ಹಣ ದ್ವಿಗುಣ ಪ್ರಕರಣದಲ್ಲಿ ಕಳ್ಳ ಪೊಲೀಸ ಆಟ ಆಡುತ್ತಿದ್ದ ಪೊಲೀಸಪ್ಪ ಪೊಲೀಸರ ಬಲೆಗೆ : ಮಕ್ಕಳ ಆಟಿಕೆ ನೋಟು ಬಳಸಿ ಜನರಿಗೆ ಪಂಗನಾಮ ಹಾಕುತ್ತಿದ್ದ ಮೂವರು ಖದೀಮರ ಬಂಧನ
ಬೆಳಗಾವಿ : ಜನರಿಗೆ ದಣ ದುಪ್ಪಟ್ಟು ಮಾಡಿಕೊಡುವ ನೆಪದಲ್ಲಿ ಮಕ್ಕಳ ಆಟಿಕೆಯ ನೋಟು ನೀಡಿ ಉಂಡೆನಾಮ ಹಾಕುತ್ತಿದ್ದ ಖದೀಮರ ತಂಡವನ್ನು ಬಂಧಿಸುವಲ್ಲಿ ಜಿಲ್ಲೆಯ ಕಾಗವಾಡ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಈ ಪ್ರಕರಣದಲ್ಲಿ ಒಂದು ಕಾರು, ಬೈಕ್, ನಗದು ಹಣ ಸೇರಿದಂತೆ ಕಳ್ಳ ಪೊಲೀಸ ಆಟ ಆಡುತ್ತಿದ್ದ ಓರ್ವ ಪೊಲೀಸ ಪೇದೆ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣದಲ್ಲಿ ಮಹಾರಾಷ್ಟ್ರದ ಮಿರಜ್‍ನ ಪೆÇಲೀಸ್ ಕಾನ್ಹೇಬಲ್ ಸಾಗರ್ ಜಾಧವ್, ಅರಿಫ್, ಲಕ್ಷ್ಮಣ್ ನಾಯಕ್ ಬಂಧಿತ ಆರೋಪಿಗಳಾಗಿದ್ದಾರೆ. ಈಗಾಗಲೇ ಇವರನ್ನು ಪೆÇಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಈ ಮೋಸದ ಕುರಿತು ಕಾಗವಾಡ ಪೆÇೀಲೀಸರಿಗೆ ದಿ. 1ರಂದು ಸಮೀರ ಭಾನುದಾಸ ಬೋಸಲೆ(40) (ಸಾಃ ಸಾವರ್ಡ, ತಾಃ ತಾಸಗಾಂವ, ಜಿಃ ಸಾಂಗಲಿ) ಇವರು ಕಾಗವಾಡ ಪೊಲೀಸ ಠಾಣೆಗೆ ಹಾಜರಾಗಿ ದೂರು ಒಂದನ್ನು ನೀಡಿದ್ದರು.
ದಿ. 31ರಂದು ರಾತ್ರಿ 8 ಗಂಟೆಯಿಂದ ನಾಲ್ಕು ಜನ ಆರೋಪಿತರು ದೂರವಾಣಿ ಮೂಲಕ ತಮ್ಮನ್ನು ಸಂಪರ್ಕಿಸಿ ತಮಗೆ 500 ರೂ ಮುಖಬೆಲೆಯ 5,00,000 ರೂ. ಹಣ ನೀಡಿದರೆ ನಿಮಗೆ 2,000 ರೂ. ಮುಖಬೆಲೆಯ 6,00,000 ರೂ ದುಡ್ಡು ಕೊಡುತ್ತೆವೆ ಅಂತಾ ಹೇಳಿ ನಂಬಿಸಿ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಮಲಯನ ಮಂದಿರ ಹತ್ತಿರ ಕರೆಯಿಸಿ ನಮ್ಮಿಂದ 5 ಲಕ್ಷ ರೂಪಾಯಿಗಳನ್ನು ತಗೆದುಕೊಂಡಿದ್ದಾರೆ. ನಮಗೆ ಮಕ್ಕಳ ಆಟಿಕೆ ನಕಲಿ ನೋಟುಗಳನ್ನು ತೋರಿಸಿ ಬಳಿಕ ನಮಗೆ ಯಾವುದೇ ಹಣವನ್ನು ವಾಪಸ ಕೊಡದೇ ಪೊಲೀಸರು ಬಂದರು ಎಂದು ಕೂಗಿ ಅಲ್ಲಿಂದ ಫರಾರಿಯಾಗಿದ್ದಾರೆ.
ಆರೋಪಿತರು ತಂದಿದ್ದ ನಂಬರ ಪೆಟ್ ಇಲ್ಲದ ಹೊಂಡಾಯ ಕಂಪನಿಯ ವೇನೂ ಕಾರು ಮತ್ತು ಬುಲೆಟ್ ಬೈಕ ಮೇಲೆ ಹತ್ತಿ ಫರಾರಿಯಾಗಿದ್ದಾರೆ. ಅವರಿಗೆ ಪತ್ತೆ ಮಾಡಿ ನಮ್ಮ ಹಣವನ್ನು ಮರಳಿ ಕೊಡಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿಸಿಕೊಂಡಿದ್ದರು. ಈ ದೂರು ದಾಖಲಿಸಿಕೊಂಡ ಕಾಗವಾಡ ಪೊಲೀಸರು ಮಿರಜ್‍ನ ಓರ್ವ ಪೊಲೀಸ ಪೇದೆ ಸೇರಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಅದರಲ್ಲಿನ ಒಂದು ಲಕ್ಷ ನಗದು ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರು ತಿಳಿಸಿದ್ದಾರೆ. ಈ ಕುರಿತು ಕಾಗವಾಡ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.