಾರ ಹಿರೇಮಠ, ಜಗದೀಶ ಹೊಸಮಠ, ಈರಯ್ಯ ಹಿರೇಮಠ, ಅಡವಯ್ಯ ಅಟಿಗಲ್ಲಮಠ, ಮಂಜು ನಾಯ್ಕರ ಮತ್ತಿತರಿದ್ದರು.