ಸಹಕಾರ ಸಂಘಗಳು ರೈತರಿಗೆ ವರದಾನ: ಶಾಸಕ ಪರಮೇಶ್ವರನಾಯ್ಕ
ಲೋಕದರ್ಶನ ವರದಿ
ಹೂವಿನಹಡಗಲಿ 11: ಸಹಕಾರ ಸಂಘಗಳು ರೈತರಿಗೆ ಬಡ್ಡಿರಹಿತ ಸಾಲ, ರಸ ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಬೇಕಾದ ವಸ್ತುಗಳನ್ನು ಅತಿ ಕಡಿಮೆ ಬೆಲೆಗೆ ಕೃಷಿ ಸಹಕಾರ ಸಂಘಗಳು ನೀಡುತ್ತಿವೆ ಎಂದು ಶಾಸಕ ಪಿಟ.ಪರಮೇಶ್ವರನಾಯ್ಕ ಹೇಳಿದರು.
ತಾಲೂಕಿನ ಇಟ್ಟಿಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ನೂತನ ಗೋದಾಮು ಕಟ್ಟಡಗಳ ಉದ್ಘಾಟಿಸಿ ಮಾತನಾಡಿದ ಅವರು ರೈತರು ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆದು ಅದರ ಸದುಪಯೋಗ ಪಡೆದುಕೊಂಡು ಪಡೆದ ಸಾಲವನ್ನು ಮರುಪಾವತಿ ಮಾಡಿ ಎಂದ ಅವರು ಇಟ್ಟಿಗಿ ಹೋಬಳಿ ಸೊಸೈಟಿ 12.20 ಕೋಟಿ ವಹಿವಾಟು ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇಟ್ಟಿಗಿ ಗ್ರಾಮಕ್ಕೆ ನೂತನ ಕೆರೆ ನಿರ್ಮಾಣಕ್ಕೆ ಸ್ಥಳ ಅವಕಾಶ ನೀಡಿದರೇ ಒಂದು ವರ್ಷದಲ್ಲಿ ಕೆರೆ ನಿರ್ಮಿಸಿ ನದಿಯಿಂದ ನೀರು ತುಂಬಿಸುವುದಾಗಿ ಹೇಳಿದ ಕುಡಿಯುವ ನೀರಿನ ಸಮಸ್ಯೆ, ಅಂತರ್ಜಲ ವೃದ್ದಿಯಾಗುತ್ತದೆ ಗ್ರಾಮಸ್ಥರು ಸಹಕಾರ ಬೇಕು ಎಂದರು.
ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಯ್ಯ ಮಾತನಾಡಿ ರೈತರ ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ ಜತೆಗೆ ಹಡಗಲಿ ಮಲ್ಲಿಗೆ ಹೂವಿಗೆ ಹೆಸರಾದರೇ ಹಗರಿಬೊಮ್ಮನಹಳ್ಳಿ ತಾಲೂಕು ತೋಟಗಾರಿಕೆ ಹಣ್ಣಿನ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಆಗಬೇಕಾಗಿದೆ ಎಂದರು.ಬಿಡಿಸಿಸಿ ಬ್ಯಾಂಕ್ ನಿದೇರ್ಶಕ ಐಗೋಳ ಚಿದಾನಂದ ಮಾತನಾಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಚಿಕ್ಕಗೌಡ್ರ ನಾಗನಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಹನುಮಂತಪ್ಪ, ಗ್ರಾ.ಪಂ.ಅಧ್ಯಕ್ಷೆ ಎಂ.ಪುಷ್ಪಾವತಿ, ಮಹಾಜನದಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಕೆ.ಶಕುಂತಲ, ತಾ.ಪಂ.ಮಾಜಿ ಸದಸ್ಯ ಬಿ.ಲೋಕಪ್ಪ, ಶ್ರೀಕಾಂತಪ್ಪ, ಬಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಣಾಧಿರಿ ಡಿ.ಶಂಕರ, ಉಪ ನಿಬಂಧಕ ಎಲ್.ಸಾಧುರೆ, ಗ್ಯಾನಪ್ಪ, ಆಡಳಿತ ಮಂಡಳಿ ಅಧ್ಯಕ್ಷ ಹೆಚ್.ಸಣ್ಯಪ್ಪ,ಉಪಾಧ್ಯಕ್ಷ ಎ.ಓಂಕಾರ್ಪ, ಕಾರ್ಯನಿರ್ವಾಹಕ ಎಸ್.ಸುರೇಶ, ನಿರ್ದೇಶಕರು ಇದ್ದರು.