ಕಬಡ್ಡಿ ಭಾರತೀಯರು ವಿಶ್ವಕ್ಕೆ ಕೊಟ್ಟ ಕೊಡುಗೆ :ದರೇಪ್ಪ ಸಾಂಗ್ಲೀಕರ
ಮಹಾಲಿಂಗಪುರ : ಕಬಡ್ಡಿ ಕ್ರೀಡೆಯನ್ನು ಭಾರತೀಯರು ವಿಶ್ವಕ್ಕೆ ಪರಿಚಯಿಸಿದರು, ಇಂದು ಇಡೀ ವಿಶ್ವ ಕಬಡ್ಡಿ ಆಡುತ್ತಿದೆ. ಎಂದರೆ ಅದಕ್ಕೆ ಭಾರತ ಕಾರಣ ಭಾರತದಲ್ಲಿ ಹುಟ್ಟಿದ ಈ ಆಟ ಇಂದು ಬೇರೆ ದೇಶಗಳು ಈ ಆಟವನ್ನು ಕರಗತ ಮಾಡಿಕೊಂಡು ವಿಶ್ವ ಚಾಂಪಿಯನ್ ಆಗಿವೆ ಎಂದು ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷ ದರೇಪ್ಪ ಸಾಂಗ್ಲೀಕರ ಹೇಳಿದರು.
ಪಟ್ಟಣದ ಸಿದ್ದು ಕೊಣ್ಣೂರ್ ಸ್ಪೋಟ್ಸರ್್ ಕ್ಲಬ್ ಆಶ್ರಯದಲ್ಲಿ ಕೆಎಲ್ಇ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಅಖಿಲ ಭಾರತ ಆಹ್ವಾನಿತ ಎ ಗ್ರೇಡ್ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಮಹಾಲಿಂಗಪುರ ಕ್ರೀಡೆ ಹಾಗೂ ಕಲೆಯ ತವರೂರು ಆಗಿದೆ, ಇಲ್ಲಿ ಎಲ್ಲ ತರಹದ ಕ್ರೀಡಾಕೂಟಗಳು ಹಾಗೂ ಅಧ್ಯಾತ್ಮ ಕಾರ್ಯಗಳು ನಿರಂತರ ನಡೆಯುತ್ತಿರುವುದೇ ಸಾಕ್ಷಿಯಾಗಿದೆ ಎಂದರು.
ನಂತರ ಮಾತನಾಡಿದ ಬೆಳಗಲಿಯ ಸಿದ್ದರಾಮ ಶಿವಯೋಗಿಗಳು ಭಾರತ ಇಂದು ಎಲ್ಲ ರಂಗದಲ್ಲಿ ವಿಶ್ವ ಗುರುವಿನ ಸ್ಥಾನ ಅಲಂಕರಿಸುತ್ತಿದೆ . ರಾಜಕೀಯದಲ್ಲಿ,ಕ್ರೀಡೆಯಲ್ಲಿ,ಧಾಮರ್ಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಮುನ್ನುಗ್ಗುತ್ತಿದೆ. ಸಿದ್ದು ಕೊಣ್ಣೂರ ಅವರು ತನು ಮನ ಧನದಿಂದ ಇಂದಿನ ಈ ಮಹಿಳಾ ಕಬಡ್ಡಿ ಪಂದ್ಯಾವಳಿಗೆ ಸ್ಫೂತರ್ಿಯಾಗಿದ್ದಾರೆ.ಎಂದರು.
ನಂತರ ಮಾತನಾಡಿದ ಬಬಲಾದಿಯ ಅಪ್ಪಾಜಿ ಹಿರೇಮಠ ಟೊಳ್ಳು ಗಟ್ಟಿ ಜಗತ್ತಿನಲ್ಲಿ ಗಟ್ಟಿಯಾಗಿರುವವ ಮಾತ್ರ ಬದುಕಲು ಸಾಧ್ಯ ಎಂದರು. ಗಟ್ಟಿಯಾಗಿರುವವ ತಾನು ಗಳಿಸಿದ್ದರಲ್ಲಿ ತಾನು ಬದುಕಿ ದಾನ ಧರ್ಮ ಮಾಡಿ ಇತರರ ಬದುಕಿಗೆ ದಾರಿ ತೋರುವವ, ಟೊಳ್ಳು ಮನುಷ್ಯ ತಾನೇ ಗಳಿಸಬೇಕು ತಾನೇ ಬದುಕುಬೇಕೆಂದು. ದುರಾಸೆ ಇರುವವ ಸರ್ವ ನಾಶ ಆಗುತ್ತಾನೆ ಎಂದರು. ಈ ಬಬಲಾದಿ ಸದಾಶಿವ ಮುತ್ತ್ಯಾ ಬ್ರಾಹ್ಮಣರಿಗೆ ಹರನಾಗಿ, ಕುರುಬರಿಗೆ ಭೀರನಾಗಿ, ಮುಸ್ಲಿಮರಿಗೆ ಪಿರನಾಗಿ, ಸರ್ವ ಧರ್ಮಯರಿಗೂ ಒಂದೊಂದು ಅವತಾರ ತಾಳಿ ಕಾಪಾಡುತ್ತಾನೆ ಎಂದು ಹೇಳಿದರು.
ಸಿದ್ದು ಕೊಣ್ಣೂರ : ಕಬಡ್ಡಿಯನ್ನು ಪ್ರೋತ್ಸಾಹಿಸಿ ಬೆಳೆಸಿ ಹೆಮ್ಮರವಾಗಿಸಬೇಕು ಎಂಬ ಮಹದಾಸೆ ಇದೇ,ಈ ಉತ್ತರ ಕನರ್ಾಟಕ ಭಾಗದ ಆಟಗಾರರಿಗೆ ಬೆನ್ನೆಲುಬಾಗಿ ನಿಂತು, ತನ್ನದೇ ಹೆಸರಿನ ಸಿದ್ದು ಕೊಣ್ಣೂರ ಸ್ಪೋರ್ಟ್ಸ್ ಕ್ಲಬ್ ಹುಟ್ಟುಹಾಕಿ ಅದರ ಮುಖಾಂತರ ಆಟಗಾರರನ್ನು ಗುರುತಿಸಿ ಬೆಳೆಸುವುದು ನನ್ನ ಉದ್ದೇಶವಾಗಿದೆ ಎಂದು ಹೇಳಿದರು. ಈ ಪಂದ್ಯಾವಳಿ ಪ್ರಥಮ ಬಹುಮಾನ 150000 ಎರಡನೆಯ ಬಹುಮಾನ 100000 ತೃತೀಯ ಹಾಗೂ ಚತುರ್ಥ ಬಹುಮಾನ ತಲಾ 50000 ರೂಪಾಯಿಗಳನ್ನು ಕೊಡಲಾಗುವುದು ಎಂದು ಹೇಳಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಪತ್ರಕರ್ತ ಜಯರಾಮ ಶೆಟ್ಟಿ ತಾನು ಒಬ್ಬ ಆಟಗಾರನಾಗಿ ಬೆಳೆದು ಕ್ರೀಡೆಯನ್ನು ಬೆಳೆಸುವದು ಅಪರೂಪ ಈ ಘಟನೆಗೆ ಸಾಕ್ಷಿಯಾಗಿದ್ದು ರನ್ನ ಬೆಳಗಲಿಯ ಉತ್ಸಾಹಿ ಯುವ ರಾಜಕಾರಣಿ ಸಿದ್ದು ಕೊಣ್ಣೂರ ಎಂದು ಹೇಳಿದರು.
ಈ ಪಂದ್ಯಾವಳಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಇಪ್ಪತ್ತು ಮಹಿಳಾ ತಂಡಗಳ ಭಾಗವಹಿಸಿದ್ದು. ನಗರದಲ್ಲಿ ಹಬ್ಬದ ವಾತಾವರಣ ಕಳೆ ಕಟ್ಟಿತು.
ಬಂಡಿಗನಿಯ ಬಸವ ಗೋಪಾಲ ಸ್ವಾಮೀಜಿ, ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಪುರಸಭೆ ಸದಸ್ಯರಾದ ರವಿ ಜವಳಗಿ, ಚನ್ನಬಸು ಯರಗಟ್ಟಿ,ಯಲ್ಲನಗೌಡ ಪಾಟೀಲ, ಪ್ರಹ್ಲಾದ್ ಸಣ್ಣಕ್ಕಿ,ಮುಖಂಡರಾದ ಮಹಾಂತೇಶ ಹಿಟ್ಟಿನಮಠ ಅಶೋಕ ಅಂಗಡಿ,ಶ್ರೀಶೈಲ ದಳವಾಯಿ,ಅಂಬಾದಾಸ ಕಾಮೂತರ್ಿ,ಅಜರ್ುನ ಹಲಗಿಗೌಡರ, ನಂದಕುಮಾರ ಪಾಟೀಲ, ಡಾ ಎ ಆರ್ ಬೆಳಗಲಿ,ರಂಗನಗೌಡ ಪಾಟೀಲ,ಸಿದ್ದುಗೌಡ ಪಾಟೀಲ, ಮಲ್ಲಪ್ಪಾ ಭಾವಿಕಟ್ಟಿ, ಶಿವನಗೌಡ ಪಾಟೀಲ, ಶಿವಲಿಂಗ ಕೌಜಲಗಿ,ಸಣ್ಮುಖ ಉಳ್ಳಾಗಡ್ಡಿ, ಪ್ರಭು ತಂಬೂರಿ, ಚನ್ನಪ್ಪ ಪಟ್ಟಣಶೆಟ್ಟಿ, ಶ್ರೀಶೈಲ ಭಜಂತ್ರಿ,ಚನ್ನಬಸು ಹುರಕಡ್ಲಿ, ಈರಪ್ಪ ಕಿತ್ತೂರ, ದುಂಡಪ್ಪ ಜಾಧವ, ಭೀಮಶಿ ಸಸಾಲಟ್ಟಿ, ನಿಂಗಪ್ಪ ಬಾಳಿಕಾಯಿ, ಮುತ್ತು ಧವಳೇಶ್ವರ, ಹಣಮಂತ ಕೊಣ್ಣೂರ, ಉಸ್ಮಾನ ಪೆಂಡಾರಿ,ಯಮನೂ ಉಪ್ಪಾರ, ಕಲ್ಲಪ್ಪ ಅವರಾದಿ, ಎಸ್ ಅಯ್ ಕುಂದಗೋಳ, ವಿ ಎಸ್ ಅಂಗಡಿ, ವಿ ಎಂ ಮುಧೋಳ, ಹೆಚ್ ಎಸ್ ಭಜಂತ್ರಿ, ಸೇರಿದಂತೆ ಹಲವರು ಇದ್ದರು, ಶ್ರತಿ ಕಾರ್ಯಕ್ರಮ ನಿರೂಪಣೆ ಮಾಡಿದರು, ನಾರನಗೌಡ ಉತ್ತಂಗಿ, ಸ್ವಾಗತಿಸಿದರು,ಎಂ ಡಿ ಆನಂದ ಪ್ರಾರ್ಥನೆ ಸಲ್ಲಿಸಿದರು. ಗಣ್ಯ ಮಾನ್ಯರನ್ನು ಸನ್ಮಾನಿಸಲಾಯಿತು.