ಮುಂದುವರೆದ ಉಪನ್ಯಾಸಕರ ಮುಷ್ಕರ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 22: ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರ 13ನೇ ದಿನಕ್ಕೆ ಮುಂದುವರೆದಿದೆ.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕ ಎಂ.ಶಿವಮೂರ್ತಿ ಮಾತನಾಡಿ ಅಲ್ಪ ಗೌರವಧನಕ್ಕೆ ಉಪನ್ಯಾಸಕರು ಸೇವೆ ಮಾಡುತ್ತಿದ್ದು ಸರಕಾರದಿಂದ ಯಾವುದೇ ಸೇವಾ ಭದ್ರತೆ, ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದರು. ಕಳೆದ 13ದಿನಗಳಿಂದ ಕಾಲೇಜು ತರಗತಿಗಳನ್ನು ಬಹಿಷ್ಕರಿಸಿ ಮಾಡುತ್ತಿರುವ ಮುಷ್ಕರಕ್ಕೆ ಸರಕಾರ ಯಾವುದೇ ಬೆಲೆ ಕೊಡದೇ ಕಡೆಗಾಣಿಸಿದೆ ಎಂದು ಕಿಡಿಕಾರಿದರು. ಸರಕಾರದ ನೂತನ ಶಿಕ್ಷಣ ನೀತಿ ಜಾರಿಗೆ ತಂದಿರುವುದರಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಉಪನ್ಯಾಸಕರ ಕೊರತೆಯಿಂದ ನೂತನ ಶಿಕ್ಷಣ ನೀತಿ ಹಳ್ಳ ಹಿಡಿಯುತ್ತಿದೆ, ಪ್ರಾಂಶುಪಾಲರು ಧರಣಿ ನಿರತ ಉಪನ್ಯಾಸಕರ ಮನವೋಲಿಸಿಲು ವಿಫಲರಾಗಿದ್ದು, ಬೇಡಿಕೆ ಈಡೆರುವವರೆಗೂ ಧರಣಿ ಹಿಂಪಡೆಯುವ ಮಾತೇ ಇಲ್ಲ ಎಂದರು.
ಈ ಸಂಧರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಅಮೀರ್ ಖಾನ್, ಅಂಜಿನಪ್ಪ, ಪಂಪಾನಾಯ್ಕ್, ರಂಗನಾಥ್, ಡಾ.ಗುರುಪ್ರಸಾದ್ ಹಾವಾಲ್ದಾರ್, ಹೆಚ್.ಎಂ.ಬಸವರಾಜು, ಪ್ರವೀಣ್ ಕುಮಾರ್, ಸರಿತಾ, ರವಿ ಮಾಲವಿ, ಸಿದ್ದೇಶ್, ಸೇರಿದಂತೆ ಇನ್ನಿತರರು ಇದ್ದರು.