ಆರೋಗ್ಯ, ಕ್ಷೇಮ ಕೇಂದ್ರದಿಂದ ಕೊವಿಡ್ ಲಸಿಕೆ ಶಿಬಿರ
ಲೋಕದರ್ಶನ ವರದಿ
ಕಂಪ್ಲಿ 12: ತಾಲ್ಲೂಕಿನ ಮೆಟ್ರಿ ಗ್ರಾಮದ ಬನ್ನಿ ಮಹಾಂಕಾಳಿ ದೇವಸ್ಥಾನದ ಬಳಿ ಗ್ರಾಮದ ಯುವಕರು ಪ್ರತಿಷ್ಠಾಪಿಸಿರುವ ಗಣೇಶಮೂರ್ತಿ ಟೆಂಟ್ನಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದಿಂದ ಶನಿವಾರ ವಿಶೇಷ ಕೊವಿಡ್ ಲಸಿಕೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಗ್ರಾಮದ 115ಜನರಿಗೆ ಲಸಿಕೆ ಹಾಕಲಾಯಿತು. ಆರೋಗ್ಯ ನೀರೀಕ್ಷಕ ಅಧಿಕಾರಿ ಕೆ. ಯರಿಸ್ವಾಮಿ ಮಾತನಾಡಿ ಯುವಕರು ಮತ್ತು ಸಾರ್ವಜನಿಕರು ಲಸಿಕೆ ಹಾಕಿಸಿ ಕೊಳ್ಳಲು ಮುಂದಾಗಿ ಸಾಮಾಜಿಕ ಅಂತರ ಕಾಪಾಡಿ ಕಡ್ಡಾಯವಾಗಿ ಮಾಸ್ಕ ಧರಿಸಿ ಲಸಿಕೆ ಹಾಕಿಸುವುದರಿಂದ ಯಾವ ರೀತಿಯ ತೊಂದರೆ ಯಾಗುವುದಿಲ್ಲ ಆರೋಗ್ಯ ಕಡೆ ಹೆಚ್ಚಿನ ಆಸಕ್ತಿ ವಹಿಸಿ ಎಂದರು ಆರೋಗ್ಯ ಸುರಕ್ಷಣಾಧಿಕಾರಿ ಪಿ. ಸಕ್ಕೂಬಾಯಿ, ಸಿಎಚ್ಒ ಈರಣ್ಣ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಅಜೀಮ್ ಪ್ರೇಮ್ಜಿ ಪ್ರತಿುುಷ್ಠಾನದವರು ಹಾಜರಿದ್ದರು.ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಯುವಕರ ತಂಡ, ಗ್ರಾಮಸ್ಥರು ಶಿಬಿರದ ಯಶಸ್ಸಿಗೆ ಶ್ರಮಿಸಿದರು.