ಕೊರೋನ ಜಾಗೃತಿ: ಓಷಧಿ ವಿತರಣೆ
ಮಹಾಲಿಂಗಪುರ 29: ದಿನೆ ದಿನೇ ಹೆಚ್ಚುತ್ತಿರುವ ಮಾರಕ ರೋಗದ ಹಿನ್ನೆಲೆಯಲ್ಲಿ ಗುರುವಾರ ದಿವಸ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಸಭಾಂಗಣದಲ್ಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಧರ್ಮಸ್ಥಳ ಸಂಘ ಹಾಗೂ ರಾಮಾರೂಢ ಮಠ ವತಿಯಿಂದ ಕೊರೋನ ರೋಗದ ಜಾಗೃತಿ ಹಾಗೂ ಓಷಧಿ ವಿತರಿಸುವ ಕಾರ್ಯಕ್ರಮ ಜರುಗಿತು.
ಈ ಸಮಾರಂಭದಲ್ಲಿ ಧರ್ಮಸ್ಥಳದ ಯೋಜನಾ ಅಧಿಕಾರಿ ಧನಂಜಯಕುಮಾರ , ಜಿಲ್ಲಾ ಶಾರೀರಿಕ ಪ್ರಮುಖ ಪ್ರಮೋದ ಮಮದಾಪೂರ, ಪುರಸಭೆ ಆರೋಗ್ಯ ನೀರೀಕ್ಷಕ ರಾಜು ಹೂಗಾರ, ಎಸ್.ಜಿ ಅಳ್ಳಿಮಟ್ಟಿ, ಪೊಲೀಸ್ ಇಲಾಖೆಯ ಎಂ.ಎಸ್ ಸಣ್ಣಕ್ಕಿ, ಧರ್ಮಸ್ಥಳ ಸಂಘದ ಮೇಲ್ವಿಚಾರಕ ಸೋಮಲಿಂಗ ಗರಗ, ಯೋಜನಾಧಿಕಾರಿ ಲೋಕೇಶ್ ಎನ್, ಅರ್ಜುನ್ ಪವಾರ್, ನಗರದ ಸ್ವಯಂಸೇವಕರು, ಮಾತೆಯರು ಹಾಗೂ ಸಮತೋಲ ಪತ್ರಿಕೆಯ ವರದಿಗಾರ ಹನುಮಂತ ನಾವಿ ಭಾಗವಹಿಸಿದ್ದರು.