ಹಗರಿಬೊಮ್ಮನಹಳ್ಳಿ

ಲಸಿಕೆ ಸರ್ಕಾರದ ಯೋಜನೆ, ಯಾವುದೇ ಸಂಘ ಸಂಸ್ಥೆಯದಲ್ಲ: ತಹಸೀಲ್ದಾರ್ ಶರಣಮ್ಮ ಸ್ಪಷ್ಟನೆ

ಲಸಿಕೆ ಸರ್ಕಾರದ ಯೋಜನೆ, ಯಾವುದೇ ಸಂಘ ಸಂಸ್ಥೆಯದಲ್ಲ: ತಹಸೀಲ್ದಾರ್ ಶರಣಮ್ಮ ಸ್ಪಷ್ಟನೆ

ಹಗರಿಬೊಮ್ಮನಹಳ್ಳಿ 16 : ಕೋವಿಡ್ ಲಸಿಕೆ ಅಭಿಯಾನ ಸರ್ಕಾರದ ಯೋಜನೆಯಾಗಿದ್ದು 18ವರ್ಷದ ಮೇಲ್ಪಟ್ಟವರಿಗೆ ಉಚಿತವಾಗಿ ಹಾಕಲಾಗುತ್ತಿದೆ. ಆದರೆ, ಇದು ಯಾವುದೇ ಸಂಘ-ಸಂಸ್ಥೆಯಿಂದ ನಡೆಯುತ್ತಿಲ್ಲ ಎಂದು ತಹಸೀಲ್ದಾರ್ ಶರಣಮ್ಮ ತಿಳಿಸಿದರು.  

ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹಳೇ ಹಗರಿಬೊಮ್ಮನಹಳ್ಳಿಯ ಸಮುದಾಯ ಭವನದಲ್ಲಿ, ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಬಿಜೆಪಿ ಯುವ ಮೋರ್ಚಾದ ವತಿಯಿಂದ ಚಾಲನೆ ನೀಡಲಾಯಿತು ಎಂಬ ವದಂತಿಗೆ ತಹಶಿಲ್ದಾರ್ ಸ್ಪಷ್ಟನೆ ನೀಡಿದ್ದು ಈ ತರಹದ ಸುದ್ದಿಯು ಸಾರ್ವಜನಿಕರಲ್ಲಿ ಸಂಶಯ ಹಾಗೂ ಗೊಂದಲಗಳಿಗೆ ಎಡೆಮಾಡಿ ಕೊಡುತ್ತದೆ. ಆದ್ದರಿಂದ ಇಲ್ಲಿ ಯಾವುದೇ ವೈಯಕ್ತಿಕ ಅಥವಾ ಸಂಘ-ಸಂಸ್ಥೆಗಳ ಕೊಡುಗೆ ಇಲ್ಲ ಎಂದರು.   

ಆದರೆ, ತಾವೇ ಲಸಿಕೆ ನೀಡುತ್ತಿರುವುದಾಗಿ ಬಿಂಬಿಸುವಂತಹ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿದ್ದರೆ, ಕಾನೂನು ಬಾಹಿರವಾಗಿರುತ್ತದೆ. ಎಂದ ಅವರು, 18ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರಿಗೆ ಈ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ, ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ ಕೊರೋನಾದಿಂದ ಮುಕ್ತರಾಗಿ ಎಂದು ಕರೆ ನೀಡಿದರು. 


ಸುದ್ದಿ ಓದಿ