ಮಹಾಲಿಂಗಪುರ ಹೆಸ್ಕಾಂ ಕಚೇರಿಯಲ್ಲಿ ಗೃಹಜ್ಯೋತಿ ಯೋಜನೆಗೆ ಸೌಜನ್ಯ ಕೌಂಟರ್
ಮಹಾಲಿಂಗಪುರ 18 : ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಗೃಹಬಳಕೆ ಗ್ರಾಹಕರಿಗೆ ಮಾಸಿಕ 200ಯುನಿಟ್ ಉಚಿತ ವಿದ್ಯುತ್ ಗೃಹಜ್ಯೋತಿ ನೋಂದಣಿಗಾಗಿ ರವಿವಾರ ದಿವಸ ಹೆಸ್ಕಾಂ ಕಚೇರಿಯಲ್ಲಿ ' ಸೌಜನ್ಯ ಕೌಂಟರ್ ' ತೆರೆಯುವ ಮೂಲಕ ಸ್ಥಳೀಯ ಅಧಿಕಾರಿಗಳು ಯೋಜನೆಗೆ ಚಾಲನೆ ನೀಡಿದರು.
ಉಚಿತ ಬೆಳಕು ಸುಸ್ಥಿರ ಬದುಕು ಶಿರೋನಾಮೆ ಅಡಿಯಲ್ಲಿ ಆರಂಭವಾಗಿರುವ ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಲು ಸೇವಾಸಿಂಧುವಿಗಾಗಿ ಮೋಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್ ಗಳಲ್ಲಾಗಲಿ ಅಥವಾ ಕರ್ನಾಟಕ ಒನ್, ಗ್ರಾಮ ಒನ್, ಗ್ರಾಮ ಪಂಚಾಯತ್, ನಾಡ ಕಚೇರಿಗಳು ಸೇರಿದಂತೆ ವಿದ್ಯುತ್ ನ ಎಲ್ಲ ಕಚೇರಿಗಳಲ್ಲಿಯೂ ವಿದ್ಯುತ್ ಖಾತೆ ನಂಬರ್ ಗೆ ಆಧಾರ ಕಾರ್ಡ್ ಮತ್ತು ಮೋಬೈಲ್ ನಂಬರ ನಮೂದಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ 24-7 ಕಾರ್ಯ ಕ್ಷಮತೆಯಲ್ಲಿರುವ 1912ಕ್ಕೆ ಕರೆ ಮಾಡಿ ಇಲ್ಲವೆ ಇಂಧನ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಮಾಹಿತಿ ಪಡೆಯಬಹುದಾಗಿದೆ. ಮಹಾಲಿಂಗಪುರ ಸುತ್ತಮುತ್ತಲಿನ ಗ್ರಾಮಗಳ ಕಚೇರಿಗಳಿಗೆ ಭೇಟಿ ನೀಡಿ ಸಮ್ಮಂಧಿಸಿದ ಅಧಿಕಾರಿಗಳಿಗೆ ಗೃಹಜೋತಿ ಯೋಜನೆಯ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಎಇಇ ಸುರೇಶ ಮುರಗೋಡ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಪಟ್ಟಣದ ವಿದ್ಯುತ್ ಶಾಖಾಧಿಕಾರಿ ರಾಜೇಶ ಬಾಗೋಜಿ ಮತ್ತು ಹೆಸ್ಕಾಂ ಜಾಗೃತದಳದ ಸಿಬ್ಬಂದಿಗಳು ಇದ್ದರು.