ಮಹಲಿಂಗಪುರ

ಕೋವಿಡ್ ಎರಡನೇ ಅಲೆ ನಿಯಂತ್ರಿಸುವಲ್ಲಿ ಸಫಲಗೊಂಡಿದ್ದೇವೆ: ಸಚಿವ ಕತ್ತಿ

ಕೋವಿಡ್ ಎರಡನೇ ಅಲೆ ನಿಯಂತ್ರಿಸುವಲ್ಲಿ ಸಫಲಗೊಂಡಿದ್ದೇವೆ: ಸಚಿವ  ಕತ್ತಿ
ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ಸಚಿವ ಉಮೇಶ ಕತ್ತಿ ಉದ್ಘಾಟಿಸಿದರು.

ಮಹಾಲಿಂಗಪುರ 02: ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿಯುಕ್ತಿಗೊಂಡ ಒಂದೇ ತಿಂಗಳಲ್ಲಿ ಏಳು ಬಾರಿ ಇಡೀ ಜಿಲ್ಲಾ ಪ್ರವಾಸ ಕೈಗೊಂಡು ಮತ್ತು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಣಗೊಳಿಸುವಲ್ಲಿ ಸಫಲಗೊಂಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಹೇಳಿದರು. 

ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.  

ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಈ ಕೋವಿಡ್ ಸೆಂಟರ್ ಗೆ ದಾಖಲಾಗಿ ಚಿಕಿತ್ಸೆ ಪಡೆಯಿರಿ. ಇಲ್ಲಿ ಉಚಿತ ಓಷಧೋಪಚಾರ ಹಾಗೂ ಉತ್ತಮ ಆಹಾರ ಹಾಗೂ ಕಷಾಯದೊಂದಿಗೆ ಒಂದೇ ವಾರದಲ್ಲಿ ಗುಣಮುಖರಾಗಿ ಮನೆಗೆ ತೆರಳಬಹುದು ಯಾವುದೇ ಭಯ ಬೇಡ. 

ಮೂರನೇ ಅಲೆ ಹಾಗೂ ವ್ಯವಸ್ಥೆ : ಮಕ್ಕಳನ್ನು ಕಾಡುವ ಬಗ್ಗೆ ತಜ್ಞರು ಸೂಚಿಸಿದ್ದು ಅದನ್ನು ಎದುರಿಸುವಲ್ಲಿ ಜಿಲ್ಲಾಡಳಿತ ವತಿಯಿಂದ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ.  

ಜಿಲ್ಲೆಯಲ್ಲಿ ನಿಯಂತ್ರಣ: ತಿಂಗಳ ಹಿಂದೆ 9500 ಇದ್ದ ಪ್ರಕರಣಗಳು ಇಂದು 2745 ಕ್ಕೆ ನಿಯಂತ್ರಣಗೊಂಡಿದೆ ಜೂನ್ 7ಕ್ಕೆ ಕೊನೆಗೊಳ್ಳುವ ಲಾಕ್ಡೌನ್ ಅಂತ್ಯಕ್ಕೆ ಜಿಲ್ಲೆ ಸಂಪೂರ್ಣ ಮುಕ್ತವಾಗಬಹುದು.  

ಪ್ರತಿದಿನ ಮುಂಜಾನೆ 6.00 ರಿಂದ ಹತ್ತರವರೆಗೆ ದಿನಕ್ಕೆ ನೂರು ರೈತರಿಗೆ ಮಾತ್ರ ಬಿತ್ತನೆ ಬೀಜ ವಿತರಿಸುವ ವ್ಯವಸ್ಥೆ ಮಾಡಿದ್ದು, ದಾಸ್ತಾನು ಸಾಕಷ್ಟಿದ್ದು ರೈತರು ಸಹಕರಿಸಬೇಕು ಎಂದರು. 

 ಶಾಸಕ ಸಿದ್ದು ಸವದಿ ಮಾತನಾಡಿ, ಬಹುದಿನಗಳ ಬೇಡಿಕೆಯಾದ 10 ಆಕ್ಸಿಜನ್ ಬೆಡ್ ಗಳ ಆಸ್ಪತ್ರೆ ಎಂದು ಸಚಿವರಿಂದ ಉದ್ಘಾಟನೆಯಾಗಿದ್ದು ಇದು ಸಚಿವರ ಸತತ ಜಿಲ್ಲಾ ಪ್ರವಾಸ, ಮೇಲಿಂದ ಮೇಲೆ ಸಭೆ, ಜಿಲ್ಲಾಡಳಿತಕ್ಕೆ ಸೂಕ್ತ ಮಾರ್ಗದರ್ಶನದಿಂದಾಗಿ ಜಿಲ್ಲೆಯಲ್ಲಿ ಕೊರೋನಾ ಹಿಡಿತಕ್ಕೆ ಬಂದಿದ್ದು ಮಹಾಲಿಂಗಪುರದಲ್ಲಿ ಕೊರೋನಾ ಆಸ್ಪತ್ರೆ ಉದ್ಘಾಟನೆಯಾಗಿದ್ದು ಖಾಸಗಿ ಆಸ್ಪತ್ರೆಗಳ ಬಿಲ್ಲಿಗೆ ಹೆದರಿ ಪ್ರಾಣ ಬಿಡುತ್ತಿರುವ ಬಡ ಜನರಿಗೆ ಇದು ಸಹಕಾರಿ ಎಂದರು. 

ಗೋದಾವರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್ ಭಕ್ಷಿ ಮಾತನಾಡಿ ಶಾಸಕ ಸಿದ್ದು ಸವದಿಯವರ ಪ್ರೀತಿಯ ಕೋರಿಕೆಯಂತೆ ಆಸ್ಪತ್ರೆಗೆ ಕಾರ್ಖಾನೆ ವತಿಯಿಂದ ಆಮ್ಲಜನಕ ಒದಗಿಸುವ ವ್ಯವಸ್ಥೆ ಮಾಡಿದ್ದೇವೆ. ಭಾರತ ಆದಷ್ಟು ಬೇಗ ಕೊರೊನಾ ಮುಕ್ತವಾಗಲಿ ಎಂದರು. 

ಅರ್ಬನ್ ಬ್ಯಾಂಕ್ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ, ಜಿಪಂ ಮಾಜಿ ಸದಸ್ಯ ಬಾಬಾಗೌಡ ಪಾಟೀಲ, ಆನಂದ ಕಂಪು, ಶಿವಾನಂದ ಅಂಗಡಿ, ಚನ್ನಬಸು ಯರಗಟ್ಟಿ, ಚನ್ನಪ್ಪ ಪಟ್ಟಣಶೆಟ್ಟಿ, ಶಿವಾನಂದ ಹುಣಶ್ಯಾಳ, ತಹಶೀಲ್ದಾರ್ ಸಂಜಯ ಇಂಗಳೆ, ಆರೋಗ್ಯ ನೀರೀಕ್ಷಣಾಧಿಕಾರಿ ಎಂ.ಬಿ.ಗೋಣಿ, ವಿಕ್ರಮ ಕುಳ್ಳೂರ ಹಾಗೂ ಭಾಜಪ ಮುಖಂಡರು, ಕಾರ್ಯಕರ್ತರು ಇದ್ದರು. 

ಟಿಎಚ್‌ಓ  ಜಿ.ಎಸ್‌.ಗಲಗಲಿ ಸ್ವಾಗತಿಸಿ,ವಂದಿಸಿದರು. 

ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ವತಿಯಿಂದ 10 ಲೀಟರ್ ನ 1 ಮತ್ತು 5ಲೀಟರ್ ನ 3 ಆಕ್ಸಿಜನ್ ಆಕ್ಸಿನೇಟರ್ ಗಳನ್ನು ಕಾರ್ಖಾನೆ ನಿರ್ದೇಶಕ ಸಿ.ಆರ್‌.ಭಕ್ಷಿ ಹಸ್ತಾಂತರಿಸಿದರು. 


ಸುದ್ದಿ ಓದಿ