ಮಹಲಿಂಗಪುರ

ಮಹಾಲಿಂಗಪುರದಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆ

ಮಹಾಲಿಂಗಪುರದಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆ

ಮಹಾಲಿಂಗಪುರ 25: ನ. 24ರಂದು ಗೋಕಾಕ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅಂದಾಜು 40-45 ವರ್ಷದ ಅನಾಮಧೇಯ ವ್ಯಕ್ತಿಯ ಶವ ಕಂಡುಬಂದಿರುವ ಪ್ರಕರಣ ಮಹಾಲಿಂಗಪುರ ಠಾಣೆಯಲ್ಲಿ ದಾಖಲಾಗಿದೆ. 

ಪಟ್ಟಣದ ರಾಘವೇಂದ್ರ ಬೇಕರಿ ಪಕ್ಕದಲ್ಲಿರುವ ಖುಲ್ಲಾ ಜಾಗೆಯಲ್ಲಿ ಮಲಗಿದ ಸ್ಥಿತಿಯಲ್ಲಿ, ಯಾವುದೋ ಕಾಯಿಲೆ ಅಥವಾ ಅಶಕ್ತತೆ ಹೊಂದಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು ಸ್ಥಳಕ್ಕೆ ಎಎಸ್ಸೈಎಸ್‌ಬಿ. ಹಿರೇಕುರುಬರ್ ಭೇಟಿ ನೀಡಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. 


ಸುದ್ದಿ ಓದಿ