ಮುದ್ದೆಬಿಹಾಲ್

ಅಕ್ರಮ ಮದ್ಯ ಮಾರಾಟ ವಿರೋಧಿಸಿ ಮುಂದುವರೆದ ಧರಣಿ, 4ನೇ ಹಂತದ ಉಪವಾಸ ಸತ್ಯಾಗ್ರಹ.

ಅಕ್ರಮ ಮದ್ಯ ಮಾರಾಟ ವಿರೋಧಿಸಿ ಮುಂದುವರೆದ ಧರಣಿ, 4ನೇ ಹಂತದ ಉಪವಾಸ ಸತ್ಯಾಗ್ರಹ.
ಪಟ್ಟಣದ ಮಿನಿ ವಿಧಾನಸೌಧದ ಎದುರುಗಡೆ ನಡೆಸುತ್ತಿರುವ ಅಕ್ರಮ ಮದ್ಯ ಮಾರಾಟ ವಿರೋಧಿಸಿ ಸತ್ಯಾಗ್ರಹ ಸ್ಥಳಕ್ಕೆ ವಿವಿಧ ಸಂಘಟನ

ಮುದ್ದೇಬಿಹಾಳ 11: ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟದ ವಿರೋಧಿಸಿ ಧರಣಿ ಸತ್ಯಾಗ್ರಹ 15ನೇ ದಿನ ಪೂರೈಸಿ 16ನೇ ದಿನಕ್ಕೆ 4ನೇ ಹಂತದ ಹೋರಾಟವಾಗಿ ಉಪಾವಾಸ ಸತ್ಯಾಗ್ರಹ ಪ್ರಾರಂಭಸಲಾಗುವದು. ನಾವು ತಹಶೀಲ್ದಾರ ಮುಖಾಂತರ  ಜಿಲ್ಲಾಧಿಕಾರಿಗಳಾದ ವಿಜಯಮಾಹಾಂತೇಶ ದಾನಮ್ಮನವರಿಗೂ ಮಧ್ಯದಂಗಡಿಗಳನ್ನು ಪರೀಶೀಲನೆ ಮಾಡಲು ವಿನಂತಿ ಮಾಡಿದರೂ ಇನ್ನುವರೆಗೂ ಬಂದಿರುವದಿಲ್ಲಾ, ಅವರು ಇನ್ನೂ ಯಾಕೆ ಬಂದಿಲ್ಲವೇಂಬುವದು ನಮಗೆ ತಿಳಿಯುತ್ತಿಲ್ಲಾ ಎಂದು ಸತ್ಯಾಗ್ರಹೀ ಮಂಜುನಾಥಸ್ವಾಮಿ ಕುಂದರಗಿ ಜಿಲ್ಲಾಡಳಿತದ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. 

ಇಲ್ಲಿನ ತಹಶೀಲ್ದಾರ ಕಚೇರಿಯ ಎದುರಿಗೆ ಅಕ್ರಮ ಮದ್ಯ ಮಾರಾಟ ವಿರೋಧಿಸಿ ಸತ್ಯಾಗ್ರಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸತ್ಯಾಗ್ರಹದ ಎರಡು ದಿನದಲ್ಲಿ ಅಬಕಾರಿ ಡಿಸಿಯವರು ಬಂದು ನಮಗೆ ಲೀಖಿತವಾಗಿ ಉತ್ತರ ನೀಡುತ್ತೇವೆ ಎಂದು ಬರವಸೆಯನ್ನು ನೀಡಿದ್ದರು, ನಂತರ ತಾಲೂಕಾ ಅಬಕಾರಿ ನೀರಿಕ್ಷಕಿ ಜ್ಯೋತಿ ಮೈತ್ರೀಯವರು ಬಂದು ಅಸಮರ​‍್ಕವಾದ ಉತ್ತರ ನೀಡಲು ಬಂದಿದ್ದರು, ನಾವುಗಳು ನೀವು ಕೋಡುತ್ತಿರುವ ಉತ್ತರ ಅಸಮರ​‍್ಕವಾಗಿದೆ ನೀಖರವಾದ ಉತ್ತರ ನೀಡಿ ಎಂದು ಪಟ್ಟು ಹಿಡಿದ್ದಿದ್ದೇವು, ನಂತರ ನಾವುಗಳು ತಹಶೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗಳು ಬಂದು ನಮ್ಮ ಬೇಡಿಕೆಗಳನ್ನು ಹಾಗೂ ಸದ್ಯದ ಮುದ್ದೇಬಿಹಾಳ, ತಾಳೀಕೋಟೆ, ನಾಲತವಾಡ ಬಾಗಗಳಲ್ಲಿ ಮಧ್ಯದಂಗಡಿಗಳನ್ನು ಪರೀಶೀಲನೆಗೆ ಮನವಿ ಮಾಡಿಕೊಂಡಿದ್ದೇವು ನಮ್ಮ ಮನವಿಗೆ ಇನ್ನೂ ಜಿಲ್ಲಾಡಿಳಿತ ಸ್ಪಂದಿಸಿಲ್ಲಾ ಎಂದರು.   

ಈ ವೇಳೆ ದಲಿತ ಮುಖಂಡ ಪ್ರಶಾಂತ್ ಕಾಳೆ ಮಾತನಾಡಿ  ಡಿಸಿಯವರು ನಮ್ಮ ಮನವಿಗೆ ಸ್ಪಂದಿಸುತ್ತಾರೆ ಎಂಬುವ ವಿಶ್ವಾಸ ನಮಗೀದೆ, ಇಂದಿನಿಂದ ನಮ್ಮ ಹೋರಾಟ 4ನೇ ಹಂತದ ಹೋರಾಟವಾಗಿ ಇಲಾಖೆಯ ಅವದಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡಲು ತಿರ್ಮಾನಿಸಿದ್ದೇವೆ, ಮತ್ತು ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಗಳಿಂದ ಜನಸಾಮಾನ್ಯರು ನಮ್ಮ ಸತ್ಯಾಗ್ರಹಕ್ಕೆ ಬೆಂಬಲ ನೀಡಲು ಬರುತ್ತಿದ್ದಾರೆ, ಮತ್ತು ಈಗಾಗಲೇ ನಮ್ಮ ಸತ್ಯಾಗ್ರಹಕ್ಕೆ ಹಲವು ದಲಿತಪರ, ಕನ್ನಡಪರ, ಪ್ರಗತಿಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಹೋರಾಟವನ್ನು ಹತ್ತೀಕ್ಕಲು ಪಟ್ಟಬದ್ದ ಹಿತಾಸಕ್ತಿಗಳು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿರುವರಿಗೆ ಕಾಲವೇ ಉತ್ತರಿಸಲಿದೆ ಎಂದರು.  ಈ ಸಂಧರ್ಭದಲ್ಲಿ ಭಗವಂತ ಕಬಾಡೆ, ಮುತ್ತು ಮಾದರ, ದೇವರಾಜ್ ಹಂಗರಗಿ, ಮುತ್ತಪ್ಪ ಪೂಜಾರಿ, ಪ್ರಕಾಶ ಸರೂರ, ರಾಜುಗೌಡ ತುಂಬಗಿ, ಆರ್ ಎಸ್ ಪಾಟೀಲ್, ಎಸ್ ಆಯ್ ಕಲ್ಲೂರ, ಅರವಿಂದ ಕಾಸೀನಕುಂಟೆ, ಬಿ ಆರ್ ಪಾಟೀಲ್,ಲಾಲಸಾಬ ಜತ್ತಿ, ಸಂಗು ಚಲವಾದಿ, ಇನ್ನೀತರರು ಇದ್ದರು. 

ಮುದ್ದೇಬಿಹಾಳ :- ಅಕ್ರಮ  ಮದ್ಯ ಮಾರಾಟ ಸತ್ಯಾಗ್ರಹ ಪ್ರಾರಂಭವಾಗಿದ್ದರಿಂದ ಸುಮಾರು ಹದಿನೈದು ದಿನಗಳಲ್ಲಿ ಅಬಕಾರಿ ಅಧಿಕಾರಿಗಳು, ಮಧ್ಯದಂಗಡಿಗಳ ಮಾಲಿಕರ ಮಧ್ಯ ಜಟಾಪಟಿ ನಡೆಯುತ್ತಿದ್ದೆ ಇಷ್ಟು ದಿನ ಒಳಗೋಳಗೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಈಗ ಬಟಾಬಯಲಾಗಿದೆ. 

ಕರ್ತವ್ಯಕ್ಕೆ ಅಢ್ಡಿಪಡಿಸಿದ ಕರ್ತವ್ಯನಿರತ ಅಧಿಕಾರಿಯ ಸಿಬ್ಬಂದ್ದಿಯ ಮೇಲೆ ಹಲ್ಲೇಗೆ ಯತ್ನೀಸಿ, ಆವಾಚ್ಯ ಶಬ್ದಗಳಿಂದ  ಬೈದು ಜೀವ ಬೇದರಿಕೆ ಆರೋಪದ ಮೇಲೆ ಇಲ್ಲಿನ ಆಲಮಟ್ಟಿ ರಸ್ತೇಯಲ್ಲಿರುವ ಸಿಎಲ್ -7 ಹೊಂದಿರುವ ಪಲ್ಲವಿ ಲಾಡ್ಜಿಂಗ್ ಮಾಲಿಕರಾದ  ಸಂಗಮೇಶ ಕರಬಂಟನಾಳ, ಸಹೋದರರಾದ ಮಹಾಂತೇಶ ಕರಬಂಟನಾಳ, ಬಸವರಾಜ ಕರಬಂಟನಾಳ ವಿರುದ್ದ ಅಬಕಾರಿ ಉಪ ನೀರಿಕ್ಷಕ ಬೀರ​‍್ಪ ನಾಗಠಾಣ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಕಲಂ 353,341,504,506 ರೆ​‍್ಳವಿ 34 ಐಪಿಸಿ ಅಡಿ ಪ್ರಕರಣ ದಾಖಲಿಸಿದ್ದಾರೆ ಜೂ,9 ರಂದು ಬೆಳಗ್ಗೆ 9:00 ಸುಮಾರಿಗೆ ಪಲ್ಲವಿ ಲಾಡ್ಜಿಂಗ್ ಮತ್ತು ಬೋರ್ಡಿಂಗ್ ನಲ್ಲಿ ಸಿಎಲ್,-7 ಸನ್ನದು ನಿಯಮ ಉಲ್ಲಂಘಿಸಿ  ಅವದಿಪೂರ್ವ ಅಂಗಡಿ ತೆರೆದು ಕಿಟಕಿ ಮೂಲಕ ಮಧ್ಯ ಮಾರಾಟ ದೂರು ಬಂದ ಹಿನ್ನಲ್ಲೇಯಲ್ಲಿ  ತಕ್ಷಣ ಸಿಬ್ಬಂದ್ದಿಯವರು ಜೊತೆಗೆ ಸ್ಥಳಕ್ಕೆ ಹೊದಾಗ ಮುಂಬಾಗದ ಸೇಟ್ರೇಸ್ ಮುಚ್ಚಿತ್ತು, ಅಂಗಡಿಯ ಬಲಗಡೆ ಕಿಟಕಿ ತೆರೆದು ಗ್ರಾಹಕರಿಗೆ ಮಧ್ಯ ನೀಡುತ್ತಿರುವದು ಕಂಡು ಬಂದ್ದಿದ್ದನ್ನು ನೊಡಿ ವಿಚಾರಿಸಿದಾಗ ಮಧ್ಯ ನೀಡುತ್ತಿರುವ ವ್ಯಕ್ತೀಯ ಹೆಸರು ಸಿದ್ದಪ್ಪ ಕನಕಿ ಎಂದು ಅವದಿಗಿಂತ ಮುಂಚೆ ಸನ್ನದು ತೆರೆದ ಬಗ್ಗೆ ಕೇಳಿದಾಗ ನಮ್ಮ ಮಾಲಿಕರು ಕಿಟಕಿಯ ಮುಖಾಂತರ ಮಧ್ಯ ಮಾಡಲು ಹೇಳಿದ್ದರು ಎಂದು ಹೇಳಿದ್ದಾನೆ.ಇದಲ್ಲದೆ ದೂರವಾಣಿ ಮುಖಾಂತರ ಕರೆ ಮಾಡಿ ಮಾಲಿಕರನ್ನು ಅಂಗಡಿಗೆ ಕರೆಸಿಕೊಂಡಿದ್ದಾನೆ, ಅವದಿಗಿಂತ ಮುಂಚೆ ಮಧ್ಯ ಮಾರಾಟ ಮಾಡುವದು ಅಬಕಾರಿ ನಿಯಮದ ಉಲ್ಲಂಘಟನೆಯಾಗಿದ್ದು, ಬಿಎಲ್‌ಸಿ ಪ್ರಕರಣ ದಾಖಲಿಸಿಕೋಳ್ಳುವದಾಗಿ ಹೇಳಿ ತಪ್ಪೋಪ್ಪಿಗೆ ಹೇಳಿಕೆ ಪಡೆದುಕೊಂಡು ಪತ್ರಕ್ಕೆ ಹಾಗೂ ದಸ್ತಗಿರಿ ಜಾಮೀನು ಪತ್ರಕ್ಕೆ ಸಹಿ ಪಡೆದುಕೋಲ್ಳಲಾಯಿತು. 

ಸನ್ನದುಯದಾರನ ಸಹೋದರ ಮಾಹಾಂತೇಶ ಕರಬಂಟನಾಳ ಅಂಗಡಿಯ ಒಳಗೆ ಬಂದು ಸೇಟ್ರಸ್ ಮುಚ್ಚಿ ಒಳಗಿನಿಂದ ಲಾಕ್ ಮಾಡಿದ ಆಗ ಮಾಹಾಂತೇಶನು ಸ್ವಲ್ಪ ಸಮಯಕ್ಕಿಂತ ಮುಂಚೆ ತೆರೆದರೇ ಏನಾಯಿತು, ಎಂದು ದಬಾಯಿಸಿ  ತನ್ನ ಸಹೋದರನಾದ ಸಂಗಮೇಶ ಕೆಬಂಟನಾಳನನ್ನು  ಸ್ಥಳಕ್ಕ ಕರೆಸಿಕೊಂಡ. ಆಗ ಸಂಗಮೇಶ ಕರಬಂಟನಾಳ ತನ್ನ ಕೈಯಲ್ಲಿದ್ದ ತಪ್ಪೊಪ್ಪಿಗೆ ಪತ್ರ ಹಾಗೂ ಜಾಮೀನು ಪತ್ರವನ್ನು ಅಧಿಕಾರಿಯ ಕೈಯಿಂದ ಕಸಿದುಕೊಂಡು ಹಿಂದ ನಿಮ್ಮ ಡಿಸಿಯನ್ನು ಹೋಡದಿನಿ ನಾನು ಎಂದು ನನಗೆ ಆವಾಚ್ಯ ಶೆಬ್ದಗಳೀಂದ ಬೈದು ಜೀವ ಬೇದರಕೆ ಹಾಕಿದ್ದಾನೆಂದು ಅಧಿಕಾರಿ ಆರೋಪಿಸಿದ್ದಾನೆ.  

ಕೇಸ್ ಗೀಸ್ ಅಂದ್ರ ನೀ ಇಲ್ಲಿಂದ ಹೊರಗ ಹೋಗಂಗಿಲ್ಲಾ, ನೋಡು ಎಂದು ಮೈಮೇಲಿ ಏರಿ ಬಂದನು ಈ ಮೂವರು ಸೇರಿ ನಾನು ನಿರ್ವಹಿಸುತ್ತಿರುವ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ, ಈ ಘಟನೆಯ ವೀಡೀಯೋ ಬಾರಿ ವೈರಲ್ ಆಗಿದ್ದು, ಕರ್ತವ್ಯ ನೀರತ ಸಿಬ್ಬಂದ್ದಿಯ ಮೇಲಿನ ಹಲ್ಲೇಯನ್ನು ನೋಡಿ ಅಧಿಕಾರಿಗಳಿಗೆ ಈ ಸ್ಥೀತಿಯಾದರೇ ಇನ್ನೂ ಹೋರಾಟ ಮಾಡುವ ಜನಸಾಮಾನ್ಯರ ಗತಿ ಏನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ