ಅಧಿವೇಶನಕ್ಕೆ ಕ್ಷಣ ಗಣನೆ : ಸರಕಾರ, ವಿಪಕ್ಷಗಳ ಹಗ್ಗ ಜಗ್ಗಾಟಕ್ಕೆ ಆಖಾಡ ಸಿದ್ದ : ಉ.ಕ ಸಮಸ್ಯೆಗಳಿಗೆ ಸಿಗುತ್ತಾ ಮುಕ್ತಿ
ಪಾರೇಶ ಭೋಸಲೆ
ಬೆಳಗಾವಿ : ಇನ್ನೇನು ಬೆಳಗಾವಿಯ ಚಳಿಗಾಲ ಅಧಿವೇಶನಕ್ಕೆ ಒಂದು ದಿನ ಬಾಕಿ ಇದ್ದು, ಸರಕಾರ ಮತ್ತು ವಿಪಕ್ಷಗಳ ಹಗ್ಗ ಜಗ್ಗಾಟಕ್ಕೆ ಆಖಾಡ್ ಸಿದ್ದಗೊಂಡಿದ್ದು, ಕ್ಷಣಗಣನೆ ಆರಂಭಗೊಂಡಿದೆ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ಬೆಳಗಾವಿ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದರೆ ವಿವಿಧ ಸಂಘಟನೆಗಳ ಪ್ರತಿಭಟನೆಯ ಬಿಸಿ ಸರಕಾರಕ್ಕೆ ತಟ್ಟಲಿದೆ ಎನ್ನುವದು ಇಲ್ಲಿ ಮರೆಯುವಂತಿಲ್ಲ. ಇವೆಲ್ಲದರ ನಡುವೆ ಉ.ಕ ಸಮಸ್ಯೆಗಳಿಗೆ ಪರಿಹಾರ ಸಿಗಲಿ ಎನ್ನುದನ್ನು ಈ ಭಾಗದ ಜನ ಎದುರು ನೋಡುತ್ತಿದ್ದಾರೆ.
ಹೌದು ಓದುಗರೇ ಉತ್ತರ ಕರ್ನಾಟಕದ ಗಂಭೀರ ಸಮಸ್ಯೆಗಳ ಪರಿಹರಿಸಲು ಹಾಗೂ ಸರಕಾರ ಬೆಳಗಾವಿಯಲ್ಲಿ ಅಧಿವೇಶನವನ್ನು ನಡೆಸುವ ಮೂಲಕ ಬೆಳಗಾವಿಯಲ್ಲಿ ನಿಂತು ಕನ್ನಡಿಗರ ವಿರುದ್ದ ಬೊಬ್ಬೆ ಹೊಡೆಯುತ್ತಿದ್ದ ಝಾಪಾಗಳ ಬಾಲ ಕಟ್ ಮಾಡುವ ಉದ್ದೇಶದಿಂದ ಬೆಳಗಾವಿಯಲ್ಲಿ ಈ ಹಿಂದೆ ಸರಕಾರ ಸುಮಾರು 400 ಕೋಟಿಗು ಅಧಿಕ ಹಣ ಖರ್ಚು ಮಾಡಿ ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸಲಾಗಿತ್ತು. ಆದರೆ ವರ್ಷಕ್ಕೆ ಒಂದು ವೇಳೆ ಬೆಳಗಾವಿಯಲ್ಲಿ ಸರಕಾರ ನಡೆಸುತ್ತಿರುವ ಚಳಿಗಾಲ ಅಧಿವೇಶನವು ಕೇವಲ ಉತ್ತರ ಕರ್ನಾಟಕ ಭಾಗದ ರೈತಪರ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿಭಟನೆಗೆ ಸಿಯಮಿತವಾಗಿದೆ. ಅಲ್ಲದೆ ಬೆಂಗಳೂರು ಭಾಗದ ಶಾಸಕರ ಮತ್ತು ಅಧಿಕಾರಿಗಳ ಪ್ರವಾಸದ ಅಧಿವೇಶನವಾಗಿ ಮಾರ್ಪಟ್ಟಿದ್ದು, ಇಲ್ಲಿ ಉತ್ತರ ಕರ್ನಾಟಕದ ಯಾವ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎನ್ನು ಮಾತು ಕೇಳಿ ಬರುತ್ತಿರುವದು ದುರ್ಧೈವದ ಸಂಗತಿಯಾಗಿದೆ.
ರಾಜ್ಯ ಸರಕಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿ. 4ರಿಂದ ಚಳಿಗಾಲ ಅಧಿವೇಶನವನ್ನು ಘೋಷಣೆ ಮಾಡಿದ್ದು, ಇನ್ನೇನು ಅಧಿವೇಶನ ಆರಂಭಕ್ಕೆ ಒಂದು ದಿನ ಮಾತ್ರ ಬಾಕಿ ಇದ್ದು, ಬೆಳಗಾವಿ ಜಿಲ್ಲಾಡಳಿತ ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸಲು ಮತ್ತು ದುಂದುವೆಚ್ಚ ಕಡಿಮೆ ಮಾಡಲು ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಅತ್ತ ಸರಕಾರ ಅಧಿವೇಶನಕ್ಕೆ ಎಲ್ಲ ವ್ಯವಸ್ಥೆಯನ್ನು ಬೆಂಗಳೂರಿನಿAದ ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡುತ್ತಿದ್ದು, ಸುವರ್ಣ ಸೌಧ ಸೇರಿದಂತೆ ಬೆಳಗಾವಿ ನಗರದ ಸ್ವಚ್ಚತೆ ಜೊತೆಗೆ ಶೃಂಗಾರಗೊAಡಿದೆ.
ಆದರೆ ಈ ಬಾರಿ ಕೂಡಾ ಬೆಳಗಾವಿಯ ಚಳಿಗಾಲದ ಅಧಿವೇಶನವು ಕೇವಲ ಸಂಘಟನೆಗಳ ಪ್ರತಿಭಟನೆ ಹಾಗೂ ಶಾಸಕರ, ಅಧಿಕಾರಿಗಳ ಪಿಕ್‌ನಿಕ್ ಪ್ರವಾಸವಾಗಿ ಮಾರ್ಪಾಡ ಆಗುತ್ತಾ ಅಥವಾ ಈ ಭಾಗದ ಜಲ್ವಂತ್ ಸಮಸ್ಯೆಗಳಿಗೆ ಆಶಾಕಿರಣವಾಗುತ್ತಾ ಎನ್ನುವ ಕುರಿತು ಈ ಭಾಗದ ಸಾರ್ವಜನಿಕರು ಕಾದು ನೋಡುತ್ತಿದ್ದಾರೆ. ಈಗಾಗಲೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಬೆಳಗಾವಿ ಅಧಿವೇಶನ ವೇಳೆಯಲ್ಲಿ ಹಮ್ಮಿಕೊಳ್ಳುವ ಪ್ರತಿಭಟನೆಗಳನ್ನು ಕೈಬಿಟ್ಟು ತಮ್ಮ ಬೇಡಿಕೆಗಳ ಕುರಿತು ಸರಕಾರದ ಗಮನಕ್ಕೆ ತರುವಂತೆ ಕೆಲ ಸಂಘಟನೆಗಳಿಗೆ ಅಧಿಕಾರಿಗಳ ಮೂಲಕ ಸಂಪರ್ಕ ಮಾಡಿ, ಮನವಿ ಮಾಡಿಕೊಂಡಿದ್ದಾರೆ.
ಆದರೆ ಬೆಳಗಾವಿ ಅಧಿವೇಶನವು ಕೇವಲ ಪ್ರತಿಭಟನೆಗಳಿಗೆ ಸಿಯಮಿತವಾಗುತ್ತಾ ಅಥವಾ ಈ ಭಾಗರ ಬರಗಾಲ, ಮಹದಾಯಿ ನೀರಿನ ಯೋಜನೆ ಸೇರಿದಂತೆ ಅನೇಕ ಸಮಸ್ಯೆಗಳತ್ತ ಬೆಳಕು ಚೆಲ್ಲಿ, ಉತ್ತರ ಕರ್ನಾಟಕಕ್ಕೆ ಒಂದು ಹೊಸ ಆಶಾದಾಯಕ ಯೋಜನೆಗಳನ್ನು ನೀಡಿ ಸಮಸ್ಯೆಗಳನ್ನು ಪರಿಹರಿಸುವ ಕರ‍್ಯ ಮಾಡುತ್ತಾ ಎನ್ನುವದನ್ನು ಕಾದು ನೋಡಬೇಕಿದೆ.
ಡಿ. 4ರಂದು ಮಹಾಮೇಳಾವ್ ನಡೆಸಲು ನಾಡದ್ರೋಹಿ ಎಂಇಎಸ್ ತಯಾರಿ
ಬೆಳಗಾವಿ : ರಾಜ್ಯ ಸರಕಾರ ಡಿ. 4ರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿರುವ ವಿರುದ್ದವಾಗಿ ನಾಡದ್ರೋಹಿ ಎಂಇಎಸ್ ಯುವ ಸಂಘಟನೆಯಿAದ ಸಭೆ ನಡೆಸಲಾಗಿದ್ದು, ಅದಿವೇಶನ ಪ್ರಾರಂಭದ ದಿನವಾದ ಡಿ.4ರಂದು ಮಹಾ ಮೇಳಾವಾ ನಡೆಸುವ ಬಗ್ಗೆ ತಯಾರಿ ನಡೆಸಿದೆ ತಿಳಿದು ಬಂದಿದೆ.
ಬೆಳಗಾವಿಯ ಅಧಿವೇಶನ ಹಿನ್ನೆಲೆ ನಗರದ ಎಂಇಎಸ್ ಕಚೇರಿಯಲ್ಲಿ ಮಹಾರಾಷ್ಟöç ಏಕೀಕರಣ ಸಮಿತಿಯ ಯುವ ಅಧ್ಯಕ್ಷ ಅಂಕುಶ ಕೇಸರಕರ ನೇತೃತ್ವದಲ್ಲಿ ಸಭೆ ನಡೆಸಿ ಡಿ. 4ರಂದು ಮಹಾರಾಷ್ಟöç ಏಕೀಕರಣ ಸಮಿತಿಯಿಂದ ಮಹಾ ಮೇಳಾವನ್ನು ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಈ ಸಭೆಯಲ್ಲಿ ತಾಲೂಕಾ ಮುಖ್ಯಸ್ಥ ಮನೋಹರ ಹುಂದಾರೆ, ಉಪಾಧ್ಯಕ್ಷ ವಾಸು ಸಾಮ್ಜಿ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕದಂ. ಉಪಾಧ್ಯಕ್ಷ ರಾಜು ಕದಂ, ಖಜಾಂಚಿ ವಿನಾಯಕ ಕಾವ್ಲೆ, ಸೂರಜ್ ಕುಡುಚಕರ್, ಸಂತೋಷ ಕೃಷ್ಣಾಚೆ, ಮಹೇಶ ಜಾಧವ ಸೇರಿದಂತೆ ಅನೇಕರು ಈ ಸಭೇಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.