ಮನರಂಜನೆ

ಕೊರೊನಾ; ಕಮಲ್‌ ಗುಣಮುಖ ಮತ್ತೆ ಚಿತ್ರೀಕರಣದಲ್ಲಿ ಭಾಗಿ

ಕೊರೊನಾ; ಕಮಲ್‌ ಗುಣಮುಖ ಮತ್ತೆ ಚಿತ್ರೀಕರಣದಲ್ಲಿ ಭಾಗಿ

ಚನ್ನೈ: ಡಿಸೆಂಬರ್ 23.  ಕೊರೊನಾ ಸೋಂಕಿಗೆ ಒಳಗಾಗಿ  ಕೆಲವು  ದಿನಗಳಿಂದ ಪ್ರತ್ಯೇಕವಾಗಿದ್ದ ಕಮಲ್ ಹಾಸನ್ ಗುಣಮುಖರಾಗಿದ್ದಾರೆ.  ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬುಧವಾರ ‘ವಿಕ್ರಮ್’ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ.

ಆಗಸ್ಟ್ ನಲ್ಲಿ  ಚಿತ್ರೀಕರಣ ಪ್ರಾರಂಭಗೊಂಡಿತ್ತು. ಇನ್ನು ಕೆಲವು ದಿನಗಳಲ್ಲಿ ಚಿತ್ರೀಕರಣ ಮುಕ್ತಾಯಗೊಳ್ಳುತ್ತದೆ ಎನ್ನುವ ಸಮಯದಲ್ಲಿ ಕಮಲ್ ಆಕಸ್ಮಿಕವಾಗಿ ಕೊರೊನಾದಿಂದಾಗಿ ಬ್ರೇಕ್ ತೆಗೆದುಕೊಳ್ಳಬೇಕಾಯಿತು. ಚಿತ್ರದಲ್ಲಿ ಕಮಲ್ ಜೊತೆಗೆ ವಿಜಯ್ ಸೇತುಪತಿ ಮತ್ತು ಫಹಾದ್ ಫಾಜಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಈ ಮೂವರ ಕಾಂಬಿನೇಷನ್ ನಲ್ಲಿ ಉಳಿದ ಚಿತ್ರೀಕರಣ ನಡೆಯುತ್ತಿದೆ. ಇದೆ ಸಂದರ್ಭದಲ್ಲಿ  ವಿರಾಮದ ನಂತರ, ಸ್ಟಾರ್  ಕಮಲ್  ಚಿತ್ರೀಕರಣಕ್ಕೆ ಬಂದರು. ಅವರು ಮತ್ತೆ ಎಂದಿನಂತೆ  ಉತ್ಸಾಹದಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು  ಎಂದು ಲೋಕೇಶ್ ಹೇಳಿದರು.

ಸುದ್ದಿ ಓದಿ