ಬೆಳಗಾವಿ ಪಾಲಿಕೆಯ ಮಹಾಪೌರ, ಉಪಮಹಾಪೌರ ಆಯ್ಕೆಗೆ ಕ್ಷಣಗನನೆ ಆರಂಭ : ಯಾರಾಗತಾರೆ ಬಿಜೆಪಿಯಿಂದ ಪ್ರಥಮ ಮಹಿಳಾ ಪ್ರಜೆ

ಬೆಳಗಾವಿ ಪಾಲಿಕೆಯ ಮಹಾಪೌರ, ಉಪಮಹಾಪೌರ ಆಯ್ಕೆಗೆ ಕ್ಷಣಗನನೆ ಆರಂಭ : ಯಾರಾಗತಾರೆ ಬಿಜೆಪಿಯಿಂದ ಪ್ರಥಮ ಮಹಿಳಾ ಪ್ರಜೆ

 ತಡರಾತ್ರಿ ವರೆಗೆ ಬೆಳಗಾವಿ ಖಾಸಗಿ ಹೊಟೇಲ್ ನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ 

ಬೆಳಗಾವಿ : ಸೋಮವಾರ ಬೆಳಿಗ್ಗೆ ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ, ಉಪಮಹಾಪೌರ ಚುನಾವಣೆಯ ಪ್ರಕ್ರಿಯೆ ನಡೆಯಲಿದ್ದು, ಈ ಹಿನ್ನೆಯಲ್ಲಿ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ರವಿವಾರ ರಾತ್ರಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. 


     ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ ಸರಳ ಬಹುಮತದೊಂದಿಗೆ ಬೀಗುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆಯ ಒಟ್ಟು 58 ಸದಸ್ಯರ ಪೈಕಿ 35 ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದಾರೆ. 

   ಪಾಲಿಕೆಯ ಮಹಾಪೌರ ಹುದ್ದೆಗೆ ಸಾಮಾನ್ಯ ಮಹಿಳೆಗೆ ಮೀಸಲು ಇರುವ ಹಿನ್ನೆಲೆಯಲ್ಲಿ ಬೆಳಗಾವಿ ಮಹಾಪೌರ ಹುದ್ದೆಗೆ ಪೈಪೋಟಿ ತೀವ್ರಗೊಂಡಿದೆ. ಮಹಾಪೌರ ಆಯ್ಕೆಗೆ ಹೊಸ ಮಾನದಂಡದ ಮೊರೆ ಹೋದ ಬಿಜೆಪಿ, ಅಪೇಕ್ಷಿತರ ಪ್ರತ್ಯೇಕವಾಗಿ ಆಹ್ವಾನಿಸಿ ಬಿಜೆಪಿ ನಾಯಕರು ಸಂದರ್ಶಿಸುತ್ತಿರುವ ಬಗ್ಗೆ ವರಸಿಯಾಗಿದೆ.

    ಬೆಳಗಾವಿ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಮಹಾಪೌರ ಸ್ಥಾನ ಅಪೇಕ್ಷಿತರನ್ನು  ಆಹ್ವಾನಿಸಿ ಸಭೆ ನಡೆಸಲಾಗಿದೆ. ಬಿಜೆಪಿ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನಾ, ಶಾಸಕರಾದ ಅಭಯ ಪಾಟೀಲ, ಅನಿಲ್ ಬೆನಕೆಯಿಂದ ಮಹಾಪೌರ ಹುದ್ದೆ ಆಕಾಂಕ್ಷಿಗಳ ಸಂದರ್ಶನ ನಡೆಸಿದರು.

   ಮಹಾಪೌರ ಹುದ್ದೆ ಆಕಾಂಕ್ಷಿಗಳಾದ ವಾಣಿ ವಿಲಾಸ ಜೋಶಿ, ರೇಷ್ಮಾ ಪಾಟೀಲ, ಸಾರಿಕಾ ಪಾಟೀಲ, ಶೋಭಾ ಸೋಮನಾಚೆ, ಮಾದ್ವಿ ರಾಗೋಚೆ, ದೀಪಾಲಿ ಟೋಪಗಿ ಸೇರಿ ಹಲವು ಆಕಾಂಕ್ಷಿಗಳ ಕರೆಯಿಸಿ ಸಂದರ್ಶನ ಮಾಡಲಾಗಿದೆ. 

    ಕೊನೆಯ ಕ್ಷಣದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯಿಂದ ಯಾರು ಪ್ರಥಮ ಮಹಾಪೌರರಾಗಿ ಆಯ್ಕೆ ಆಗುತ್ತಾರೊ ಎನ್ನುವದನ್ನು ಕಾದು ನೋಡಬೇಕಾಗಿದೆ. 

ಸುದ್ದಿ ಓದಿ