ಧೃಢ ನಿರ್ಧಾರ ಸಾಧನೆಗೆ ಸಹಕಾರ: ನ್ಯಾ ಅನುಪಮ
ಹಗರಿಬೊಮ್ಮನಹಳ್ಳಿ 14: ಸಾಧನೆಯ ಹಾದಿ ಹತ್ತಾರು ಅಡೆ ತಡೆಗಳಿಂದ ಕೂಡಿರುತ್ತದೆ ಅದಕ್ಕೆ ಪ್ರಥಮವಾಗಿ ಮನಸ್ಸಿನಲ್ಲಿ ದೃಢ ನಿರ್ಧಾರ ಸಹಕಾರವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಧೀಶರಾದ ಅನುಪಮ ಡಿ ಅವರು ಹೇಳಿದರು.
ತಾಲೂಕಿನ ವಲ್ಲಭಾಪುರ ಮುರಾರ್ಜಿ ವಸತಿ ಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲೂಕು ಶಿಕ್ಷಣ ಇಲಾಖೆ, ವಲ್ಲಭಾಪುರ ಗ್ರಾ.ಪಂಚಾಯತಿಯ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು-ನೆರೆವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನ ಎಲ್ಲರಿಗೂ ಒಂದೇ ಅಗಿದೆ ಮೆಲ್ದರ್ಜೆ ಕೆಳದರ್ಜೆ ಎಂಬ ಬೇಧ ಭಾವವಿಲ್ಲದೇ ಸರ್ವರೂ ಒಂದೇ ಎಂಬ ಧೇಯವ್ಯಾಕ್ಯವು ಸಂವಿಧಾನದ್ದಾಗಿದೆ ಎಂದರು.ಶಿಕ್ಷಣ ಪಡೆದುಕೊಳ್ಳುವುದು ಪ್ರತಿಯೊಬ್ಬರ ಹಕ್ಕಾಗಿದೆ ಅವಕಾಶ ಸಿಕ್ಕಾಗ ಶಿಕ್ಷಣವನ್ನು ಪಡೆದುಕೊಳ್ಳಿ, ಅವಕಾಶವಿದ್ದು ಶಿಕ್ಷಣ ಪಡೆಯದವರು ನಿಜಕ್ಕೂ ಮಾನವರಲ್ಲ ಎಂದರು. ಸಾಧನೆಗೆ ಹತ್ತಾರು ಅಡೆತಡೆಗಳು ಬರುತ್ತವೆ ಅವೆನ್ನೆಲ್ಲಾ ಪಕ್ಕಕ್ಕಿಟ್ಟು ಸಾಧನೆಯ ಮೆಟ್ಟಿಲೇರಬೇಕು, ಉತ್ತಮ ಸ್ನೇಹಿತರೊಂದಿಗೆ ಬೆರೆಯುವಂತೆ ಕರೆ ನೀಡಿದರು, ಶಾಂತಯುತ ಜೀವನದಿಂದ ಪೋಲೀಸ್ ಠಾಣೆ, ನ್ಯಾಯಾಲಯಗಳ ಮೆಟ್ಟಿಲೇರುವುದರಿಂದ ತಪ್ಪಿಸುತ್ತವೆ ಅದಕ್ಕೆ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುವಂತೆ ತಿಳಿಸಿದರು. ಮಕ್ಕಳ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಘೋಷಣೆ, ಪ್ರಬಂಧ, ಕಾನೂನು ಸೇವೆಗಳು,ಮಕ್ಕಳ ಹಕ್ಕುಗಳು,ಪರಿಸರದ ಸಮಸ್ಯೆಗಳು, ಚಿತ್ರ ಕಲೆ ಸ್ಪರ್ಧೆಗಳನ್ನು ಏರಿ್ಡಸಿ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂಜರ್ಭದಲ್ಲಿ ವಲ್ಲಭಾಪುರದ ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಜಯಸೂರ್ಯನಗೌಡ, ವಕೀಲರ ಸಂಘದ ಅಧ್ಯಕ್ಷ ಬಿ.ಬಸಪ್ಪ, ಉಪಾಧ್ಯಕ್ಷ ವೆಂಕಟೇಶ ನಾಯ್ಕ್, ಹಿರಿಯ ವಕೀಲರಾದ ಗಂಗಾಧರ,ಅಶೋಕ ಕನಕೇರಿ, ವಕೀಲರಾದ ಯಾಸ್ಮೀನ್, ಪಿಡಿಒ ಶಾಂತನಗೌಡ ಇದ್ದರು ಅಧ್ಯಕ್ಷತೆಯನ್ನು ಬಿಇಒ ವಹಿಸಿದ್ದರು.