ಹಗರಿಬೊಮ್ಮನಹಳ್ಳಿ

ಕೋವಿಡ್ 3ನೇ ಅಲೆ: ಅಗತ್ಯ ಕ್ರಮ ವಹಿಸುವಂತೆ ಮನವಿ

ಕೋವಿಡ್ 3ನೇ ಅಲೆ: ಅಗತ್ಯ ಕ್ರಮ ವಹಿಸುವಂತೆ ಮನವಿ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 24: ಕೋವಿಡ್ ಮೂರನೇ ಅಲೆ ಎದುರಿಸಲು ವಹಿಸಬೇಕಾದ ಕ್ರಮಗಳ ಕುರಿತು ಸಿಪಿಐ(ಎಂ), ಸಿಪಿಐ, ಎಸ್‌ಯುಸಿಐ, ಚಪಿ(ಎಂಎಲ್)ಲಿಬೆರೆಷನ್) ಎಐಎಫ್‌ಬಿ, ಆರ್‌ಪಿಐ, ಸ್ವರಾಜ್ ಇಂಡಿಯಾ ತಾಲೂಕು ಘಟಕಗಳು ಜಂಟಿಯಾಗಿ ಸೋಮವಾರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ನೀಡಿದರು. 


ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯ ಜಗನ್ನಾಥ್ ಮಾತನಾಡಿ ರಾಷ್ಟ್ರ ಹಾಗೂ ರಾಜ್ಯವು ಕೊವಿಡ್ ಪ್ರಥಮ ಹಾಗೂ ದ್ವಿತೀಯ ಅಲೆಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಜಂಟಿಯಾಗಿ ಮನವಿಯನ್ನು ನೀಡಿದ್ದರು ಮನವಿ ಸ್ವೀಕರಿಸಿ ಕ್ರಮವಹಿಸದಿರುವುದು ಕಾಣಬಹುದಾಗಿದೆ.ಪ್ರಸ್ತುತ ಮೂರನೇ ಅಲೆಯ ಪಾಸಿಟಿವಿಟಿ ದರ ಏರಿಕೆಯಾಗುತ್ತಿದೆ, 1ಮತ್ತು2ನೆ ಕೋವಿಡ್ ಅಲೆಯಲ್ಲಿನ ಲಾಕ್‌ಡೌನ್‌ನಲ್ಲಿ ರಾಜ್ಯದ ಸ್ಥಿರ ಬೆಲೆಗಳ ಆಧಾರದಲ್ಲಿ 2.6ರಷ್ಟು ಋಣಾತ್ಮಕ ಬೆಳವಣಿಗೆ ಕಂಡಿದೆ, ಕೈಗಾರಿಕಾ ವಲಯವು5.1 ಮತ್ತು ಸೇವಾ ವಲಯ3.1 ನಕಾರಾತ್ಮಕ ಬೆಳವಣಿಗೆ ಕಂಡಿದೆ ರಾಜ್ಯದ ಅತೀ ಸಣ್ಣ ಹಾಗೂ ಸಣ್ಣ ಕೈಗಾರಿಕೆಗಳು ಗಣನೀಯ ಪ್ರಮಾಣದಲ್ಲಿ ಮುಚ್ಚಲ್ಪಟ್ಟು ಒಟ್ಟು 1,71,639 ಉದ್ಯೋಗಳು ನಷ್ಟವಾಗಿವೆ ನಿರುದ್ಯೋಗವು 26.3 ರಷ್ಟು ಏರಿಕೆಯಾಗಿದೆ, ಕೃಷಿ ವಲಯಕ್ಕೆ ಸರಕಾರ ನೀಡುವ ಪಾಲು ಕಡಿಮೆಯಾಗಿದೆ. 

ಜೀವ ರಕ್ಷಿಸಿ, ಜೀವನ ಉಳಿಸಿ ಜೀವಿಸಲು ಬಿಡಿ ಅಭಿಯನದ ಭಾಗವಾಗಿ ಕೋವಿಡ್ ಮೂರನೇ ಅಲೆಯ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಬೇಕು, ಲಾಕ್‌ಡೌನ್, ವೀಕ್‌ಎಂಡ್ ಕಫ್ಯೋರ್ ಸಂಸ್ತ್ರಸ್ಥರಿಗೆ  ಪರಿಹಾರ ಒದಗಿಸಬೆಕು, ಉಚಿತ ಮಾಸ್ಕ್‌, ಸ್ಯನಿಟೈಸರ್ ವಿತರಣೆ, ಉಚಿತ ಪೌಷ್ಠಿಕ ಆಹಾರ, ಸೋಕಿತರಿಗೆ ಅಗತ್ಯ ನೆರೆವು, ಕೋವಿಡ್ ಮೃತ ಕುಟುಂಬಕ್ಕೆ ತಲ ನಾಲ್ಕು ರೂ. ಲಕ್ಷ ಪರಿಹಾರ, ಕೋವಿಡ್ ವಾರಿಯರ‌್ಸರ್ಗಳಿಗೆ ಜೀವನ ಭದ್ರತೆಗೆ ಅಗತ್ಯ ಕ್ರಮ, ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚು ಅನುದಾನ, ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವವರಿಗೆ ಹತ್ತು ಸಾವಿರ ನಗದು ನೀಡುವುದರ ಮೂಲಕ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿ ರಾಜ್ಯದ ಆರ್ಥಿಕತೆಯನ್ನು ಪುನರ್‌ಶ್ಚೇತನಗೋಳಿಸಬೇಕಿದೆ, ಉಚಿತ ಪಡಿತರ 10ಕೆ.ಜಿಗೆ ಹೆಚ್ಚಿಸಬೇಕು, ಮನರೇಗಾದಡಿ 200ಮಾನವ ದಿನಗಳನ್ನು ನೀಡಬೆಕು, ಕೂಲಿಯನ್ನು 600ರೂಗಳಿಗೆ ಹೆಚ್ಚಿಸಬೆಕು, ಕರ್ಮಿಕ ವಿರೋಧಿ ನೀತಿಗಳನ್ನು ಸೇರಿದಂತೆ ಕಾರ್ಮಿಕ ಸಂಹಿತೆಗಳನ್ನು ಜಾರಿಯಾಗದಂತೆ ಒಟ್ಟು ಹದಿನೈದು ಕ್ರಮಗಳನ್ನು ರಾಜ್ಯ ಸರಕಾರ ವಹಿಸಬೇಕೆಂದು ಆಗ್ರಹಿಸಿದರು. 

ಈ ಸಂಧರ್ಭದಲ್ಲಿ ತಾಲೂಕು ಕಾರ್ಯದರ್ಶಿ ಮಾಳಮ್ಮ, ಜಿಲ್ಲಾ ಸಮಿತಿ ಸದಸ್ಯೆ ಸರೋಜಾ, ಸದಸ್ಯರಾದ ವಿ ಹನುಮಂತಪ್ಪ, ರಂಗಪ್ಪ ದಾಸರ, ಬಿ.ಜ್ಯೋತಿ, ಕೆ.ಸುರೇಶ್ ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ