ಕೋವಿಡ್ ಲಸಿಕೆ: ಮನೆ ಮನೆಗೆ ತೆರಳಿ ಜಾಗೃತಿ
ಮುದ್ದೇಬಿಹಾಳ10: ಪಟ್ಟಣದ ಇಲ್ಲಿನ ವಿವಿಧ ಭಡಾವಣೆಗಳಿಗೆ ತೆರಳಿ ಕೋವಿಡ್ ವ್ಯಾಕ್ಷಿನ ಹಾಕಿಸಿಕೊಳ್ಳುವ ಪಲಾನುಭವಿಗಳಾದ 60 ವರ್ಷ ಮೇಲ್ಪಟ್ಟವರು ಎಲ್ಲರೂ ಮತ್ತು 45 ರಿಂದ 60 ವರ್ಷದ ಮದುಮೇಹ, ರಕ್ತದೊತ್ತಡ ಇತ್ಯಾದಿ ಇದ್ದವರಿಗೆ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಲು ಆರೋಗ್ಯ ಇಲಾಖೆಯ ಆರೋಗ್ಯ ಸಹಾಯಕರು ಮತ್ತು ಅಂಗನವಾಡಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಮನವಲಿಸಲಾಯಿತು
ಈ ವೇಳೆ ನಗರ ಆರೋಗ್ಯ ಸಹಾಯಕ ಎಂ ಎಸ್ ಗೌಡರ ಮಾತನಾಡಿ ಕೋವಿಡ್ ಲಸಿಕೆಯನ್ನು ಎಲ್ಲ ತಾಲೂಕಾ ಆಸ್ಪತ್ರೆ ಸಮುದಾಯ ಆರೋಗ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲಿ ಉಚಿತವಾಗಿ ನೀಡಲಾಗುವುದೆಂದು ಜನ ಜಾಗೃತಿ ಮೂಡಿಸಲಾಯಿತು. 60 ವರ್ಷ ಮೇಲ್ಪಟ್ಟ ಎಲ್ಲರೂ 45 ರಿಂದ 60 ವರ್ಷ ದೊಳಗಿನ ಮಧುಮೇಹ ರಕ್ತ ದೋತ್ತಡ ಹಾಗೂ ಇತರೆ ಕಾಯಿಲೆಯಿಂದ ಬಳಲುತ್ತಿರುವವರು.ಮುಂಚೂಣಿ ಕಾರ್ಯಕರ್ತರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಬರುವಾಗ ಆಧಾರ ಅಥವಾ ಇನ್ನಾವುದೇ ಸರಕಾರ ನಿಗದಿಪಡಿಸಿದ ಗೂರ್ತಿನ ಚೀಟಿ ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ತರಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರ ತಾಲೂಕ ಆಸ್ಪತ್ರೆ ಮತ್ತು ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಿಲು ಕೋರಲಾಗಿದೆ.
ಈ ಶೋಭಾ ಘಾಟಗೆ ನಿಂಬಕ್ಕ ಕಾಳಪುರ ಜಗದೀಶ್ವರಿ ಕೋರಿ ಆಶಾ ಕಾರ್ಯಕರ್ತೆಯರಾದ ವಿಜಯಲಕ್ಷ್ಮಿ ಕೆಂಭಾವಿ ಶಿವಕಾಂತಮ್ಮ ಮೇಟಿ ಹಾಜರಿದ್ದರು
10ಎಂಯುಡಿ2: ಮುದ್ದೇಬಿಹಾಳ ಪಟ್ಟಣದ ಇಲ್ಲಿನ ವಿವಿಧ ಬಡಾವಣೆಗಳಿಗೆ ತೆರಳಿ ಕೋವಿಡ್ ವ್ಯಾಕ್ಷಿನ ಹಾಕಿಸಿಕೊಳ್ಳುವ ಪಲಾನುಭವಿಗಳಾದ 60 ವರ್ಷ ಮೇಲ್ಪಟ್ಟವರು ಎಲ್ಲರೂ ಮತ್ತು 45 ರಿಂದ 60 ವರ್ಷದ ಮಧುಮೇಹ, ರಕ್ತದೊತ್ತಡ ಇತ್ಯಾದಿ ಇದ್ದವರಿಗೆ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಲು ಆರೋಗ್ಯ ಇಲಾಖೆಯ ಆರೋಗ್ಯ ಸಹಾಯಕರು ಮತ್ತು ಅಂಗನವಾಡಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಮನವಲಿಸಲಾಯಿತು.